ಮೊಟ್ಟೆ ಕದಿಯಲು ಬರುತ್ತಿದ್ದ ಹಾವಿಗೆ ಸರಿಯಾಗಿ ಪಾಠ ಕಲಿಸಿದ ಕೋಳಿ ವಿಡಿಯೋ ಯಪ್ಪಾ ವೈರಲ್..! - Karnataka's Best News Portal

ನಮಸ್ತೆ ಗೆಳೆಯರೇ ಹಾವು ಕಂಡರೆ ಹೇಗಿರಬೇಡಾ ಪರಿಸ್ಥಿತಿ ನೀವೇ ಯೋಚಿಸಿ ಅವುಗಳನ್ನು ಕಂಡರೆ 5 ಅಥವಾ ಮಾರು ದೂರ ಓಡುವುದು ಸಹಜ ಆದರೆ ಇಲ್ಲಿ ಹೆಬ್ಬಾವಾದರೆ ಕಥೆ ಮುಗಿದೇ ಹೋಯಿತು ಎನಿಸಿ ಬಿಡುವುದಿಲ್ಲ ಇಂತ ಭಯಂಕರ ಹಾವಿನ ಮೇಲೆ ಒಂದು ಸಣ್ಣ ಪಕ್ಷಿ ತಿರುಗಿ ಬಿದ್ದರೆ ಹೇಗಿರಬಹುದು ಈ ವಿಚಾರ ತಿಳಿದರೆ ನೀವು ಏನೆನ್ನಬಹುದು ಎಂಬುದನ್ನು ಮರೆಯದೇ ಹೇಳಿ ಆದರೆ ಇಂತಹುದೊಂದು ಘಟನೆ ನಿಜವಾಗಿಯೂ ನಡೆದಿದ್ದು ತಾನಿಟ್ಟ ಮೊಟ್ಟೆಗಳನ್ನು ಕಾಪಾಡುವ ಸಲುವಾಗಿ ಒಂದು ಪಕ್ಷಿ ಒಂದು ಹೆಬ್ಬಾವಿಗೇ ಸರಿಯಾದ ಪಾಠವನ್ನು ಕಲಿಸಲು ಮುಂದಾಗಿದ್ದು ಎಲ್ಲರ ಗಮನ ಸೆಳೆದಿದೆ.ಇಂತಹುದೊಂದು ಘಟನೆ ನಡೆದಿರುವುದು ಅಮೆರಿಕಾದ ಟೆಕ್ಸಾಸ್ ನಲ್ಲಿ ಸಾರಾ ಎಲಿಸನ್ ಎನ್ನುವವರ ಮನೆಯಲ್ಲಿ ಕೋಳಿಗಳನ್ನು ಸಾಕಿದ್ದು ಅವಕ್ಕಾಗಿಯೇ ಪ್ರತ್ಯೇಕವಾದ ಸ್ಥಳವನ್ನು ಕೂಡಾ ಮಾಡಲಾಗಿದೆ ಆದರೆ ಕೋಳಿ ಮೊಟ್ಟೆಗಳನ್ನು ಪ್ರತಿ ದಿನ ಕೂಡಾ ಹಾವೊಂದು ಕದ್ದು ಒಯ್ಯುತ್ತಿತ್ತು ಸಾರಾ ಎಲಿಸನ್ ತಮ್ಮ ಕೋಳಿಗೆ ಬರ್ನಾಡೆಟ್ ಎಂದು ಹೆಸರನ್ನು ಕೂಡಾ ಇಟ್ಟಿದ್ದಾರೆ ಈ ಬಾರಿ ಬರ್ನಾಡೆಟ್ ಅವರು ಮೊಟ್ಟೆಗಳನ್ನು ಇಟ್ಟಾಗ ತಾನು ಮೊಟ್ಟೆಗಳ ಮೇಲೆ ಕುಳಿತು ಅವುಗಳಿಗೆ ಕಾವನ್ನು ನೀಡುವಾಗ ಒಂದು ರ್ಯಾಟಲ್ ಸ್ನೇಕ್ ಮೊಟ್ಟೆಗಳನ್ನು ಕದಿಯುವ ಆಸೆಯಿಂದ ಅಲ್ಲಿಗೆ ಬಂದಿದೆ ಬಂದ ಹಾವು ಬರ್ನಾಡೆಟ್ ಮೊಟ್ಟೆಗಳ ಮೇಲೆಯೇ ಇರುವುದನ್ನು ಕೂಡಾ ಲೆಕ್ಕಕ್ಕೆ ತೆಗೆದುಕೊಳ್ಳದೇ ಅದನ್ನು ನಿರ್ಲಕ್ಷ್ಯ ಮಾಡಿ ಮೊಟ್ಟೆಗಳನ್ನು ಕದಿಯಲು ಮುಂದಾಗಿದೆ. ಹಾವು ನಿಧಾನವಾಗಿ ಮೊಟ್ಟೆಗಳ ಮಧ್ಯಕ್ಕೆ ಹರಿದು ಹೋಗಿದೆ ಆದರೆ ಬರ್ನಾಡೆಟ್ ಕೂಡಾ


