ಕಮಲಿ ಸೀರಿಯಲ್ ನ ಈ ನಟಿ ನಿಜಕ್ಕೂ ಯಾರು ಗೊತ್ತಾ,ಇವರು ಮುಂಚೆ ಏನ್ ಮಾಡ್ತಿದ್ರು ನೋಡಿ ಶಾಕ್.. - Karnataka's Best News Portal

ಪ್ರಿಯ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಹೇಳುವ ಮಾಹಿತಿಯು ಬಣ್ಣದ ಲೋಕದಲ್ಲಿ ಇಲ್ಲ ಪ್ರತಿಭೆ ಅದೃಷ್ಟದ ಬಲಗಳು ಇದ್ದರೆ ಇಲ್ಲಿ ಅವಕಾಶಗಳು ಅರಸಿಕೊಂಡು ಬರುತ್ತವೆ ಹೌದು ಇಂತಹ ಅವಕಾಶಗಳನ್ನು ಬಳಸಿ ತಮ್ಮ ನೈಜ ಅಭಿನಯದಿಂದ ಮನಗೆದ್ದ ಚೆಲುವೆಯ ಹೆಸರು ಅಂಕಿತಾ ಅಯ್ಯರ್ ಅರೇ ಅಂಕಿತಾ ಅಯ್ಯರ್ ಯಾರು ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದು ಆಲೋಚಿಸುತ್ತಿದ್ದೀರಾ ಕಿರುತೆರೆ ಲೋಕದಲ್ಲಿ ಆಕೆ ನಿಂಗಿ ಎಂದೇ ಫೇಮಸ್ಸು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ನಾಯಕಿ ಕಮಲಿಯ ಗೆಳತಿ ನಿಂಗಿಯಾಗಿ ನಟಿಸುವ ಮೂಲಕ ಮನೆ ಮಾತಾಗಿದ್ದಾರೆ ಅಂಕಿತಾ ಇಂಜಿನಿಯರಿಂಗ್ ಓದಿರುವ ಅಂಕಿತಾ ಅವರು ಗಮನಹರಿಸಿದ್ದು ನಟನಾ ಜಗತ್ತಿನತ್ತ ಬಾಲ್ಯದಿಂದಲೂ ಅಭಿನಯದತ್ತ ಆಸಕ್ತಿ ಹೊಂದಿದ್ದ ಅಂಕಿತಾ ವಿದ್ಯಾಭ್ಯಾಸ ಮುಗಿದ ಬಳಿಕ ಎರಡು ವರ್ಷಗಳ ಕಾಲ ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದರು ಆದರೆ ಬಣ್ಣದ ಲೋಕದ ಸೆಳೆತ ಕಡಿಮೆಯಾಗಿರಲಿಲ್ಲ ನಟನೆಯೇ ಬೇಕು ಎಂಬ ದೃಢ ನಿರ್ಧಾರ ಮಾಡಿದ ಅಂಕಿತಾ ಕೆಲಸಕ್ಕೆ ಬಾಯ್ ಹೇಳಿ ಆಡಿಶನ್ ಗಳನ್ನು ನೀಡಲಾರಂಭಿಸಿದರು ಕಮಲಿಯ ನಿಂಗಿ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅಂಕಿತಾ ಅಯ್ಯರ್ ಬಂಗಾರಿ ಸಿಂಧೂರ ಪತ್ತೆಧಾರಿ ಪ್ರತಿಭಾ ರಾಧಾರಮಣಗಳಂತಹ ಬೆರಳೆಣಿಕೆಯ ಧಾರಾವಾಹಿಗಳಲ್ಲಿ ನಟಿಸಿದ್ದರೂ ವೀಕ್ಷಕರು ಗುರುತಿಸಿದ್ದು ನಿಂಗಿ ಆಗಿ ಬದಲಾದ ಬಳಿಕವೇ ಅಷ್ಟರ ಮಟ್ಟಿಗೆ ಅವರ ಪಾತ್ರ ಮನ ಸೆಳೆದಿದೆ ಇನ್ನು ಮಹಾನಗರಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಂಕಿತಾ ಅವರು ರಿಯಲ್ ಲೈಫಲ್ಲಿ ಮಾಡರ್ನ್ ಹುಡುಗಿ ಆದರೆ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಾಗಿ ಮೋಡಿ ಮಾಡುವ ಅಂಕಿತಾ ಅವರ ಭಾಷಾಪ್ರಯೋಗವೂ ಇವರು ಸಿಟಿ ಹುಡುಗಿ ಎಂದು ಅನಿಸದಂತೆ ಮಾಡುತ್ತದೆ ಒಟ್ಟಾರೆಯಾಗಿ ನಿಂಗಿಗೂ ಅಂಕಿತಾ ಗೂ ಅಜಗಜಾಂತರ


