ಗುರು ಗ್ರಹದ ಬದಲಾವಣೆಯಿಂದ ಭವಿಷ್ಯದಲ್ಲಿ ಏನಲ್ಲ ಬದಲಾಗುತ್ತದೆ ನೀವು ಊಹೆನೂ ಮಾಡಲಿಕೆ ಆಗಲ್ಲ ಗೊತ್ತಾ... - Karnataka's Best News Portal

ಸಾಧಾರಣವಾಗಿ ನಾವು ಜಾತಕ ನೋಡುವಾಗ ಗುರುಬಲ ಎಂಬ ಪದವನ್ನು ಬಳಕೆ ಮಾಡುತ್ತೇವೆ ಕೆಲವರು ತಿಳಿದುಕೊಳ್ಳುವುದು ಗುರುಬಲ ಎಂದರೆ ಕೇವಲ ಮದುವೆಗೆ ಮಾತ್ರ ಸೀಮಿತವಾಗಿರುತ್ತದೆ ಅಂತ ಅಂದುಕೊಳ್ಳುತ್ತಾರೆ. ಆದರೆ ಯಾವುದೇ ಶುಭಕಾರ್ಯ ಮಾಡುವುದಕ್ಕೆ ಅಥವಾ ನಾವು ಮಾಡುವ ಪ್ರತಿಯೊಂದು ಕಾರ್ಯಗಳು ಕೂಡ ಒಳ್ಳೆಯದಾಗಿ ಸುಸೂತ್ರವಾಗಿ ನಡೆಯಬೇಕು ಅಂದರೆ ಅದಕ್ಕೆ ಗುರುಬಲ ಎಂಬುದು ಇರಲೇಬೇಕು. ಇನ್ನೂ ಬ್ರಹ್ಮಾಂಡದಲ್ಲಿ ಕಂಡು ಬರುವ 12 ರಾಶಿಗಳನ್ನು ಗುರು ಸುತ್ತಬೇಕು ಅಂದರೆ 12 ವರ್ಷಗಳು ಬೇಕು ಒಂದೊಂದು ರಾಶಿಗೆ ಒಂದು ವರ್ಷದಂತೆ. ಆದರೆ ಕೆಲವೊಮ್ಮೆ ಅತಿಚರ ಎಂಬುದು ಬರುತ್ತದೆ ಆದರೆ ಕೆಲವೊಮ್ಮೆ ಗುರು ಆರು ತಿಂಗಳಿಗೊಮ್ಮೆ ಅಥವಾ ಎಂಟು ತಿಂಗಳಿಗೊಮ್ಮೆ ಬದಲಾಗುತ್ತಾನೆ. ಕೆಲವರ ಪ್ರಕಾರ ಗುರು ಬದಲಾವಣೆ ಆಗುಗುವುದು ನವೆಂಬರ್ 20, 2020 ಎಂದು ಹೇಳುತ್ತಾರೆ.

ಈ ದಿನ ಗುರು ಗ್ರಹ ಧನಸ್ಸು ರಾಶಿಯಿಂದ ಮಕರ ರಾಶಿಗೆ ಗುರು ಬದಲಾವಣೆ ಹೊಂದುತ್ತದೆ ಅಂತ ಹೇಳುತ್ತಾರೆ ಆದರೆ ಇದು ಲಹರಿ ನಾರಾಯಣಂಶ ಪಿತೃಪಕ್ಷದ ಪ್ರಕಾರ ಆದರೆ ಸಾಮಾನ್ಯವಾಗಿ ಎಲ್ಲಾ ಅನುಸರಿಸುವುದು ಅಯನಾಂಶದ ಮೇಲೆ ಇದರ ಪ್ರಕಾರ ನವೆಂಬರ್ 12, 2020 ರಂದು ಗುರು ತನ್ನ ಸ್ಥಾನದಿಂದ ಬದಲಾವಣೆಗೊಳ್ಳುತ್ತದೆ. ಕಳೆದ ವರ್ಷ 28 ಅಕ್ಟೋಬರ್ 2019 ರಲ್ಲಿ ಗುರು ಗ್ರಹವು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡಿತ್ತು. 2019 ಡಿಸೆಂಬರ್ 20 ನೇ ತಾರೀಕು ಧನಸ್ಸು ರಾಶಿಯಲ್ಲಿ ಗುರು ಗ್ರಹದ ಜೊತೆ ಇನ್ನೂ ಐದು ಗ್ರಹಗಳು ಸೇರಿದ್ದವು ರವಿಗ್ರಹ, ಚಂದ್ರಗ್ರಹ, ಬುಧಗ್ರಹ, ಶನಿಗ್ರಹ ಮತ್ತು ಕೇತಗ್ರಹಗಳು ಕೂಡ ಸೇರಿದ್ದು ಈ ದಿನ ಸಂಪೂರ್ಣ ಸೂರ್ಯ ಗ್ರಹಣವಾಗಿತ್ತು.

By admin

Leave a Reply

Your email address will not be published. Required fields are marked *