ಈ ಬಾರಿ ಎಲ್ಲಾ ಸಿದ್ಧತೆ ಮಾಡಿಕೊಂಡೇ ಕುಳಿತಿತ್ತು ಅದು ಹಾವು ಬಂದರೂ ಕೂಡಾ ಮೊಟ್ಟೆಗಳ ಮೇಲಿನಿಂದ ಎದ್ದು ಓಡದೆ ಭಂಡ ಧೈರ್ಯವನ್ನು ತೋರುತ್ತಾ ಹಾವಿಗೆ ಪಾಠ 9ಕಲಿಸಲು ನಿರ್ಧರಿಸಿ ಕುಳಿತೇ ಇತ್ತು ಕೋಳಿಯ ಕೆಳಗೆ ಇದ್ದ ಮೊಟ್ಟೆಗಳ ಬಳಿ ಬಂದ ಹಾವು ಕೋಳಿಯ ಕೆಳಗೆಇರಬೇಕಾದ ಪರಿಸ್ಥಿತಿ ಎದುರಾಯಿತು ಬರ್ನಾಡೆಟ್ ಯಾವುದೇ ಕಾರಣಕ್ಕೂ ಹಾವಿಗೆ ಹೆ ದರಿ ಹೋಗಬಾರದು ಎಂದು
ನಿರ್ಧರಿಸಿದಂತೆ ಮೊಟ್ಟೆಗಳು ಮತ್ತು ಹಾವಿನ ಮೇಲೆ ಹಾಗೇ ಕುಳಿತು ಬಿಟ್ಟಿದೆ‌.ಆ ವೇಳೆಗೆ ಅಲ್ಲಿಗೆ ಬಂದ ಸಾರಾ ಈ ವಿಚಿತ್ರವಾದ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ ಅನಂತರ ಅವರು ತಮ್ಮ ಮೊಬೈಲ್ ತೆಗೆದು ಅದರಲ್ಲಿ ಹಾವಿನ ಮೇಲೆ ಕುಳಿತು ಧೈರ್ಯ ಪ್ರದರ್ಶನ ಮಾಡುತ್ತಿದ್ದ ತಮ್ಮ ಬರ್ನಾಡೆಟ್ ಕೋಳಿಯ ವೀಡಿಯೋವನ್ನು ಮಾಡಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಂಡಿದ್ದಾರೆ ಸಾರಾ ಶೇರ್ ಮಾಡಿದ ವೀಡಿಯೋ ಬಹಳ ಬೇಗೆ ವೈರಲ್ ಆಗಿ ಅನೇಕ ಪ್ರತಿಕ್ರಿಯೆಗಳು ಕೂಡಾ ಬಂದಿವೆ.ಹಾವಿನ ಮೇಲೆ ಕುಳಿತ ತನ್ನ ಕೋಳಿಯ ವೀಡಿಯೋ ಶೇರ್ ಮಾಡಿಕೊಂಡ ಸಾರಾ ಅದರ ಶೀರ್ಷಿಕೆಯಲ್ಲಿ ಇದು ನಿಜವಾಗಿಯೂ ಒಂದು ಹೇಳೋದಿಕ್ಕೆ ಅಸಾಧ್ಯವಾದಂತಹ ಪರಿಸ್ಥಿತಿ ಇದನ್ನು ಹೇಗೆ ನಿಭಾಯಿಸುವುದು ಎನ್ನುವುದೇ ನನಗೆ ತಿಳಿಯುತ್ತಿಲ್ಲ. ಈ ಎರಡೂ ಜೀವಗಳಿಗೆ ತೊಂದರೆಯಾಗದಂತೆ ಹೇಗೆ ಇವುಗಳನ್ನು ರಕ್ಷಣೆ ಮಾಡುವುದು ಎಂದು ಆಕೆ ಬರೆದುಕೊಂಡು ಫೇಸ್ ಬುಕ್ ನಲ್ಲಿ ಘಟನೆಯ ಸಂಪೂರ್ಣ ವಿವರವನ್ನು ಆಕೆ ಬರೆಯುವ ಮೂಲಕ ನೆಟ್ಟಿಗರಿಗೆ ವಿಚಾರವನ್ನು ತಿಳಿಸಿದ್ದಾರೆ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಕೋಳಿಯ ಧೈರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ನಮ್ಮ ಒಂದು ಲೇಖನಿಗೆ ಲೈಕ್ ಕೊಡಿ ಶೇರ್ ಮಾಡಿ  ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *