ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ತುಂಬಾನೇ ಸದ್ದು ಮಾಡುತ್ತಿದೆ ಡಬ್ಬಿಂಗ್ ಧಾರಾವಾಹಿಗಳು ಈ ಮಟ್ಟಿಗೆ ಯಶಸ್ಸು ಪಡೆಯುತ್ತದೆ ಎಂದು ಯಾರೂ ಸಹ ಊಹೆ ಮಾಡಿರಲಿಲ್ಲ ಇದೀಗ ಈ ಈ ಸಾಲಿಗೆ ಮಹಾನಾಯಕ ಧಾರವಾಹಿ ಕೂಡ ಸೇರಿದ್ದು ಇದು ವಾರದಲ್ಲಿ ಕೇವಲ 2 ದಿನ ಪ್ರಸಾರವಾಗುತ್ತಿದ್ದು ಒಳ್ಳೆಯ TRP ಪಡೆದುಕೊಳ್ಳುತ್ತಿದೆ ಮಹಾನಾಯಕ ಧಾರಾವಾಹಿಯ ಪ್ರಮುಖ ಪಾತ್ರ ಎಂದರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪಾತ್ರ ಮಾಡುತ್ತಿರುವ ಪುಟ್ಟ ಹುಡುಗ ಭೀಮರಾವ್ ಈ ಪಾತ್ರ ಮಾಡುವ ಹುಡುಗ ಮೂಲತಹ ಹಿಂದಿಯವನು ಆಗಿದ್ದುರೂ ಕೂಡ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಈ ಪುಟ್ಟ ಹುಡುಗ ಯಾರು ಅವರನ್ನು ಆತನ ವಯಸ್ಸೆಷ್ಟು ಈತನ ಹಿನ್ನೆಲೆ ಏನು ಮತ್ತು ಸಂಭಾವನೆ ಎಷ್ಟು ಎಂದು ತಿಳಿಸುತ್ತೇವೆ.
ಮೊದಲಿಗೆ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಬಂದಾಗ ಎಷ್ಟೊ ಅಡೆತಡೆಗಳು ಬಂದವು ಧಾರಾವಾಹಿ ನಿಲ್ಲಿಸುವಂತೆ ವಾಹಿನಿಗೆ ಪ್ರಾಣ ಬೆದರಿಕೆಗಳು ಬಂದವು ಆದರೆ ಇದೀಗ ಇದೆಲ್ಲವನ್ನು ಮೀರಿ ಕಾರ್ಯಕ್ರಮ ಜನರ ಮನಸ್ಸನ್ನು ಗೆದ್ದಿದೆ. ಅದರಲ್ಲಿ ಪುಟ್ಟಹುಡುಗ ಭೀಮರಾವ್ ಅಲಿಯಾಸ್ ಆಯುರ್ ಭಾನುಶಾಲಿ ಎಂಟು ವರ್ಷದ ಬಾಲಕ ತನ್ನ ಅಭಿನಯದಿಂದ ಎಲ್ಲರ ಹೃದಯ ಗೆದ್ದಿದ್ದಾನೆ ಮುಂಬೈಯಲ್ಲಿ 2012ರಲ್ಲಿ ಮಯೂರ್ ಭಾನುಶಾಲಿ ಮತ್ತು ದೀಪ ಭಾನುಶಾಲಿ ಎರಡನೆ ಮಗನಾಗಿ ಜನಿಸಿದ ಹುಡುಗನಿಗೆ ಒಬ್ಬಳು ಅಕ್ಕ ಸಹ ಇದ್ದು ಚಿಕ್ಕವಯಸ್ಸಿನಿಂದಲೂ ಅಭಿನಯದ ಹೆಚ್ಚಿನ ಒಲವು. ಈ ಹುಡುಗ ಅನೇಕ ಧಾರಾವಾಹಿಗಳಲ್ಲು ಸಹ ನಟಿಸಿದ್ದಾನೆ ಸಂಭಾವನೆ ವಿಚಾರದಲ್ಲಿ ಕೂಡ ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಬಾಲಕ ಎಂದು ಹೇಳಬಹುದು ಒಂದು ಎಪಿಸೋಡ್ 25000 ಪಡೆಯುತ್ತಾನೆ.
