ಕನಸಿನಲ್ಲಿ ಪತ್ತೆಯಾದ ಶಿವಲಿಂಗ ಇದ್ದ ಪ್ರದೇಶ... - Karnataka's Best News Portal

ಒಂದು ಊರಿನಲ್ಲಿ ಒಬ್ಬ ರೈತನಿದ್ದ ಆತನು ಪರಮಶಿವನ ಭಕ್ತನಾಗಿದ್ದನು ಆತನಿಗೆ ಹುಟ್ಟಿದ ಮಗು ಕೂಡ ಶಿವಭಕ್ತನಾಗಿದ್ದ ನಿಜ ಹೇಳಬೇಕು ಅಂದರೆ ಶಿವನ ಕೃಪೆಯಿಂದ ಆ ಮಗು ಹುಟ್ಟಿತು ಎಂಬ ವಿಶ್ವಾಸ ಇಟ್ಟಿದ್ದರೆ ಅದೇ ನಡೆಯಿತು. ಆದರೆ ಆ ಮಗು ಸ್ವಲ್ಪ ಬೆಳೆದ ನಂತರ ಪ್ರತಿದಿನ ನಿರಂತರವಾಗಿ ಒಂದು ಕನಸು ಬರುತ್ತಿತ್ತು ಮುಂಜಾನೆ ಎದ್ದ ಕೂಡಲೇ ಆ ಕನಸಿನ ಬಗ್ಗೆ ಕುರಿತು ತನ್ನ ತಂದೆ-ತಾಯಿಗೆ ಹೇಳುತ್ತಿದ್ದನು ಅದೇನೆಂದರೆ ರಾತ್ರಿ ಒಂದು ವಿಗ್ರಹ ಕನಸಿನಲ್ಲಿ ಬಂದು ನಾನು ಇಲ್ಲಿದ್ದೇನೆ ನನ್ನನ್ನು ಹೊರತೆಗೆ ಎಂಬ ರೀತಿ ಕನಸು ಬರುತ್ತಿದೆ ಎಂದು ಹೇಳುತ್ತಾನೆ. ಒಂದು ಬಾರಿ ಅಲ್ಲ ಎರಡು ಬಾರಿಯಲ್ಲ ಪ್ರತಿದಿನ ಇದೇ ರೀತಿ ಕನಸು ನನಗೆ ಬರುತ್ತಿದೆ ಅಂತ ಹೇಳಿದಾಗ ಆತನ ತಂದೆ ಮಗುವಿನ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಊರಿನ ಜನರಿಗೆಲ್ಲ ಈ ವಿಷಯವನ್ನು ವಿವರಿಸುತ್ತಾ ಹೇಳುತ್ತಾನೆ.

ಊರಿನ ಜನರು ಕೂಡ ಇದನ್ನು ಕೇಳಿ ಸರಿ ನಿನ್ನ ಮಗುವಿಗೆ ಬರುತ್ತಿರುವ ಈ ಕನಸು ನಿಜ ಅಂತ ಅಂದುಕೊಳ್ಳೋಣ ಮೊದಲು ನಿನ್ನ ಜಮೀನಿನಲ್ಲಿ ಆ ಜಾಗದಲ್ಲಿ ವಿಗ್ರಹ ಇದೆಯೋ ಅಂತ ನೋಡೋಣ ಒಂದುವೇಳೆ ಅಲ್ಲಿ ವಿಗ್ರಹ ಸಿಕ್ಕಿದರೆ ಅದನ್ನು ತಂದು ಊರಿನ ಒಳಗಡೆ ಪ್ರತಿಷ್ಠಾಪನೆ ಮಾಡೋಣ ಒಂದು ವೇಳೆ ವಿಗ್ರಹ ಸಿಕ್ಕಿಲ್ಲ ಅಂದರೆ ಅದು ಸುಳ್ಳು ಅಂತ ತಿಳಿದುಕೊಳ್ಳೋಣ ಬಿಡು ಅಂತ ಹೇಳುತ್ತಾರೆ. ಮಗು ಹೇಳಿದ ರೀತಿಯೇ ರೈತನ ಜಮೀನಿಗೆ ಹೋಗಿ ಮಗು ಹೇಳಿದ ಪ್ರದೇಶವನ್ನು ತೋಡಿದಾಗ ಅಲ್ಲಿ ಏನೋ ಒಂದು ವಿಚಿತ್ರವಾದ ಶಬ್ದ ಕೇಳಿಸುತ್ತದೆ ಆಗ ಅಲ್ಲಿನ ವ್ಯಕ್ತಿಯೊಬ್ಬ ಅದನ್ನು ತೆಗೆದು ನೋಡಿದಾಗ ಅಲ್ಲಿ ಅದ್ಭುತವಾದ ಒಂದು ಶಿವಲಿಂಗ ಹಾಗೂ ಅಮ್ಮನವರ ವಿಗ್ರಹ ದೊರೆಯುತ್ತದೆ.

By admin

Leave a Reply

Your email address will not be published. Required fields are marked *