ನಿಮ್ಮ ಉಗುರುಗಳಿಂದ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೀಗೆ ತಿಳಿಯಹುದು ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ನೀವು ಎಷ್ಟು ಆರೋಗ್ಯವಂತರು ಎಂದು ನಿಮ್ಮ ಉಗುರುಗಳಿಂದ ತಿಳಿಯಬಹುದು ಅದು ಹೇಗೆಂದರೆ ಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ನಮಗೆ ಹಲವಾರು ರೀತಿಯ ಮುನ್ಸೂಚನೆ ಗಳನ್ನು ನೀಡುತ್ತದೆ. ದೇಹದಲ್ಲಿ ಆಗುವ ಏರು ಪೇರುಗಳಿಗೆ ನಮ್ಮ ಶರೀರದ ಅಂಗಗಳು ವಿವಿಧ ರೀತಿಯಲ್ಲಿ ನಮಗೆ ಮಾಹಿತಿಯನ್ನು ನೀಡುತ್ತದೆ ಇದನ್ನು ತಿಳಿದು ಕೊಂಡು ನಾವು ಸ್ವಲ್ಪ ಎಚ್ಚರಿಕೆ ವಹಿಸಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ನಮ್ಮ ಉಗುರಿನಲ್ಲಿರುವ ಅರ್ಧ ಚಂದ್ರಾಕೃತಿಯು ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತಾ. ನಿಮ್ಮ ಉಗುರಿನಲ್ಲಿ ಅರ್ಧ ಚಂದ್ರಾಕೃತಿಯ ದೊಡ್ಡದಾಗಿರುವಂತಹ ಚಿಹ್ನೆ ಕಾಣಿಸಿಕೊಂಡರೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿದೆ ಅಂತ ಅರ್ಥ.


ನಿಮ್ಮ ಉಗುರಿನಲ್ಲಿ ಅರ್ಧ ಚಂದ್ರ ಕೃತಿಯು ಚಿಕ್ಕದಾಗಿದ್ದರೆ ರೋಗ ನಿರೋಧಕ ಶಕ್ತಿಯು ಕಡಿಮೆ ಇದೆ ಎಂದರ್ಥ ಇದರಿಂದ ಪಚನಕ್ರಿಯೆ ನಿಧಾನವಾಗಿ ಆಗುತ್ತಿದೆ ಅಂತ ಅರ್ಥ. ಚಂದ್ರಕಾರದ ಮಚ್ಚೆ ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿಗಳು ದುರ್ಬಲವಾಗಿದ್ದು ದಪ್ಪ ಆಗುವುದು ಅಥವಾ ಕೂದಲು ಉದುರುವುದು ಹೆಚ್ಚಾಗುತ್ತದೆ. ಹತ್ತು ಕೈ ಬೆರಳುಗಳಲ್ಲಿ ಕನಿಷ್ಟ ಎಂಟು ಕೈ ಬೆರಳುಗಳಲ್ಲಿ ಚಂದ್ರಕೃತಿ ಇರಬೇಕು ಇಲ್ಲವಾದರೆ ವಿಟಮಿನ್ ಎ ಮತ್ತು ಅಗತ್ಯ ಪೋಷಕಾಂಶಗಳ ಕೊರತೆ ಇದೆ ಎಂದು ಅರ್ಥವನ್ನು ನೀಡುತ್ತದೆ. ನಿಮ್ಮ ಕೈ ಬೆರಳಿನ ಉಗುರಿನ ಮೇಲೆ ಬಿಳಿ ಮಚ್ಚೆ ಒಂದು ಬಾರಿ ಕಾಣಿಸುತ್ತದೆ ಮತ್ತೊಂದು ಬಾರಿ ಮಾಯವಾಗುತ್ತ ಇದ್ದರೆ ಇಂತಹ ಸಮಸ್ಯೆ ಹೊಂದಿರುವವರು ದೇಹ ಕೇಳುವಷ್ಟು ಆಹಾರವನ್ನು ನೀವು ಸೇವಿಸುತ್ತಿಲ್ಲ ಎಂದು ಪರಿಗಣಿಸ ಬೇಕಾಗುತ್ತದೆ.

By admin

Leave a Reply

Your email address will not be published. Required fields are marked *