ಸಕತ್ ಪೇಮಸ್ ಆಗುತ್ತಿರುವ ಈ ಕಿರಣ್ ರಾಜ್ ಅಷ್ಟಕ್ಕೂ ಯಾರು ಗೊತ್ತಾ..ಇವರ ಬ್ಯಾಕ್ ಗ್ರೌಂಡ್ ನೋಡಿ ಶಾಕ್..! - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹಕನ್ನಡ ಕಿರುತೆರೆಯಲ್ಲಿ ಸದ್ಯ ವಿಭಿನ್ನ ರೀತಿಯ ಕತೆಯ ಮೂಲಕ ಜನಮನ್ನಣೆ ಗಳಿಸಿರುವ ಧಾರಾವಾಹಿ ಎಂದರೆ ಅದು ಕನ್ನಡತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ‌ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯನ್ನು ಹುಡುಗರು ಸಹ ನೋಡಲು ಶುರು ಮಾಡಿದ್ದಾರೆ ಅನ್ನೋ ಮಾತಿದೆ ಇನ್ನು ಧಾರಾವಾಹಿಯಲ್ಲಿ ಮನರಂಜನೆ ಮಾತ್ರವಲ್ಲದೇ ಕನ್ನಡ ಶಬ್ಧಗಳ ಜ್ಞಾನವನ್ನೂ ಹಂಚುತ್ತಿರುವುದು ಒಳ್ಳೆಯ ಹಾಗೂ ಮೆಚ್ಚುವ ವಿಚಾರವಾಗಿದೆ ಪ್ರತಿದಿನವೂ ಕನ್ನಡದ ಹೊಸ ಹೊಸ ಪದಗಳು ಅಥವಾ ಪ್ರತಿದಿನ ಬಳಸುವ ಪದಗಳ ಅರ್ಥ ತಿಳಿಸುತ್ತಿರುವ ಪ್ರಯತ್ನ ಬಹಳ ಉಪಯುಕ್ತವಾಗಿದೆ ಇನ್ನು ಧಾರಾವಾಹಿಯ ಕಲಾವಿದರ ವಿಚಾರಕ್ಕೆ ಬಂದರೆ ನಾಯಕನಟನಾಗಿ ಕಾಣಿಸಿಕೊಂಡಿರುವುದು ನಟ ಕಿರಣ್ ರಾಜ್ ಆದರೆ ನಾಯಕಿಯಾಗಿ ಪುಟ್ಟ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಇಬ್ಬರೂ ಸಹ ಸದ್ಯ ಕನ್ನಡ ಧಾರಾವಾಹಿ ಪ್ರಿಯರ ನೆಚ್ಚಿನ ಜೋಡಿಗಳಲ್ಲಿ‌ ಒಂದಾಗಿದೆ ಇನ್ನು ನಟ ಕಿರಣ್ ರಾಜ್ ಅವರ ವಿಚಾರಕ್ಕೆ ಬಂದರೆ ಕಿನ್ನರಿ ಎನ್ನುವ ಧಾರಾವಾಹಿ‌ ಮೂಲಕ ಕಿರುತೆರೆಗೆ ಕಾಲಿಟ್ಟ ಕಿರಣ್ ರಾಜ್ ನಂತರ ಹಿಂದಿ ಶೋಗಳಲಿ ಸಿನಿಮಾದಲ್ಲಿಯೂ ಕಾಣಿಸಿಕೊಂಡರು ಸದ್ಯ ಇದೀಗ ಮತ್ತೆ ಕಿರುತೆರೆಯ ಕಡೆ ಮುಖ ಮಾಡಿದ್ದು ಕನ್ನಡತಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದಲ್ಲಿಯೇ ಯಶಸ್ಸು‌ ಪಡೆದರುಸಾಮಾಜಿಕ ಜಾಲತಾಣದಲ್ಲಿ ಕಿರಣ್ ರಾಜ್ ಹಾಗೂ ದರ್ಶನ್ ಅವರ ತಾಯಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ ಅಷ್ಟಕ್ಕೂ ದರ್ಶನ್ ಅವರಿಗೂ ಕಿರಣ್ ಅವರಿಗೂ ಏನು ಸಂಬಂಧ ಎಂದು ಬಹಳಷ್ಟು ಕುತೂಹಲವಂತೂ ಇದ್ದೇ ಇದೆ ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ ಹೌದು ಕಿರಣ್ ಅವರು ಮೂಲತಃ ಮೈಸೂರಿನವರು ಹುಟ್ಟಿ ಬೆಳೆದಿದ್ದು ಓದಿದ್ದು ಎಲ್ಲವೂ ಮೈಸೂರಿನಲ್ಲಿಯೇ ಇನ್ನು ದರ್ಶನ್ ಅವರ ತಾಯಿಯೂ ಮೈಸೂರಿನಲ್ಲಿಯೇ ಇರುವುದು ಆಗಾಗ ಭೇಟಿ ಆಗುತ್ತಲೇ ಇರುತ್ತಾರೆ ಇದಕ್ಕೆ ಕಾರಣ ದರ್ಶನ್ ಅವರ ತಾಯಿ ಕಿರಣ್ ಅವರನ್ನು ತಮ್ಮ ಮಗನಂತೆಯೇ ನೋಡುತ್ತಾರೆ ನಿಜ ಕಿರಣ್ ಅವರ ಧಾರಾವಾಹಿಯನ್ನು ಮೆಚ್ಚಿ ಒಮ್ಮೆ ಫೋನ್ ಮಾಡಿ ಕಿರಣ್ ಗೆ ಶುಭ ಹಾರೈಸಿದರು ನಂತರ ಕಿರಣ್ ಅವರನ್ನು ಮನೆಗೆ ಬಾ ಎಂದು ಆಹ್ವಾನಿಸಿ ತಮ್ಮ ಮಗನಂತೆ ಕಂಡರು ಇದೀಗ ಮೀನಾಮ್ಮ ಕಿರಣ್


ಅವರಿಗೆ ಒಂದು ರೀತಿ ಸಿನಿಮಾ ಜೀವನದ ಗೈಡ್ ಆಗಿದ್ದಾರೆ ಎಂದರೂ ತಪ್ಪಾಗಲಾರದು ಒಬ್ಬ ಸ್ಟಾರ್ ನಟನ ಅಮ್ಮ ಎನ್ನುವ ಯಾವುದೇ ಅಹಂಕಾರ ವಿಲ್ಲದ ಮೀನಾಮ್ಮ ಕಿರಣ್ ಅವರಿಗೆ ಪ್ರತಿದಿನವೂ ಫೋನ್ ಮಾಡಿ ಧಾರಾವಾಹಿಯಲ್ಲಿ ಚೆನ್ನಾಗಿ ಅಭಿನಯಿಸಿದ್ದನ್ನು ಜೊತೆಗೆ ಸ್ವಲ್ಪ ಏರು ಪೇರಾದರೂ ಅದನ್ನು ಸಹ ತಿಳಿಸಿ ತಿದ್ದುಕೊಳ್ಳುವಂತೆ ತಿಳಿಸುತ್ತಾರೆ ಈಗಲೂ ಕಿರಣ್ ಮೈಸೂರಿಗೆ ಹೋದಾಗಲೆಲ್ಲಾ ಮೀನಾಮ್ಮನನ್ನು ಭೇಟಿಯಾಗದೇ ಬರುವಂತಿಲ್ಲ ಅವರು ಮಾತ್ರವಲ್ಲ ದಿನಕರ್ ಅವರೂ ಸಹ ಕಿರಣ್ ಅವರನ್ನು ತಮ್ಮನಂತೆಯೇ ನೋಡುತ್ತಾರೆ ಸಿನಿಮಾಗಳ ವಿಚಾರದಲ್ಲಿಯೂ ದಿನಕರ್ ಅವರು ಕಿರಣ್ ರನ್ನು ಗೈಡ್ ಮಾಡುತ್ತಾರೆ
ಈ ಬಗ್ಗೆ ಮಾತನಾಡಿರುವ ಕಿರಣ್ ಅವರು ಒಮ್ಮೊಮ್ಮೆ‌ ನಾವು ಮಾಡಿದ ಕೆಲಸಕ್ಕೆ ತಪ್ಪಾದ ಜಾಗಗಳಲ್ಲಿ ಪ್ರಶಂಸೆಯನ್ನ ಹುಡುಕುತ್ತೇವೆ ಆದರೆ ಈ ರೀತಿ ನಮಗೇ ತಿಳಿಯದ ರೀತಿಯಲ್ಲಿ ದೇವರು ಸರ್ಪ್ರೈಸ್ ಕೊಡ್ತಾನೆ ಅದೇ ರೀತಿ‌ ನನಗೆ ಮೀನಾಮ್ಮ ಸಿಕ್ಕದ್ದು ಮನೆ ಮಗನಂತೆ ನೋಡಿಕೊಳ್ತಾರೆ ಏನೇ ತಪ್ಪು ಮಾಡಿದ್ರೂ ತಿದ್ದಿ ಹೇಳ್ತಾರೆ ದರ್ಶನ್ ಸರ್ ಒಬ್ಬ ಸೂಪರ್ ಸ್ಟಾರ್ ಅವರ ತಾಯಿ ನನ್ನನ್ನು ನನ್ನ ಅಭಿನಯವನ್ನು ಮೆಚ್ಚಿ ಫೋನ್ ಮಾಡಿ ಪ್ರಶಂಸೆ ನೀಡ್ತಾರೆ ಅಂದರೆ ಅದು ಅವರ ದೊಡ್ಡ ಗುಣ ನಾನು ಯಾವಾಗ ಅವರ ಮನೆಗೆ ಹೋದರೂ ನಮ್ಮ ಮನೆಗೆ ಹೋದಂತೆ ಆಗತ್ತೆ ಕೆಲವೊಮ್ಮೆ ರಕ್ತ ಸಂಬಂಧಗಳೇ ನಾವ್ಯಾಕೆ ಮಾಡ್ಬೇಕು ಅನ್ನೋ‌ ಕಾಲ ಇದು ಆದರೆ ಸಂಬಂಧವೇ ಇಲ್ಲದ ನನ್ನನ್ನು ಮಗನಂತೆ ನೋಡಿಕೊಳ್ತಾರೆ ಇದು ನನ್ನ ಭಾಗ್ಯ ಎಂದು ಸಂತೋಷ ಹಂಚಿಕೊಂಡಿದ್ದಾರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *