ನಟಿ ಆರತಿ ಈಗ ಮಾಡುತ್ತಿರುವ ಕೆಲಸವಾದ್ರೂ ಏನು? ಮನಮಿಡಿಯುವ ಸ್ಟೋರಿ ... - Karnataka's Best News Portal

ನಟಿ ಆರತಿ ಎಂದ ಕೂಡಲೇ ನೆನಪಾಗುವುದು ರಂಗನಾಯಕಿ ಎಂಬ ಸಿನಿಮಾದಲ್ಲಿ ಅವರ ಅಮೋಘ ಅಭಿನಯ ಎಪ್ಪತ್ತು ಎಂಬತ್ತರ ದಶಕದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿದ್ದರು. 125 ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿ 1980 ರ ನಂತರ ಚಿತ್ರರಂಗದಿಂದ ದೂರ ಸರಿದರು, ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸತ್ತ ಬಳಿಕ ಈ ನಟಿ ದೇಶಬಿಟ್ಟು ಹೊರಟು ಹೋದರು ಎಂದು ಹೇಳಬಹುದು. ಈಗ ಈ ನಟಿ ಎಲ್ಲಿದ್ದಾರೆ ಯಾವ ದೇಶದಲ್ಲಿ ಎಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದರೆ ಸಲಾಂ ಹೊಡಿತೀರಾ ಇದೆಲ್ಲದರ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ. ನಟಿ ಆರತಿಯವರು ಪುಟ್ಟಣ್ಣ ಕಣಗಲ್ ಅವರನ್ನು ಮದುವೆಯಾಗ ಬೇಕಿತ್ತು ಆದರೆ ವಿಧಿಯ ಆಟ ಯಾವುದನ್ನು ನಡೆಯಲು ಬಿಡಲಿಲ್ಲ, ಆರತಿ ತಮ್ಮ ಪತಿ ಚಂದ್ರಶೇಖರ್ ದೇಸಾಯಿ ಗೌಡ ಮತ್ತು ಅವರ ಮಕ್ಕಳ ಜೊತೆ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ.

ಭಾರತದಲ್ಲಿ ಕಲಿತಂತಹ ಸಂಸ್ಕೃತಿಯನ್ನು ಮರೆಯದಂತಹ ನಟಿ ಆರತಿಯವರು ಗಂಡ ಮತ್ತು ಮಕ್ಕಳ ಜೊತೆ ಸೇರಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಒಂದು ಆದಾಯದ ಬಹುಪಾಲನ್ನು ಧೀನಬಂಧು ಎಂಬ ಮಕ್ಕಳ ಆಶ್ರಮಕ್ಕಾಗಿ ಮೀಸಲಿಟ್ಟಿದ್ದಾರೆ ಇದಲ್ಲದೆ ಹಲವಾರು ವಿದ್ಯಾರ್ಥಿಗಳಿಗೆ ವೇತನವನ್ನು ನೀಡುತ್ತಿದ್ದಾರೆ. ಜೊತೆಗೆ 40 ಶಾಲೆಗಳನ್ನು ದತ್ತು ಪಡೆದು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ, ಹೆಣ್ಣುಮಕ್ಕಳಿಗಾಗಿ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುತ್ತಿದ್ದಾರೆ ಗ್ರಾಮಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಕೂಡ ಮಾಡಿಸಿದ್ದಾರೆ. ಉತ್ತರ ಕರ್ನಾಟಕದ ಸುಮಾರು 70 ಗ್ರಾಮಗಳನ್ನು ದತ್ತು ಪಡೆದು ಗ್ರಾಮ ಸುಧಾರಣೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲ ಸುಧಾರಣ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ. ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *