ಡ್ರೈವಿಂಗ್ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ನಿಯಮ ಯಾವುದು ಅಂದರೆ ಸೀಟ್ ಬೆಲ್ಟ್ ಅನ್ನು ಹಾಕಿಕೊಳ್ಳುವುದು. ನಂತರ ಹ್ಯಾಂಡ್ ಬ್ರೇಕ್ ಅನ್ನು ಡೌನ್ ಮಾಡಬೇಕು ಕ್ಲಚ್ ಪ್ರೆಸ್ ಮಾಡಿ ಗೇರ್ ಅನ್ನು ನೀವು ನ್ಯೂಟ್ರಲ್ ನಲ್ಲಿ ಇಟ್ಟುಕೊಳ್ಳಬೇಕು. ಮೊದಲಿನ ಕಾಲಿನ ಕೆಳಗಿನ ಭಾಗದಲ್ಲಿ ಕಾಣುವುದು ಕ್ಲಚ್ ನಂತರ ಎರಡನೇಯದಾಗಿ ಬ್ರೇಕ್ ಕಾಣಿಸುತ್ತದೆ ಮೂರನೆಯದಾಗಿ ಎಕ್ಸಲೇಟರ್ ಕಾಣಿಸುತ್ತದೆ. ಕ್ಲಚ್ ಪ್ರೆಸ್‌ ಮಾಡುವುದಕ್ಕೆ ಎಡಗಾಲನ್ನು ಬಳಕೆ ಮಾಡಬೇಕು ಬ್ರೇಲ್ ಮತ್ತು ಎಕ್ಸಲೀಟರ್ ಪ್ರೆಸ್ ಮಾಡುವುದಕ್ಕೆ ಬಲಗಾಲನ್ನು ಉಪಯೋಗ ಮಾಡಿ. ಗೇರ್ ಅನ್ನು ನೋಡುವುದಾದರೆ ಇದರಲ್ಲಿ ಫಸ್ಟ್ ಗೇರ್, ಸೆಕೆಂಡ್ ಗೇರ್, ಥರ್ಡ್ ಗೇರ್, ಪೋರ್ಥ್ ಗೇರ್, ಫಿಫ್ತ್ ಗೇರ್ ಮತ್ತು ಕೊನೆಯದಾಗಿ ರಿವರ್ಸ್ ಗೇರ್ ಹೀಗೆ ಆರು ಮಾದರಿಯ ಗೇರ್ ಗಳನ್ನು ನೀವು ಕಾರ್ ನಲ್ಲಿ ಕಾಣಬಹುದು.


ಮೊದಲು ಕ್ಲಚ್ ಅನ್ನು ಪ್ರೆಸ್ ಮಾಡಿ ಲೆಫ್ಟ್ ಸೈಡ್ ಹೋದಾಗ ಫಸ್ಟ್ ಗೇರ್ ಹಾಕಬೇಕಾಗುತ್ತದೆ, ಸ್ಟ್ರೈಟ್ ಬಂದರೆ ಸೆಕೆಂಡ್ ಗೇರ್, ರೈಟ್ ಸೈಡ್ ಹೋಗಿ ಮುಂದೆ ಹಾಕಿದರೆ ಥರ್ಡ್‌ ಗೇರ್, ಸ್ವಲ್ಪ ಹಿಂದೆ ಸ್ಟ್ರೈಟ್ ಬಂದರೆ ಫೋರ್ತ್ ಗೇರ್, ರೈಟ್ ಸೈಡ್ ಹೋಗಿ ಮುಂದೆ ಬಂದರೆ ಫಿಫ್ತ್ ಗೇರ್ ರೈಟ್ ಸೈಡ್ ಹೋಗಿ ಹಿಂದೆ ಬಂದರೇ ರಿವರ್ಸ್ ಗೇರ್ ಇದಿಷ್ಟು ಬ್ರೇಕ್, ಎಕ್ಸಲೀಟರ್ ಮತ್ತು ಕ್ಲಚ್ ಬಗ್ಗೆ ಇರುವ ಬೇಸಿಕ್ ಇಂಫರ್ಮೇಶನ್. ನೀವು ಕಾರ್ ಅನ್ನು ಸ್ಟಾರ್ಟ್ ಮಾಡಬೇಕು ಅಂದರೆ ಮೊದಲು ಕ್ಲಚ್ ಅನ್ನು ಪ್ರೆಸ್ ಮಾಡಿ ಗೇರ್ ನ್ಯೂಟ್ರಲ್ ನಲ್ಲಿ ಇದೆಯಾ ಅಂತ ನೋಡಿಕೊಳ್ಳಿ ನಂತರ ಗಾಡಿಯನ್ನು ಕೀ ಹಾಕಿ ಸ್ಟಾರ್ಟ್ ಮಾಡಿದಾಗ ಇಂಜಿನ್ ಸ್ಟಾರ್ಟ್ ಆಗುತ್ತದೆ ಆಗ ನಿಧಾನವಾಗಿ ಕ್ಲಚ್ ಪ್ರೆಸ್ ಮಾಡಿ ಎಕ್ಸಲೀಟರ್ ಪ್ರೆಸ್ ಮಾಡಿದಾಗ ಗಾಡಿ ನಿಧಾನವಾಗಿ ಮುಂದೆ ಹೋಗುತ್ತದೆ.

By admin

Leave a Reply

Your email address will not be published. Required fields are marked *