ಅನಂತ್ ನಾಗ್ ಅವರ ಮಗಳು ಅಳಿಯ ಹೇಗಿದ್ದಾರೆ ನೋಡಿ..ಶಾಕ್ ಆಗ್ತೀರಾ - Karnataka's Best News Portal

ಅನಂತನಾಗ ಅವರ ಕುಟುಂಬದ ವಿವರ….

ಅನಂತ್ ನಾಗ್ ಅವರು 1948 ರಲ್ಲಿ ಬಾಂಬೆಯಲ್ಲಿ ಹುಟ್ಟಿದರೆ ಇವರಿಗೆ ಈಗ 72 ವರ್ಷ ಇವರ ಮಾತೃಭಾಷೆ ಕೊಂಕಣಿ ಇವರಿಗೆ ಒಬ್ಬ ಅಣ್ಣ ಮತ್ತು ಒಬ್ಬ ಅಕ್ಕ ಇದ್ದಾರೆ. ಇವರ ಅಣ್ಣನ ಹೆಸರು ಶಂಕರ್ ನಾಗ್ ಮತ್ತು ಅವರ ಅಕ್ಕನ ಹೆಸರು ಶೈಮಾಲ ಅನಂತ್ ನಾಗ್ ಅವರು ಒಂದು ಬಾರಿ MLC ಮತ್ತು ಒಂದು ಬಾರಿ MLA ಆಗಿದ್ದರು ಅನಂತನಾಗ್ ಅವರು ಹಿಂದಿ, ಮರಾಠಿ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಬರೋಬ್ಬರಿ 100 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಅನಂತನಾಗ್ ಅವರು ನಟಿ ಗಾಯತ್ರಿ ಅವರನ್ನು ಲವ್ ಮಾಡುತ್ತಿದ್ದರು ನಂತರ 1987 ರಲ್ಲಿ ಇಬ್ಬರು ಮದುವೆ ಆಗಿದ್ದಾರೆ. ಅವರಿಗೆ ಒಬ್ಬಳು ಮಗಳು ಇದ್ದಾರೆ ಮಗಳ ಹೆಸರು ಅಧಿತಿ ಅವರು ಪೋಸ್ಟ್ ಗ್ರಾಜುಯೇಷನ್ ಮುಗಿಸಿದ್ದು ಈಗ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಚಿತ್ರರಂಗದ ಕಾರ್ಯ ಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.

ಅಧಿತಿ ಅವರು ವಿವೇಕ್ ಅವರನ್ನು ಮದುವೆಯಾಗಿದ್ದಾರೆ ಇವರಿಬ್ಬರು ಕೋಟಕ್ ಮಹಿಂದ್ರದಲ್ಲಿ ಕೆಲಸಮಾಡುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿ ನಂತರ ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆ. ಅಧಿತಿ ಹಾಗೂ ವಿವೇಕ ಅವರು ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಅನಂತ್ ನಾಗ್ ಅವರ ಹೆಂಡತಿ ಗಾಯಿತ್ರಿ ಹೇಳುವ ಪ್ರಕಾರ ಅನಂತ್ ನಾಗ್ ಅವರಿಗೆ ಅಡುಗೆ ಯಾವಾಗಲೂ ಫ್ರೆಶ್ ಆಗಿ ಇರಬೇಕಂತೆ. ರಾತ್ರಿಯ ಊಟ ಬೆಳಗ್ಗೆ ಹಾಗು ಬೆಳಗ್ಗೆ ಊಟ ರಾತ್ರಿಗೆ ತಿನ್ನುವ ಅಭ್ಯಾಸ ಅನಂತನಾಗ್ ಅವರಿಗೆ ಇಲ್ಲವಂತೆ ಅದೇ ರೀತಿ ಅನಂತನಾಗ್ ಅವರು ಹೊರಗೆ ತಿನ್ನುವುದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಊಟ ಮಾಡಲು ಬಯಸುತ್ತಾರಂತೆ. ಅನಂತ್ ನಾಗ್ ರವರು ನೋಡಲು ಸ್ಮೂತ್ ಆಗಿದ್ದರೂ ಇವರಿಗೆ ಬೇಗ ಕೋಪ ಬರುತ್ತೆ ಎಂದು ಗಾಯಿತ್ರಿ ಹೇಳಿದ್ದಾರೆ.

By admin

Leave a Reply

Your email address will not be published. Required fields are marked *