ಚಿರು ಬಗ್ಗೆ ಕೇಳಿದ ತಕ್ಷಣ ಕೆಟ್ಟ ಮಾತಿನಲ್ಲಿಯೇ ವಾರ್ನಿಂಗ್ ಕೊಟ್ಟ ಧ್ರುವ ಕಾರಣ ಏನು ಗೊತ್ತಾ.ಎಲ್ಲರೂ ಶಾಕ್ - Karnataka's Best News Portal

ನಮಸ್ತೆ ಸ್ನೇಹಿತರೆ ಕನ್ನಡದ ಪ್ರತಿಭಾನ್ವಿತ ಹಾಗೂ ಅಭಿಮಾನಿಗಳ ಆರಾಧ್ಯ ದೈವವಾದ ಧೃವ ಸರ್ಜಾ ಸದ್ಯ ಮನೆಗೆ ಪುಟ್ಟ ಕಂದನ ಆಗಮನದ ಸಂತೋಷದ ನಡುವೆ ತಮ್ಮ ಮುಂದಿನ ಹೊಸ ಸಿನಿಮಾ ದುಬಾರಿ ಸಿನಿಮಾದ ಮುಹೂರ್ತವನ್ನು‌ ನೆರವೇರಿಸಿದ್ದು ಇನ್ನು ಮುಂದೆ ಅಭಿಮಾನಿಗಳಿಗಾಗಿ ವರ್ಷಕ್ಕೆ ಒಂದು ಎರಡು ಸಿನಿಮಾ ನೀಡುವ ಭರವಸೆ ನೀಡಿದ್ದಾರೆ ಹೌದು ಈ ನಡುವೆ ಅಣ್ಣನ ಬಗ್ಗೆ ಮಾತು ಬಂದ ಸಮಯದಲ್ಲಿ ಧೃವ ಕೆಟ್ಟ ಮಾತಿನಲ್ಲಿಯೇ ವಾರ್ನ್ ಮಾಡಿದ್ದಾರೆ ಧೃವ ಸರ್ಜಾ ಅವರ ಕುಟುಂಬ ಸತತವಾಗಿ 5 ತಿಂಗಳು ನೋವಿನಲ್ಲಿಯೇ ಕಳೆದಿದ್ದು ಇದೀಗ ಚಿರುವಿನ ಪ್ರತಿರೂಪದ ಆಗಮನದಿಂದ ಸ್ವಲ್ಪ ಸಮಾಧಾನ ತಂದಿದೆ ಚಿರುವೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ನಂಬಿಕೆಯಲ್ಲಿದ್ದು ವಾಸ್ತವವನ್ನು ಅರಿತು ಮುಂದೆ ಸಾಗಲೇ ಬೇಕಾಗಿದೆ ಇನ್ನು ಸದ್ಯ ಪೊಗರು ಸಿನಿಮಾ ಮುಕ್ತಾಯಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ ಈ ಸಮಯದಲ್ಲಿ ಪೊಗರು ಸಿನಿಮಾದ ನಿರ್ದೇಶಕರಾದ ನಂದ ಕಿಶೋರ್ ಅವರ ನಿರ್ದೇಶನದಲ್ಲಿಯೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು ನಿನ್ನೆ ದೇವಸ್ಥಾನದಲ್ಲಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ ಈ ಸಮಯದಲ್ಲಿ ತಾರಾ ಅವರು ಸೇರಿದಂತೆ ಅನೇಕ ಕಲಾವಿದರು ಸ್ನೇಹಿತರು ಹಾಜರಿದ್ದು ಧೃವ ಸರ್ಜಾರಿಗೆ ಶುಭ ಕೋರಿದ್ದಾರೆ ಈ ಸಮಯದಲ್ಲಿ ಮಾದ್ಯಮದ ಜೊತೆ ಮಾತನಾಡುವ ಸಂದರ್ಭದಲ್ಲಿ ಅಣ್ಣ ಚಿರು ಅವರ ವಿಚಾರ ಬಂದಿದೆ ಅಣ್ಣನ ಬಗ್ಗೆ ಏನ್ ಹೇಳ್ತೀರಾ ಈ ಸಮಯದಲ್ಲಿ ಎಂದು ಕೇಳಿದಾಗ ಕೆಟ್ಟ ಮಾತಿನಲ್ಲಿಯೇ ವಾರ್ನ್ ಮಾಡಿದ್ದಾರೆ ಗೆಳೆಯರೇ


ವಾಹಿನಿಯೊಂದು ಚಿರು ಅವರ ಸೆನ್ಸಿಬಲ್ ಫೂಟೇಜ್ ಒಂದನ್ನು ಟಿ ಆರ್ ಪಿ ಗಾಗಿ ಬಳಸಿಕೊಳ್ಳುತ್ತಿದ್ದದ್ದನ್ನು ಗಮನಿಸಿ‌ ಮಾತನಾಡಿದ ಧೃವ ಸರ್ಜಾ ಒಂದ್ ಮಾದ್ಯಮಕ್ಕೆ ಹೇಳ್ತಾ ಇದೀನಿ ನಮ್ಮ್ ಮನೆಯವರು ಕೂತ್ಕೊಂಡು ಟಿ ವಿ ನೋಡ್ತಿರ್ತಾರೆ ಅಣ್ಣನ ಕೆಲವು ವೀಡಿಯೋಗಳು ಬಹಳ ಸೆನ್ಸಿಬಲ್ ಆಗಿವೆ ಅದನ್ನ ಹೇಗ್ ಬಳಸಬೇಕೋ ಹಾಗೆ ಬಳಸಬೇಕು ನಿಮ್ಮ ಮನೆಲೂ‌ ಮನೆಯವರು ಇರ್ತಾರೆ ತಾನೆ ಅದೇ ತರ ನಮ್ ಮನೆಯವರು ನೋಡ್ತಿರ್ತಾರೆ ಅವರಿಗೆ ಹೇಗ್ ಆಗ್ಬೇಕು ಸುಮ್ನೆ ನಿಮ್ ತೀಟೆಗೆ ಅಣ್ಣನ್ ಬಗ್ಗೆ ಹೇಗ್ ಬೇಕು ಹಾಗೆ ಕೇಳುದ್ರೆ ನಾನ್ ಮಾತಾಡೋದೆ ಇಲ್ಲ.. ಸರಿಯಾಗಿ ಬಳಸ್ತೀನಿ ಅಂದ್ರೆ ಮಾತನಾಡ್ತೀನಿ ಎಂದಿದ್ದಾರೆ. ನಂತರ ಮಾತನಾಡಿ ಸರ್ ಹಾಗೆಲ್ಲಾ ಬಳಸೊಲ್ಲಾ ಎಂದಾಗ ಅಣ್ಣನ ಬಗ್ಗೆ ಮಾತನಾಡಿದ ಧೃವ ಸರ್ಜಾ ಅಣ್ಣನನ್ನ ಬಹಳ ಮಿಸ್ ಮಾಡಿಕೊಳ್ತಿದ್ದೀನಿ ಜೀವನದಲ್ಲಿ ಹಣ ಐಶ್ವರ್ಯ ಏನೇ ಇದ್ರು ನಾವ್ ಪ್ರೀತಿ ಮಾಡೋರು ಜೊತೆ ಇಲ್ಲ ಅಂದ್ರೆ ಅದಕ್ಕೆ ನಿಜವಾದ ಅರ್ಥವೇ ಇರೋದಿಲ್ಲ ಅದೇ ತರ ನನಗೆ ಜೀವನದಲ್ಲಿ ಮೊದಲ ಬಾರಿಗೆ ಆತರ ಫೀಲ್ ಆಗ್ತಾ ಇದೆ ಎಲ್ಲಾ ಯಶಸ್ಸನ್ನ ನೋಡಿ ಸಂತೋಷ ಪಡೋ ಮುಖ್ಯವಾದ ವ್ಯಕ್ತಿನೇ ಇಲ್ವೇನೋ ಅನ್ನಿಸ್ತಾ ಇದೆ ಬಹಳ ಮಿಸ್ ಮಾಡಿಕೊಳ್ತಾ ಇದ್ದೀನಿ ಎಂದಿದ್ದಾರೆ ನೋಡಿದ್ರಲ್ಲ ಸ್ನೇಹಿತರೇ ಧ್ರುವ ಸರ್ಜಾ ಅವರ ಮನಮಿಡಿಯುವ ಮಾತುಗಳು ಅವರು ಕುಟುಂಬ ಕಾಲದಿಂದಲೂ ಕೂಡ ಪ್ರತಿಭಾನ್ವಿತ ಹಾಗೂ ಪವಿತ್ರವಾದ ಕುಟುಂಬದಿಂದ ಬಂದಿರುವವರು ಇವರ ಕುಟುಂಬಕ್ಕೆ ಇನ್ನು ಮೇಲಾದರೂ ಕೂಡ ಆಂಜನೇಯನ ಆಶೀರ್ವಾದದಿಂದ ಶುಭವಾಗಲಿ ಈ ಮಾಹಿತಿಗಾಗಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ ಜೈ ಆಂಜನೇಯ.

By admin

Leave a Reply

Your email address will not be published. Required fields are marked *