ಮೇಘನಾ ರಾಜ್ ರವರ ಮಗುವಿನ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ನೋಡಿಲ್ಲ ಅಂದ್ರೆ ಮಿಸ್ ಮಾಡದೆ ನೋಡಿ ..... - Karnataka's Best News Portal

ಇದೀಗ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು ಮಗು ಹುಟ್ಟಿದ ನಂತರ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗಿದೆ. ಹಾಗೆ ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ ತೊಟ್ಟಿಲನ್ನು ಉಡುಗೊರೆಯಾಗಿ ಅಭಿಮಾನಿ ಒಬ್ಬರು ನೀಡಿರುವುದ್ದಾರೆ. ಈ ಶುಭ ಸಮಾರಂಭದಲ್ಲಿ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬ ಭಾಗಿಯಾಗಿದ್ದು ಎಲ್ಲರ ಮುಖದಲ್ಲಿ ಸಂತೋಷ ಮನೆಮಾಡಿದೆ ಹೌದು ಚಿರು ಅವರವರು ಸಾವನ್ನಪ್ಪಿದ ನಂತರ ಯಾವುದೇ ಶುಭ ಸಮಾರಂಭಗಳು, ಶುಭ ಸೂಚನೆಗಳು ಇಲ್ಲದಿರುವಾಗ ಮಗು ಹುಟ್ಟಿದ ನಂತರ ಇದೀಗ ಎಲ್ಲರ ಮುಖದಲ್ಲಿ ಮಂದಹಾಸ ಚಿಗುರೊಡೆಯುತ್ತಿದೆ ಎಂದೆ ಹೇಳಬಹುದು.

ಮಗು ಎಂದರೆ ಸಂಭ್ರಮ ಮಗು ಹುಟ್ಟಿದರೆ ಎಲ್ಲಿಲ್ಲದ ಆನಂದ ಆದರೆ ಈ ಸಂಭ್ರಮವನ್ನು ಆಚರಿಸಲು ಚಿರಂಜೀವಿ ಸರ್ಜಾ ಅವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಈಗ ತಂದೆ ಮತ್ತು ತಾಯಿ ಸ್ಥಾನ ಎರಡುನೂರು ಮೇಘನ ರಾಜ್ ರವರು ತುಂಬಾ ಬೇಕಾಗಿದೆ. ಹೌದು ಮಗುವಿನ ಕಾಳಜಿ, ಮಗುವಿನ ಭವಿಷ್ಯದ ಬಗೆಗಿನ ಎಲ್ಲ ಯೋಜನೆ ಮತ್ತು ಚಿರಂಜೀವಿ ಸರ್ಜಾ ರವರು ಮಗುವನ್ನು ಬೆಳೆಸಬೇಕೆಂಬ ಕನಸುಗಳು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮೇಘನಾ ರಾಜ್ ರವರು ಮಗುವನ್ನು ಬೆಳೆಸಬೇಕಾಗಿದೆ ದೇವರು ಆ ಶಕ್ತಿಯನ್ನು ಮೇಘನಾ ರಾಜ್ ರವರಿಗೆ ಕೊಡಲಿ. ಈ ಮಗುವು ಅವರ ಕುಟುಂಬದವರ ಬಾಳಲ್ಲಿ ಹೊಸ ಚೇತನವನ್ನು ತುಂಬಿ, ಅವರ ಸಂತೋಷಕ್ಕೆ ಕಾರಣವಾಗಿ ಜನರು ಮೆಚ್ಚುವಂತಹ ವ್ಯಕ್ತಿಯಾಗಿ, ಚಿರು ತನ್ನ ವ್ಯಕ್ತಿತ್ವದಿಂದ ಗಳಿಸಿದ್ದ ಅಭಿಮಾನಿಗಳು ಮತ್ತು ಸ್ನೇಹವನ್ನು ಈ ಮಗುವು ಗಳಿಸಿ ಸಜ್ಜನಿಕೆ ಇಂದ ಬಾಳಲಿ.

By admin

Leave a Reply

Your email address will not be published. Required fields are marked *