ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ ತುಂಬಾನೇ ಬಿಜಿ ಆಗಿರುವುದರಿಂದ ಸಮಯ ಎಷ್ಟು ಬೇಗ ಕಳೆದು ಹೋಗುತ್ತದೆ ಎಂಬುದೇ ನಮಗೆ ತಿಳಿಯುವುದಿಲ್ಲ. ಇನ್ನು ಉಳಿದ ಅಲ್ಪ ಸ್ವಲ್ಪ ಸಮಯದಲ್ಲಿಯೇ ರುಚಿಯಾದ ತಿಂಡಿಯನ್ನು ಹೇಗೆ ತಯಾರಿಸಬಹುದು ಎಂಬುದೇ ತಲೆನೋವಿನ ಪ್ರಶ್ನೆಯಾಗಿದೆ ಹಾಗಾಗಿ ಇಂದು ನಿಮಗೆ ಅತಿ ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಿ ಹೇಗೆ ಬೆಳಗಿನ ಉಪಹಾರ ತಯಾರಿಸಬಹುದು ಎಂಬುದನ್ನು ತಿಳಿಸುತ್ತೇವೆ. ಅದಕ್ಕೆ ಬೇಕಾಗಿರುವ ಪದಾರ್ಥ 6 ಬ್ರೇಡ್ ಸ್ಲೈಸ್ ಗಳನ್ನು ತೆಗೆದುಕೊಳ್ಳಿ ನಂತರ ಈ ಬ್ರೇಡ್ ಎಡ್ಜಸ್ ಗಳನ್ನು ಕಟ್ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿಂಗ್ ಬೌಲ್ ಗೆ 3 ಮೊಟ್ಟೆಯನ್ನು ಒಡೆದು ಹಾಕಿ ನಂತರ ಇದಕ್ಕೆ ಉಗುರು ಬೆಚ್ಚನೆಯ ಕಾಲು ಕಪ್ ಹಾಲನ್ನು ಹಾಕಿ. ನಂತರ ಇದಕ್ಕೆ ರೆಡ್, ಗ್ರೀನ್, ಮತ್ತು ಎಲ್ಲೋ ಕಲರ್ ಕ್ಯಾಪ್ಸಿಕಂ ಕಟ್ ಮಾಡಿ ಹಾಕಿ.
