ಬೆಂಗಳೂರು ಆರ್ ಆರ್ ನಗರ ಚುನಾವಣಾ ಪ್ರಚಾರಕ್ಕೆ ದರ್ಶನ್ ಪಡೆದ ಹಣ ಎಷ್ಟು,ನೀವು ಅಂದುಕೊಂಡಿದ್ದೆ ಸುಳ್ಳು..! - Karnataka's Best News Portal

ನಮಸ್ತೆ ಗೆಳೆಯರೇ ನಾವು ನೀವು ಅದು ನೋಡುತ್ತಿದ್ದಂತ ಮುಖ್ಯ ಚುನಾವಣೆಯು ಅಂತೂ ರಾಜ್ಯದ ವಿಧಾನಸಭಾ ಉಪಚುನಾವಣೆ ಶಿರಾ ಹಾಗೂ ರಾಜರಾಜೇಶ್ವರಿ ನಗರ 2 ಕ್ಷೇತ್ರದಲ್ಲಿ ಯಶಸ್ವಿಯಾಗಿದೆ ಹಾಗೂ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕೊರೊನಾ ಕಾರಣದಿಂದಾಗಿ ಶೇಕಡವಾರು ಮತದಾನ ಕಡಿಮೆಯಾಗಿದೆ ಸದ್ಯ 2 ಕ್ಷೇತ್ರದ ಮತದಾರರ ತೀರ್ಪು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಇನ್ನು 6 ದಿನಗಳಲ್ಲಿ ಸ್ಪರ್ಧಿಗಳ ಹಣೆಯ ಬರಹ ಗೊತ್ತಾಗುತ್ತದೆ
ಹಾಗೂ ರಾಜರಾಜೇಶ್ವರಿ‌ ನಗರದ ವಿಚಾರಕ್ಕೆ ಬಂದರೆ ಇಂದು ಬಹಳಷ್ಟು ಸೆಲಿಬ್ರೆಟಿಗಳು ಸೇರಿದಂತೆ ರಾಜಕೀಯ ನಾಯಕರು ಬಂದು ಮತ ಚಲಾವಣೆ ಮಾಡಿದರು. ನಿಜ್ವಾಗ್ಲೂ ದರ್ಶನ್ ಅವರು ನೆನಪಿರಲಿ ಪ್ರೇಮ್ ಕುಟುಂಬ ಅಮೂಲ್ಯ ಜಗದೀಶ್ ಕುಟುಂಬ ಹೀಗೆ ಬಹಳಷ್ಟು ಸೆಲಿಬ್ರೆಟಿಗಳು ರಾಜರಾಜೇಶ್ವರಿ ನಗರದಲ್ಲಿ ನೆಲೆಸಿದ್ದು ಇಂದು ಮತದಾನ ಮಾಡಿ ಇತರರಿಗೂ ಮತದಾನ ಮಾಡುವಂತೆ ಹೇಳಿದರು ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ನೇರ ಹಣಾಹಣಿ ಎಂಬ ಮಾತುಗಳು ಕೇಳಿಬರುತ್ತಿದ್ದು ದರ್ಶನ್ ಅವರು ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದು ಮುನಿರತ್ನ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು ಎನ್ನುವ ಮಾತಿದೆ.
ಇನ್ನು ದರ್ಶನ್ ಅವರು ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದೂ ಉಂಟು ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಮಾತ್ರ ದರ್ಶನ್ ಅವರ ವಿಚಾರವಾಗಿ ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಜಾಣ್ಮೆಯ ರಾಜಕಾರಣ ಮಾಡಿದರು ನಿಜ್ವಾಗ್ಲೂ ನಾನು ಸಹ ದರ್ಶನ್ ಅವರ ದೊಡ್ಡ ಅಭಿಮಾನಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಚಾರ ಮಾಡುವ ಹಕ್ಕಿದೆ ಅದೇ ರೀತಿ ದರ್ಶನ್ ಅವರು ಮಾಡಿದ್ದಾರೆ ಎಂದರು ಸಾಮಾಜಿಕ ಜಾಲತಾಣದಲ್ಲಿ ಕೆಲವರು ದರ್ಶನ್ ಅವರು ಹಣ ಪಡೆದು ಚುನಾವಣಾ ಪ್ರಚಾರ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು ಆದರೆ ಅಸಲಿ ವಿಚಾರ ಬೇರೆಯೇ ಇದೆ ಅಷ್ಟಕ್ಕೂ ದರ್ಶನ್ ಅವರು ಮುನಿರತ್ನ ಪರವಾಗಿ ಎಷ್ಟು ಹಣ ಪಡೆದರು ಮಾಹಿತಿ ಇಲ್ಲಿದೆ ನೋಡಿ


ಕೆಲವರು ತಿಳಿದಿರುವಂತೆ ದರ್ಶನ್ ಅವರು ಚುನಾವಣಾ ಪ್ರಚಾರಕ್ಕೆ ಎಂದೂ ಸಹ ಹಣ ಪಡೆಯೋದಿಲ್ಲ ದರ್ಶನ್ ಅವರು ಇದುವರೆಗೂ ಚುನಾವಣಾ ಪ್ರಚಾರಕ್ಕೆ ಯಾರ ಬಳಿಯೂ ಹಣ ಪಡೆದಿಲ್ಲ ಅವರು ಯಾವ ಪಕ್ಷದ ಪರವೂ ಪ್ರಚಾರ ಮಾಡುವುದಿಲ್ಲ‌ ಸಮಯದಲ್ಲಿ ಪಕ್ಷದ ಪರ ಬಾವುಟಗಳನ್ನು ಸಹ ಹಿಡಿಯುವುದಿಲ್ಲ ಅವರ ಪ್ರಚಾರ ಏನಿದ್ದರೂ ಅವರ ಸ್ನೇಹಿತರಿಗಾಗಿಯಷ್ಟೇ ವ್ಯಕ್ತಿ ನೋಡಿ ಮಾತ್ರ ದರ್ಶನ್ ಅವರು ಪ್ರಚಾರ ಮಾಡುತ್ತಾರೆ ಅದು ಸಹ ಯಾವುದೇ ಹಣವನ್ನು ಪಡೆಯದೆ ಬದಲಿಗೆ ಆ ವ್ಯಕ್ತಿಯಿಂದ ದರ್ಶನ್ ಅವರು ಲೆಟರ್ ಒಂದನ್ನು ಪಡೆಯುತ್ತಾರೆ ಆಶ್ಚರ್ಯವಾದರೂ ಇದು ಸತ್ಯದರ್ಶನ್ ಅವರು ಪ್ರಚಾರ ಮಾಡಿದ ವ್ಯಕ್ತಿ ಗೆದ್ದರೆ ಆ ವ್ಯಕ್ತಿಯಿಂದ ಲೆಟರ್ ಒಂದನ್ನು ಪಡೆಯುತ್ತಾರೆ ಅದಕ್ಕೆ ಕಾರಣವೂ ಉಂಟು ದರ್ಶನ್ ಅವರ ಮನೆಯ ಮುಂದೆ ಸಾಕಷ್ಟು ಜನ ಸಹಾಯ ಕೇಳಿಕೊಂಡು ಬರುವುದೂ ಉಂಟು ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ನೆರವು ನೀಡುವಂತೆ ದರ್ಶನ್ ಅವರ ಬಳಿ‌ ಮನವಿ ಮಾಡಿಕೊಳ್ಳುತ್ತಾರೆ ಅದರಲ್ಲೂ ದೊಡ್ಡ ದೊಡ್ಡ ಖಾಯಿಲೆಗಳಿಂದ ಬಳಲುವವರಿಗೆ ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಛವನ್ನು ದರ್ಶನ್ ಅವರು ನೀಡುತ್ತಾರೆ ಅಂತಹ ಸಂದರ್ಭಗಳಲ್ಲಿ ಶಾಸಕರ ಲೆಟರ್ ಇದ್ದರೆ ಬಡವರಿಗೆ ಆಸ್ಪತ್ರೆಗಳಲ್ಲಿ 30 ರಿಂದ 40 ಸಾವಿರ ಖಡಿತಗೊಳ್ಳಲಿದೆ ಎಂಬ ಮಾತಿದೆ ಅದನ್ನು ಬಳಸಿಕೊಂಡು ಮಿಕ್ಕ ಖರ್ಚನ್ನು ದರ್ಶನ್ ಅವರು ಭರಿಸಿ ಬಡವರಿಗೆ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದಾರೆ ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಇತರರಿಗೆ ನೆರವಾಗುವುದನ್ನೇ ನೋಡುವ ದರ್ಶನ್ ಅವರು ಯಾವುದೇ ಚುನಾವಣೆಗೆ ಯಾರ ಬಳಿಯೂ ಹಣ ಪಡೆಯೋದಿಲ್ಲ ಎಂಬುದು ಈ ಮೂಲಕವಾದರು ಎಲ್ಲರಿಗೂ ತಿಳಿಯುವಂತಾಗಲಿ ಬಹಳಷ್ಟು ವರ್ಷಗಳಿಂದ ಯಾವುದೇ ಪ್ರಚಾರ ಪಡೆಯದೇ ಬಡವರಿಗೆ ನೆರವಾಗುತ್ತಾ ಬರುತ್ತಿರುವ ದರ್ಶನ್ ಅವರ ಗುಣ ನಿಜಕ್ಕೂ ಮೆಚ್ಚುವಂತದ್ದು ನಮ್ಮ ಕರುನಾಡಿನ ಹೆಮ್ಮೆಯ ದರ್ಶನ್ ಅಣ್ಣನ ಅಭಿಮಾನ ಅವರ ಗೌರವ ಇದರಿಂದ ಇನ್ನೂ ಹೆಚ್ಚಲಿದೆ ಯಾವತ್ತಿದ್ರೂ ನಮ್ಮ ದರ್ಶನ್ ಅಣ್ಣ ನಿಗೆ ಸರಿಸಾಟಿ ಯಾರು ಇಲ್ಲ ಜೈ ಡಿ ಬಾಸ್. ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *