ಧ್ರುವ ಸರ್ಜಾ ಘೋಷಿಸಿದ ಸಿಹಿ ಸುದ್ದಿಯಾದ್ರು ಏನು?ಬೆಚ್ಚಿಬೀಳ್ತಿರಾ... - Karnataka's Best News Portal

ಚಿರಂಜೀವಿ ಸರ್ಜಾ ಅವರ ಮಗುವಿನ ಆಗಮನದಿಂದ ಖುಷಿಯಲ್ಲಿರುವ ಸರ್ಜಾ ಕುಟುಂಬ ಇದೀಗ ಹೊಸದೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ಕಳೆದ 5 ತಿಂಗಳಿಂದ ಸರ್ಜಾ ಕುಟುಂಬದಲ್ಲಿ ಮತ್ತು ಮೇಘನಾ ರಾಜ್ ಅವರ ಕುಟುಂಬದಲ್ಲಿ ಯಾವುದೇ ಸಂತೋಷ ಇರಲಿಲ್ಲ ಯಾವುದೇ ಶುಭ ಸಮಾರಂಭಗಳು ಇರಲಿಲ್ಲ. ಮಗು ನಮ್ಮ ಬಾಳಲ್ಲಿ, ಕುಟುಂಬದಲ್ಲಿ ಹೊಸ ಭರವಸೆಯನ್ನು ತರಲಿದೆ ಎಂದು ನಂಬಿಕೆಯನ್ನು ಎರಡು ಕುಟುಂಬದವರು ಇಟ್ಟಿದ್ದಾರೆ. ಎಲ್ಲರೂ ಅಂದುಕೊಂಡಂತೆ ಅಕ್ಟೋಬರ್ 22 ರಂದು ಜೂನಿಯರ್ ಚಿರುವಿನ ಆಗಮನ ಆಗಿದೆ ಎರಡು ಕುಟುಂಬಗಳಲ್ಲಿ ಹೊಸ ಚೇತನ ಮೂಡಿದೆ ಇದೆಲ್ಲದರ ನಡುವೆ ದ್ರುವ ಸರ್ಜಾ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಹಾಗಾದರೆ ದ್ರುವ ಸರ್ಜಾ ಹಂಚಿಕೊಂಡಿರುವ ಹೊಸ ಸುದ್ದಿ ಏನು,

ಅಣ್ಣನ ಮಗುವಾದ ನಂತರ ಈ ವಿಷಯವನ್ನು ದ್ರುವ ಸರ್ಜಾ ಅವರು ಇದೀಗ ಮಗು ಮನೆಗೆ ಬರುತ್ತಿದ್ದಂತೆ ತಮ್ಮ ಎಲ್ಲಾ ಹೊಸ ಪ್ರಾಜೆಕ್ಟ್ ಗಳ ವಿಷಯಗಳನ್ನು ತಿಳಿಸಿದ್ದಾರೆ. ದಿನಗಳ ಹಿಂದೆಯಷ್ಟೇ ದೇವಸ್ಥಾನದಲ್ಲಿ ದ್ರುವ ಸರ್ಜಾ ಅವರು ದುಬಾರಿ ಚಿತ್ರದ ಮುಹೂರ್ತವನ್ನು ನೆರವೇರಿಸಿದರು ಪೊಗರು ಸಿನಿಮಾದ ನಿರ್ದೇಶಕ ನಂದ ಕಿಶೋರ್ ಅವರು ನಿರ್ದೇಶಿಸುತ್ತಿರುವ ಹೊಸ ಸಿನಿಮಾ ದುಬಾರಿ ಸಿನಿಮಾ ತಯಾರಾಗುತ್ತಿದೆ. ಸದ್ಯದಲ್ಲೇ ಘರ್ಜಿಸಲು ಬರುತ್ತಿದ್ದೇನೆ ಎಂದು ಹೊಸ ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳ ಮಹಾ ಪೂರವೇ ಹರಿದುಬರುತ್ತಿದೆ ಜೊತೆಗೆ ದೊಡ್ಡ ಯಶಸ್ಸು ಕಾಣಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಸಾವನಪ್ಪಿದ ದಿನದಿಂದ ದುಃಖದಲ್ಲಿದ್ದ ಕುಟುಂಬಕ್ಕೆ ಈಗ ತಕ್ಕಮಟ್ಟಿಗೆ ಖುಷಿಯ ದಿನಗಳು ಬರತೊಡಗಿದೆ.

By admin

Leave a Reply

Your email address will not be published. Required fields are marked *