ಗ್ಯಾಸ್ ಸ್ಟವ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡುವ ವಿಧಾನ ಮಿಸ್ ಮಾಡ್ದೆ ನೋಡಿ... » Karnataka's Best News Portal

ಗ್ಯಾಸ್ ಸ್ಟವ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡುವ ವಿಧಾನ ಮಿಸ್ ಮಾಡ್ದೆ ನೋಡಿ…

ನಾವಿಲ್ಲಿ 2 ವಿಧಾನದ ಕ್ಲೀನಿಂಗ್ ತಿಳಿಸುತ್ತೇವೆ ಮೊದಲಿಗೆ ಒಂದು ಬೌಲ್ ಗೆ 2 ಕಪ್ ನೀರು ಹಾಕಿಕೊಂಡು ಒಂದು ನಿಂಬೆಹಣ್ಣಿನ ಗಾತ್ರದ ಹುಣಸೆ ಹಣ್ಣನ್ನು ಸೇರಿಸಿ ರಸ ಬಿಡುವ ಹಾಗೆ ಚೆನ್ನಾಗಿ ಕಿವುಚಿಕೊಳ್ಳಿ ನಂತರ ಇದಕ್ಕೆ ಕಪ್ಪಾಗಿರುವ ಬರ್ನರ್ ಹಾಕಿ ಒಂದು ರಾತ್ರಿ ನೆನೆಸಿಡಬೇಕು ರಾತ್ರಿಯಿಡಿ ನನೆಸಿ ಬೆಳಿಗ್ಗೆ ತೆಗೆದಾಗ ಕಪ್ಪು ಕಲೆಗಳು ಚೆನ್ನಾಗಿ ಬಿಟ್ಟುಕೊಂಡಿರುತ್ತದೆ. ಈಗ ಇದಕ್ಕೆ ಟೂತ್ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಉಜ್ಜಬೇಕು ಮತ್ತು ಸೊಪನ್ನು ಹಾಕಿ ತಿಕ್ಕಬೇಕು ನಂತರ ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ. ಮತ್ತೊಂದು ವಿಧಾನ ಈನೋ ಉಪಯೋಗಿಸಿ ಹೇಗೆ ಕ್ಲೀನ್ ಮಾಡಬೇಕೆಂದು ತಿಳಿಸುತ್ತೇವೆ ಮೊದಲಿಗೆ ಬಿಸಿ ನೀರಿಗೆ ಬರ್ನರ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ 2 ರಿಂದ 5 ಟೇಬಲ್ ಸ್ಪೂನ್ ವಿನೆಗರ್ ಹಾಕಿ ಕೊಳ್ಳಿ ವಿನೆಗರ್ ಇಲ್ಲವಾದರೆ ನಿಂಬೆಹಣ್ಣಿನ ರಸ ಹಾಕಬಹುದು.

ಇದಕ್ಕೆ 1 ಪ್ಯಾಕೆಟ್ ಈನೋ ಬಳಸಬೇಕು. ಸ್ವಲ್ಪ ಸ್ವಲ್ಪವೇ ಸೇರಿಸಿಕೊಳ್ಳಬೇಕು ಇದನ್ನು ಹಾಕಿದರೆ ನೊರೆ ಬರುತ್ತದೆ ಇದನ್ನು ಒಂದು ನೈಟ್ ಫುಲ್ ನೆನೆಸಿಡಿ ಬೆಳಗ್ಗೆ ನೋಡಿದಾಗ ನಿಮಗೆ ವ್ಯತ್ಯಾಸ ಗೊತ್ತಾಗುತ್ತೆ ಕಪ್ಪುಕಲೆಗಳನ್ನು ಹೋಗಿರುತ್ತದೆ. ಈಗ ಇದಕ್ಕೆ ಪಾತ್ರೆ ತೊಳೆಯುವ ಸೋಪಿನಿಂದ ಚೆನ್ನಾಗಿ ಉಜ್ಜಬೇಕು ಇದರಿಂದ ಕಪ್ಪು ಕಲೆಗಳು ಪೂರ್ತಿಯಾಗಿ ಹೋಗುತ್ತದೆ ಮತ್ತು ಇನ್ನು ಸ್ವಲ್ಪ ಕ್ಲೀನ್ ಆಗುತ್ತೆ. ಹುಣಸೆಹಣ್ಣು ಉಪಯೋಗಿಸಿ ಕ್ಲೀನ್ ಮಾಡುವುದರಿಂದ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ ಹೆಚ್ಚು ತಿಕ್ಕುವ ಅವಶ್ಯಕತೆ ಇಲ್ಲ. ಈನೋ ಉಪಯೋಗಿಸಿದಾಗ ತುಂಬಾ ಸಮಯ ಉಜ್ಜಬೇಕಾಗುತ್ತೆ ಆದ್ದರಿಂದ ಹುಣಸೆಹಣ್ಣಿನ ಕ್ಲೀನಿಂಗ್ ಬೆಸ್ಟ್.ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">