ನಟ ಅನಿರುದ್ಧ್ ಮನೆಯಲ್ಲಿ ಸಾವು,ಕಂಬನಿ ಮಿಡಿದ ಜೊತೆ ಜೊತೆಯಲಿ ತಂಡ ನೋವಿನಲ್ಲಿ ಇಡಿ ಕುಟುಂಬ.. - Karnataka's Best News Portal

ನಮಸ್ತೆ ಗೆಳೆಯರೇ ನಾವು ತಿಳಿಸುವಂತಹ ಮಾಹಿತಿಯು ತುಂಬಾ ಕರುಣಾಜನಕವಾಗಿದೆ ನಿಜ ಸ್ನೇಹಿತರೆ ವರ್ಷ ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಎಲ್ಲಾ ವರ್ಗದ ಜನರಿಗೆ ಹಾಗೂ ಕಲಾವಿದರಿಗೂ ಸಹ ಬಹಳ ಕೆಟ್ಟ ವರ್ಷವಾಗಿದೆ ಸಾಲು ಸಾಲು ಕಲಾವಿದರನ್ನು ಕಳೆದುಕೊಂಡೆವು ದಿಗ್ಗಜ ನಟರು ಇನ್ನಿಲ್ಲವಾದರು ಎಷ್ಟೋ ಕಲಾವಿದರು ಕೆಲಸವಿಲ್ಲದೇ ಮನೆಯಲ್ಲಿಯೇ ಕೂರುವಂತಾಯಿತು ಇದೀಗ ಅನಿರುದ್ಧ್ ಅವರು ಸಹ ಸಾವಿನ ಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ನಿಜ ಗೆಳೆಯರೇ ಸದಾ ಅನಿರುದ್ಧ್ ಅವರ ಜೊತೆಯಲ್ಲಿಯೇ ಇರುತ್ತಿದ್ದ ಪಾಂಡು ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅನಿರುದ್ಧ್ ಅವರು ನನ್ನ ಆಪ್ತರಕ್ಷಕರು ಮತ್ತು ವಾಹನ ಚಾಲಕರಾದ ಪಾಂಡು ಅವರು ಹೃದಯಾಘಾತದಿಂದ ನಮ್ಮನ್ನ ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಂದು ಬರೆದು ಪೋಸ್ಟ್ ಮಾಡಿದ್ದು ನೋವು ಹಂಚಿಕೊಂಡಿದ್ದಾರೆ ಪಾಂಡು ಅವರು ಹೆಸರಿಗಷ್ಟೇ ಸಹಾಯಕರಾಗಿದ್ದರು ಆದರೆ ಅನಿರುದ್ಧ್ ಅವರು ಪಾಂಡು ಅವರನ್ನು ಕುಟುಂಬದವರಂತೆ ಸದಾ ಕಾಣುತ್ತಿದ್ದರು ಚಿತ್ರೀಕರಣ ಇರಲಿ ಇಲ್ಲದಿರಲಿ ಪಾಂಡು ಸದಾ ಅನಿರುದ್ಧ್ ಅವರ ಜೊತೆಗೇ ಇರುತ್ತಿದ್ದರು ಮೈಸೂರಿಗೆ ತೆರಳುವಾಗಲೂ ಪಾಂಡು ಇಲ್ಲದಿದ್ದರೇ ಅನಿರುದ್ಧ್ ಅವರು


ಪ್ರಯಾಣವೇ ಮಾಡುತ್ತಿರಲಿಲ್ಲ ಕಾರ್ ಚಾಲಕ ಎನ್ನುವುದಕ್ಕಿಂತ ಸ್ನೇಹಿತನಂತೆ ಕಾಣುತ್ತಿದ್ದರು ಪಾಂಡುವನ್ನು ಹೊರತು ಪಡಿಸಿ ಬೇರೆ ಯಾರನ್ನೂ ಸಹ ಸಹಾಯಕರಾಗಿ ಅನಿರುದ್ಧ್ ಅವರು ತೆಗೆದುಕೊಂಡಿರಲಿಲ್ಲ ಜೊತೆಜೊತೆಯಲಿ ಧಾರಾವಹಿಯ ಚಿತ್ರೀಕರಣದ ವೇಳೆಯಲ್ಲಿಯೂ ಪಾಂಡು ಅನಿರುದ್ಧ್ ಅವರ ಜೊತೆಗೇ ಇದ್ದು ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು
ಅಭಿಮಾನಿಗಳು ಅನಿರುದ್ದ್ ಅವರನ್ನು ನೋಡಲು ಬಂದರೆ ಬಹಳ ವಿನಯದಿಂದಲೇ ಎಲ್ಲರನ್ನು ಮಾತನಾಡಿಸಿ ಅನಿರುದ್ಧ್ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು ಹಾಗೂ ಬಹಳ ಸಾದು ಸ್ವಭಾವದ ಪಾಂಡು ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರು ಎಂದರೂ ಆಶ್ಚರ್ಯವಿಲ್ಲ ಕಳೆದ ಬಾರಿ ಜೊತೆಜೊತೆಯಲಿ ತಂಡ ಚಿತ್ರದುರ್ಗಕ್ಕೆ ತೆರಳಿದಾಗಲೂ ಪಾಂಡು ಅವರು ಅನಿರುದ್ಧ್ ಅವರ ಜೊತೆಗಿದ್ದು ಸದಾ ಅವರ ರಕ್ಷಣೆ ಮಾಡುತ್ತಿದ್ದರು ಇದೀಗ ಕಾರ್ ಚಾಲಕ ಎನ್ನುವುದಕ್ಕಿಂತ ಹೆಚ್ಚಾಗಿ ಸ್ನೇಹಿತನ ಕಳೆದುಕೊಂಡ ದುಃಖದಲ್ಲಿದ್ದೂ ಸಂಪೂರ್ಣ ಕುಟುಂಬ ಪಾಂಡು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದು ಅವರ ಕುಟುಂಬದ ನೆರವಿಗೆ ನಿಂತಿದ್ದಾರೆ ಇನ್ನು ಜೊತೆಜೊತೆಯಲಿ ಧಾರಾವಾಹಿ ತಂಡದ ಜೊತೆಯೂ ಬಹಳ ಆಪ್ತರಾಗಿದ್ದ ಪಾಂಡು ಅವರ ಅಗಲಿಕೆಗೆ ಜೊತೆಜೊತೆಯಲಿ‌ ಕುಟುಂಬವೂ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದೆ

By admin

Leave a Reply

Your email address will not be published. Required fields are marked *