ವ್ಯತ್ಯಾಸ ಇರುವುದಂತೂ ದಿಟ ಮೂಲತಃ ತಮಿಳುನಾಡಿನ ಅಯ್ಯರ್ ಕುಟುಂಬಕ್ಕೆ ಸೇರಿದ ಅಂಕಿತಾಗೆ ಮೊದಲು ತಮಿಳಿನಿಂದ ಆಫರ್ ಬಂತು ಆದರೆ ಕನ್ನಡದ ಕುರಿತು ಅಭಿಮಾನ ಇರುವ ಇವರು ಮೊದಲು ಅಭಿನಯಿಸುವುದು ಕನ್ನಡದಲ್ಲಿಯೇ ಎಂದು ದೃಢ ನಿಶ್ಚಯ ಮಾಡಿದ್ದರು ಅಂತೆಯೇ ಇಂದು ಕನ್ನಡ ಕಿರುತೆರೆಯಲ್ಲಿ ಈಕೆ ಬದುಕು ಕಟ್ಟಿಕೊಂಡಿದ್ದಾರೆಚಿತ್ರರಂಗದ ಕುರಿತು ಒಳ್ಳೆಯ ಅಭಿಪ್ರಾಯ ಇರದ ಅಂಕಿತಾ ಅವರ ತಂದೆಗೆ ಮಗಳು ಸಿನಿಲೋಕ ಪ್ರವೇಶಿಸುವುದು ಕೊಂಚವೂ ಇಷ್ಟವಿರಲಿಲ್ಲ ನಟನೆ ಎಂದರೆ ಇಷ್ಟಪಡುತ್ತಿದ್ದ ಅಂಕಿತಾ ಮನೆಯಲ್ಲಿ ತಿಳಿಸದೆ ಸುಳ್ಳು ಹೇಳಿ ಆಡಿಷನ್ ಗಳಿಗೆ ತೆರಳುತ್ತಿದ್ದರು ಆಯ್ಕೆಯಾದ ಮೇಲೆ ಪೋಷಕರಿಗೆ ತಿಳಿಸುತ್ತಿದ್ದರು. ಇಂದು ಇವರ ನಟನೆಯನ್ನು ಮೆಚ್ಚಿದ ಪ್ರೇಕ್ಷಕವರ್ಗವನ್ನು ಕಂಡಾಗ ಪೋಷಕವರ್ಗಕ್ಕೂ ಸಂತಸವಾಗಿದೆ ಮಾತ್ರವಲ್ಲ ಚಿತ್ರರಂಗದ ಕುರಿತು ಅವರಿಗಿರುವ ಭಾವನೆಯೂ ಬದಲಾಗಿದೆ ನಟನೆಯಲ್ಲದೇ ನಿರೂಪಣೆಯಲ್ಲಿಯೂ ತೊಡಗಿಸಿಕೊಂಡಿರುವ ಅಂಕಿತಾ ಉದಯ ವಾಹಿನಿಯ ಶ್ರೀಕ್ಷೇತ್ರ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ ಇದಲ್ಲದೇ ನೃತ್ಯ ಸಂಗೀತ ಡ್ರಾಮಾದಲ್ಲಿಯೂ ತೊಡಗಿಸಿಕೊಂಡಿರುವ ಅಂಕಿತಾ ಗಿಟಾರ್ ನುಡಿಸಬಲ್ಲರು ಶಾಲಾದಿನಗಳಲ್ಲಿ ನಾಟಕಗಳಿಗೆ ತಾವೇ ಸ್ಕ್ರಿಪ್ಟ್ ಬರೆದು ಅಭಿನಯಿಸಿರುವ ಅಂಕಿತಾ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸೈ ಮಿಸ್ ಕರ್ನಾಟಕ ಕ್ವೀನ್ ರನ್ನರ್ ಅಪ್ ಸ್ಥಾನವನ್ನು ಈಕೆ ಪಡೆದಿದ್ದಾರೆ‌
ನನ್ನ ಬಣ್ಣದ ಬದುಕಿಗೆ ಬ್ರೇಕ್ ನೀಡಿದ್ದೇ ಕಮಲಿಯ ನಿಂಗಿ ಪಾತ್ರ ನಾನಿಂದು ಎಲ್ಲೇ ಹೋದರೂ ಜನ ನನ್ನನ್ನು ನಿಂಗಿ ಎಂದೇ ಗುರುತಿಸುತ್ತಾರೆ ಅಂದ ಹಾಗೇ ಕಮಲಿ ಧಾದಾವಾಹಿಯಲ್ಲಿ ಹಿರಿಯ ಕಲಾವಿದರುಗಳು ಕೂಡಾ ನಟಿಸಿದ್ದರು ಅವರ ಜೊತೆಗೆ ನಟಿಸುವಾಗ ಮೊದಲಿಗೆ ಕೊಂಚ ಭಯವಾಗಿದ್ದು ನಿಜ ಆದರೆ ಮುಂದೆ ಅವರ ಪ್ರೋತ್ಸಾಹದಿಂದ ನಾನು ಈ ಮಟ್ಟಕ್ಕೆ ಬೆಳೆದೆ ಹಳ್ಳಿ ಹುಡುಗಿಯಾಗಿ ಹಳ್ಳಿ ಭಾಷೆ ಮಾತನಾಡುವಾಗ ಮೊದಲು ಅಳುಕಿತ್ತು ಆದರೆ ಈಗ ಹಾಗಿಲ್ಲ ಎಂದು ಹೇಳುವ ಅಂಕಿತಾ ಅಯ್ಯರ್ ಗೆ ವರನಟ ಡಾ.ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಸ್ಪೂರ್ತಿ ಆಗಿದ್ದಾರೆ ಈ ಮಾಹಿತಿಗೆ ಗೊಂದು ಲೈಕ್ ಇರಲಿ ನಿಮ್ಮ ಅಭಿಪ್ರಾಯಗಳ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *