ಮೇಘನರಾಜ್ ತಾಯಿ ಪ್ರಮೀಳ ಜೋಷಾಯಿ ಹೊಸ ವಿಷಯವೊಂದನ್ನು ಹೇಳಿದ್ದಾರೆ ನೋಡಿದ್ರೆ ಶಾಕ್ ... - Karnataka's Best News Portal

ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಮೆಟ್ಟಲು ಹತ್ತಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾದ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಜೋಡಿಯನ್ನು ಕಂಡು ಆ ದೇವರಿಗೂ ಕೂಡ ಅಸೂಯೆ ಆಯಿತೇನೊ ಮದುವೆಯಾದ ಎರಡು ವರ್ಷಕ್ಕೆ ಇವರ ಸಂಭ್ರಮವನ್ನು ಉಳಿಸಲಿಲ್ಲ. ಇಂದು ಚಿರು ನಮ್ಮೊಂದಿಗೆ ಇಲ್ಲ ಅದರ ಬದಲಾಗಿ ಅವರ ಪ್ರತಿರೂಪವಾದ ಮರಿ ಚಿರು ನಮ್ಮೊಂದಿಗೆ ಇದ್ದಾರೆಂಬುದು ಸಂತೋಷದ ವಿಷಯ ಇದೇವೇಳೆ ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯಿ ಅವರು ಮೇಘನಾ ಮತ್ತು ಚಿರಂಜೀವಿ ಸರ್ಜಾ ಅವರ ಬಗ್ಗೆ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ ಈ ವಿಷಯ ಕೇಳಿದರೆ ನಿಮಗೂ ಕೂಡ ನೋವಾಗುತ್ತದೆ. ಮೇಘನಾ ರಾಜ್ ಅವರ ತಾಯಿ ಹೇಳಿದ್ದೇನು, ಈ ವಿಷಯವನ್ನು ಹೇಳಿದ್ದೇಕೆ ಈ ಮಾಹಿತಿಯನ್ನು ನಾವಿಲ್ಲಿ ತಿಳಿಸುತ್ತೇವೆ.

ಹೌದು ಸ್ಯಾಂಡಲ್ ವುಡ್ ಹಿರಿಯ ಕಲಾವಿದರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರು ಮೇಘನಾ ರಾಜ್ ರವರಿಗೆ ಮದುವೆ ಮಾಡಿ ಬಹಳ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದರು. ಸುಂದರ್ ರಾಜ್ ಹಾಗು ಪ್ರಮಿಳರವರು ತಮ್ಮ ಹೋಮ್ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡಬೇಕು ಎಂಬ ಕನಸು ಇಟ್ಟುಕೊಂಡಿದ್ದರು.ಇವರ ಆಸೆ ಇದೀಗ ಈಡೇರಲಿಲ್ಲ ಈ ಸಿನಿಮಾದಲ್ಲಿ ಹೀರೋ ಆಗಿ ಚಿರು ಅವರು ಹಾಗೂ ಹೀರೋಯಿನ್ ಆಗಿ ಮೇಘನ ಅವರು ಮತ್ತು ಪೋಷಕ ನಟರಾಗಿ ತಾವೇ ನಟಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಚಿರು ಮತ್ತು ಮೇಘನಾ ಅವರಿಗೆ ಸಿನಿಮಾ ಮಾಡುವ ಕನಸು ಕನಸಾಗಿಯೇ ಉಳಿದಿರುವುದು ತುಂಬಾ ದುಃಖವಾಯಿತು ಎಂದು ಪ್ರಮೀಳಾ ಜೋಷಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

By admin

Leave a Reply

Your email address will not be published. Required fields are marked *