ಚಿರು ಹುಟ್ಟಿದ ಹಬ್ಬದ ಬೆನ್ನಲ್ಲೇ ಕ್ಷತ್ರಿಯ ಸಿನಿಮಾದ ಟೀಸರ್ ಬಿಡುಗಡೆ..ವೈರಲ್ ಆಯ್ತು ಚಿರು ಟ್ರೈಲರ್ - Karnataka's Best News Portal

ಚಿರು ಹುಟ್ಟಿದ ಹಬ್ಬದ ಬೆನ್ನಲ್ಲೇ ಕ್ಷತ್ರಿಯ ಸಿನಿಮಾದ ಟೀಸರ್ ಬಿಡುಗಡೆ..ವೈರಲ್ ಆಯ್ತು ಚಿರು ಟ್ರೈಲರ್

ಚಿರಂಜೀವಿ ಸರ್ಜಾ ರವರ ಕ್ಷತ್ರಿಯ ಸಿನಿಮಾದ ಟೀಸರ್.ಕನ್ನಡ ಚಿತ್ರರಂಗ ಕಂಡಂತಹ ಯುವ ನಟ ಚಿರಂಜೀವಿ ಸರ್ಜಾ ರವರು ನಮ್ಮೆಲ್ಲರನ್ನು ಅಗಲಿರುವುದು ನಮ್ಮ ಮನ ಕಲಕುವ ವಿಷಯ. ಅವರ ಅಗಲಿಕೆಯ ನೋವು ನಮ್ಮ ಮನಸ್ಸಿನಲ್ಲಿ ಇನ್ನೂ ಮಾಸದಂತೆ ಉಳಿದಿದೆ. ಚಿರಂಜೀವಿ ಸರ್ಜಾ ರವರ ಹನ್ನೊಂದು ವರ್ಷದ ಸಿನಿಮಾ ಜರ್ನಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆ ಯಿಂದ ಪಾಲಿಸುತ್ತಿದ್ದರು. ಬಹುಶಹ ಚಿರಂಜೀವಿ ಸರ್ಜಾ ರವರಿಗೆ ಕ್ಷತ್ರಿಯ ಸಿನಿಮಾ ತಮ್ಮ ಕೊನೆಯ ಚಿತ್ರವೆಂದು ತಿಳಿದಿರಲಿಕ್ಕಿಲ್ಲ. ಚಿತ್ರರಂಗವು ಒಬ್ಬ ಹೃದಯ ಶೀಲ ನಾಯಕ ನಟನನ್ನು ಕಳೆದುಕೊಂಡಿದೆ. ಇವರ ನಟನೆಯ ಕೊನೆಯ ಚಿತ್ರವಾದ ಕ್ಷತ್ರಿಯ ಸಿನಿಮಾವನ್ನು ನೋಡಿದವರ ಕಣ್ಣಲ್ಲಿ ಕಣ್ಣೀರು ಬರುವುದಂತೂ ಖಂಡಿತ ನಿಜ.

ನೆನ್ನೆ ಅಷ್ಟೇ ಚಿರಂಜೀವಿ ಸರ್ಜಾ ರವರ ಹುಟ್ಟುಹಬ್ಬ ವಿದ್ದು ಅವರಿಲ್ಲದ ಮೊದಲನೇ ಹುಟ್ಟು ಹಬ್ಬ ಇದಾಗಿತ್ತು.ಮೇಘನಾ ರಾಜ್ ತುಂಬ ಗರ್ಭಿಣಿ ಆಗಿದ್ದು ಅವರ ಹೊಟ್ಟೆಯಲ್ಲಿ ಚಿರಂಜೀವಿ ಸರ್ಜಾ ಅವರು ಮತ್ತೆ ಹುಟ್ಟಿ ಬರಲಿ ಎಂದು ಎಲ್ಲರ ಆಶಯವಾಗಿದೆ. ಕ್ಷತ್ರಿಯ ಸಿನಿಮಾದ ಬಗ್ಗೆ ಹೇಳುವುದಾದರೆ ಎರಡು ಸಾವಿರದ ಹತ್ತೊಂಬತ್ತ ರಲ್ಲಿ ಆರಂಭವಾದ ಚಿತ್ರವು ಎರಡು ಸಾವಿರದ ಇಪ್ಪತ್ತಕ್ಕೆ ತೆರೆಕಾಣುತ್ತಿದೆ. ಬೇಸರದ ಸಂಗತಿ ಈ ಚಿತ್ರವನ್ನು ನೋಡಲು ಚಿರಂಜೀವಿ ಸರ್ಜ ಇಲ್ಲದಿರುವುದು. ಈ ಕ್ಷತ್ರಿಯ ಸಿನಿಮಾವೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಂಡು ಜನ ಮನ್ನಣೆಯನ್ನು ಪಡೆದು ಮೇಲೆ ಇರುವಂತಹ ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲಿ. ಮರೆಯಲಾಗದ ಮಾಣಿಕ್ಯ ಚಿರಂಜೀವಿ ಸರ್ಜಾ ರವರು ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದಂತೆ ಉಳಿದಿರುತ್ತಾರೆ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

[irp]