ಇದು ಗ್ಯಾರಂಟಿ ನಮ್ಮ ಜೀವನಕ್ಕೆ ಸ್ಫೂರ್ತಿ ನೀಡುವಂತಹ ಸನ್ನಿವೇಶಗಳೆ ಸರಿ! ಇದು ಸಾಧ್ಯನಾ....? - Karnataka's Best News Portal

ಜೀವನ ಅನ್ನೋ ಆಟದಲ್ಲಿ ಜನ ಕೆಲವೊಮ್ಮೆ ಫುಟ್ ಬಾಲ್ ಆಟ ಅಂತ ತಿಳಿದುಕೊಂಡು ಒದೆಯುತ್ತಾರೆ ಆದರೆ ಅವರಿಗೆ ಗೊತ್ತಿರಲಿಕ್ಕಿಲ್ಲ ಇದೆ ಫುಟ್ ಬಾಲ್ ನಮ್ಮನ್ನು ಗೋಲ್ ಹತ್ತಿರವೇ ಕರೆದುಕೊಂಡು ಹೋಗ್ತಾರೆ ಅಂತ. ಸುನಾಮಿ ಬಂದಾಗ ಕೊಚ್ಚಿ ಹೋದ ಇರುವೆಗಳನ್ನು ಮೀನುಗಳು ತಿನ್ನುತ್ತವೆ, ನೀರು ಬತ್ತಿ ಹೋದಾಗ ಸತ್ತುಬಿದ್ದ ಮೀನುಗಳನ್ನು ಇರುವೆಗಳು ತಿನ್ನುತ್ತವೆ ಅವಕಾಶ ಎಲ್ಲರಿಗೂ ಇರುತ್ತೆ ಆ ಸಮಯ ಕೋಸ್ಕರ ಕಾಯಬೇಕು ಅಷ್ಟೇ. ಅಷ್ಟಲ್ಲದೆ ಹೇಳ್ತಾರೆ ಹಿರಿಯರು ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತ ಜೀವನ ಸಾಗಿಸೊಕೆ ಅಂತ ಬಹಳ ದುಡ್ಡೇನು ಬೇಕಾಗಿಲ್ಲ ಆದರೆ ಇನ್ನೊಬ್ಬರನ್ನು ನೋಡಿ ಜೀವನ ಸಾಗಿಸುತ್ತ ಇದ್ದೀವಿ ಅಂದ್ರೆ ಎಷ್ಟು ದುಡ್ಡಿದ್ದರೂ ಸಾಕಾಗುವುದಿಲ್ಲ. ಜೀವನದಲ್ಲಿ ದುಃಖ ಬರುತ್ತೆ ನಿಜ ಆದರೆ ದುಃಖನೇ ನಮ್ಮ ಜೀವನ ಆಗಬಾರದು.

ಯಾಕೆಂದರೆ ಸಂತೋಷದಿಂದ ಇರುವಂತಹ ಜನರಲ್ಲಿ ಎಲ್ಲವು ಇರುತ್ತೆ ಅಂತ ಹೇಳೋಕೆ ಆಗಲ್ಲ. ಇದ್ದುದರಲ್ಲೇ ತೃಪ್ತಿ ಕಾಣುವಂತಹ ಗುಣ ಅವರ ಸಂತೋಷಕ್ಕೆ ಕಾರಣವಾಗಿರುತ್ತದೆ ಅಷ್ಟೆ. ನನ್ನೊಳಗೆ ಸಮಾಧಾನ ಇಲ್ಲ ಅಂದರೆ ಜಗತ್ತಿನಲ್ಲಿ ಶಾಂತಿ ಹುಡುಕಲು ಸಾಧ್ಯವಿಲ್ಲ, ಜೀವನದಲ್ಲಿ ಎಲ್ಲಾ ಬೇಕು ಅನ್ಕೊಂಡಿದ್ದು ಯಾವತ್ತೂ ಸುಲಭವಾಗಿ ಸಿಗಲ್ಲ, ಆದರೆ ಆದರೆ ಪಡೆದೆ ಪಡೀತೀನಿ ಅಂತ ಹಠ ಇದ್ರೆ ಎಲ್ಲವನ್ನೂ ಸಿಗುತ್ತೆ. ಬಯಸಿದ್ದು ಸಿಗುವುದಿಲ್ಲ ಸಿಕ್ಕಿದ್ದು ಇಷ್ಟ ಆಗಲ್ಲ, ಇಷ್ಟ ಆಗಿದ್ದು ಜೊತೆಗೆ ಇರಲ್ಲ, ಜೊತೆಗಿದ್ದಿದ್ದು ಖುಷಿ ಕೊಡಲ್ಲ, ಖುಷಿ ಕೊಟ್ಟಿದ್ದು ಕೊನೆತನಕ ಇರಲ್ಲ ಇದೇ ಜೀವನ. ಅದ್ಭುತ ನಡೆಯುವ ಸಂದರ್ಭದಲ್ಲಿ ಯಾರೂ ಗುರುತಿಸುವುದಿಲ್ಲ ಅದ್ಭುತ ನಡೆದಮೇಲೆ ಗುರುತಿಸುವವರ ಅವಶ್ಯಕತೆ ಇರುವುದಿಲ್ಲ, ಗೆಲ್ಲುವುದು ತಡವಾದರೂ ಪರವಾಗಿಲ್ಲ ಆದರೆ ಒಮ್ಮೆ ಗೆದ್ದರೆ ಎದುರಾಳಿ ಎದೆಯಲ್ಲಿ ನಡುಕ ಹುಟ್ಟಿಸುವಂತಿರಬೇಕು. ಈ ಮಾಹಿತಿಗಾಗಿ ಲೈಕ್ ಇರಲಿ ವಿಡಿಯೋ ಲೈಕ್ ಇರಲಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *