ಮೇಘನ ರಾಜ್ ರವರ ತಾಯ್ತನದ ಮಾತುಗಳು... - Karnataka's Best News Portal

ಜೀವನದಲ್ಲಿ ತಾಯ್ತನ ಎಂಬುದು ತುಂಬಾ ವಿಶೇಷವಾದಂತಹ ಒಂದು ದೈವ ಸೃಷ್ಟಿ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ರವರ ಹತ್ತು ವರ್ಷದ ಪ್ರೀತಿ ಮದುವೆಯ ಹೊಸ್ತಿಲೇರಿ ಜೀವನವನ್ನು ಪ್ರಾರಂಭಿಸಿದ್ದರು. ಕನ್ನಡ ಚಿತ್ರ ರಂಗದ ಒಂದು ಮುದ್ದಾದ ಜೋಡಿಯಾಗಿದ್ದರು ಆದರೆ ವಿಧಿ ಆಟದ ಮುಂದೆ ಯಾರ ಪ್ರೀತಿಗೂ ನೆಲೆಯಿಲ್ಲ. ಚಿರಂಜೀವಿ ಸರ್ಜಾ ಮತ್ತು ಮೇಘನ ರಾಜ್ ರವರ ಪ್ರೀತಿಯ ಕುರುಹಾಗಿ ಮೇಘರಾಜ್ ಅವರ ಹೊಟ್ಟೆಯಲ್ಲಿ ಒಂದು ಹೊಸಜೀದ ಸೃಷ್ಟಿ ಚಿಗುರೊಡೆದಿತ್ತು. ಆದರೆ ದೇವರು ಒಂದು ಕೊಟ್ಟು ಒಂದು ಕಿತ್ತುಕೊಂಡ ಎಂದು ಹೇಳಿದರೆ ತಪ್ಪಾಗಲಾರದು. ಮೇಘನಾ ರಾಜ್ ರವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಚಿರು ಮೇಘನಾ ರಾಜ್ ರವರ ಮಡಿಲಲ್ಲಿ ಮತ್ತೆ ಜನಿಸಿ ಅವರಿಗೆ ಸಂತೋಷವನ್ನು ತರಲಿ.

ಮೇಘನ ರಾಜ್ ರವರು ತಮ್ಮ ಬಾಲ್ಯದ ಫೋಟೋವನ್ನು ನೋಡುತ್ತಾ ಇವೆಲ್ಲವೂ ನನ್ನ ಅದ್ಭುತವಾದ ನೆನಪುಗಳು ಎಂದು ಹೇಳಿದ್ದಾರೆ. ನಾನು ಚಿರು ಅವರೊಂದಿಗೆ ಇರಲು ಸಾದ್ಯವಾಗದೆ ಇದ್ದರು ಅವರೊಂದಿಗೆ ಕಳೆದಂತಹ ಸಮಯ ನನ್ನ ಜೀವನದುದ್ದಕ್ಕೂ ಸ್ಪೂರ್ತಿಯನ್ನು ತುಂಬುತ್ತವೆ. ಹಾಗೆ ಮೇಘನಾ ರಾಜ್ ರವರು ತಮ್ಮ ತಾಯಿ ತನದ ಬಗ್ಗೆ ಮಾತನಾಡಿದ್ದು ಮಗುವನ್ನು ಚಿರುವಿನಂತೆ ಸೌಮ್ಯ ಸ್ವಭಾವವನ್ನು ಎಲ್ಲಾ ಗುಣಗಳು ಅವರಂತೆ ಇರುವಂತೆ ಬೆಳೆಸುತ್ತೇನೆ ಎಂದು ಹೇಳಿದ್ದಾರೆ. ಈ ಮಗು ಮೇಘನಾರಾಜ್ ರವರ ಕನಸು ಈ ಮಗುವಿನ ಬಗ್ಗೆ ಬಹಳಷ್ಟು ಕನಸನ್ನು ಇವರು ಹೊಂದಿದ್ದು ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ಮಾಡುವ ಬಹಳಷ್ಟು ಆಸೆಗಳನ್ನು ಹೊಂದಿದ್ದಾರೆ. ಚಿರಂಜೀವಿ ಸರ್ಜಾ ರವರು ಮತ್ತೆ ಹುಟ್ಟಿ ಬಂದು ಅವರ ಆಸೆಗಳು ಮತ್ತು ಕನಸುಗಳನ್ನು ನನಸು ಮಾಡಲಿ.

By admin

Leave a Reply

Your email address will not be published. Required fields are marked *