ಮಗುವನ್ನು ಲಿಪ್ಟನಲ್ಲಿ ತರಬೇಕಾದ್ರೆ ನಡೆದ ಆ ಒಂದು ಘಟನೆ ಬಗ್ಗೆ ಮೇಘನಾ ಹೇಳಿದ ಸತ್ಯ..! ಅಂದು ನಡೆದಿದ್ದು ಇದೆ - Karnataka's Best News Portal

ನಮಸ್ತೆ ಗೆಳೆಯರೇ ಇಂದು ಸುಂದರ್ ರಾಜ್ ಅವರ ಮನೆಯಲ್ಲಿ ಸಂಭ್ರಮ ಹರುಷ ದ ದಿನ ಹೌದು ಮೇಘನಾ ಹಾಗೂ ಚಿರು ಮಗುವಿಗೆ ಇಂದು ತೊಟ್ಟಿಲಿನ ಶಾಸ್ತ್ರವನ್ನು ಕುಟುಂಬದ ಸಮ್ಮುಖದಲ್ಲಿ ನೆರವೇರಿಸಿದ್ದಾರೆ ಉತ್ತರ ಕರ್ನಾಟಕದ ಸ್ತ್ರೀ ಶಕ್ತಿ ಸಂಘವೊಂದರ ಸ್ತ್ರೀಯರು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ ತೊಟ್ಟಿಲಿನಲ್ಲಿಯೇ ಮೇಘನಾ ಅವರು ತವರು ಮನೆಯ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದು ವಿಶೇಷವಾಗಿದೆ ನಿಜ ಗೆಳೆಯರೇ ಪ್ರೀತಿಯಿಂದ ಕೊಟ್ಟ ಉಡುಗೊರೆಗೆ ಗೌರವ ಕೊಟ್ಟು ಅದನ್ನೇ ತನ್ನ ತವರು ಮನೆಯ ತೊಟ್ಟಿಲೆಂದು ಭಾವಿಸಿ ಅದರಲ್ಲಿಯೇ ಶಾಸ್ತ್ರ ಮಾಡಿಸಿದರು ಇನ್ನು ಚಿರು ಹೋದ ಸಮಯದಿಂದ ಮಾದ್ಯಮದ ಮುಂದೆ ಪ್ರತಿಕ್ರಿಯೆ ನೀಡದ ಮೇಘನಾ ರಾಜ್ ಅವರು ಇಂದು ಕಾರ್ಯಕ್ರಮಕ್ಕೆ ಮಾದ್ಯಮದವರನ್ನು ಆಹ್ವಾನಿಸಿ ಮಾತನಾಡಿದ್ದಾರೆ ಕರ್ನಾಟಕದ ಸಮಸ್ತ ಜನತೆ ತೋರಿದ ಪ್ರೀತಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ನನಗಾಗಿ ನಾನೇ ನಿಮ್ಮ ಮುಂದೆ ಬಂದು ಮಾತನಾಡುವ ಸಲುವಾಗಿ ಇಷ್ಟು ದಿನ ವ್ಯಯಕ್ತಿಕ ಸಮಯ ನೀಡಿದಿರಿ ಆದರೆ ಬಹುಶಃ ಎಷ್ಟು ಸಮಯ ನೀಡಿದರೂ ಸಾಲೋದಿಲ್ಲವೇನೋ ಆದರೆ ಇಂದು ನಿಮ್ಮ ಮುಂದೆ ಬರಲು ಸಮಯ ಬಂದಿದೆ ಹಾಗೂ ಇಂದು ಮಗನ ತೊಟ್ಟಿಲ ಶಾಸ್ತ್ರ ನೆರವೇರುತ್ತಿದೆ ಒಂದು ರೀತಿ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ ಚಿರು ಎಂದರೆ ಸಂಭ್ರಮ ಅವರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳು ಕೂಡ ಸಂತೋಷವಾಗಿಯೇ ನಡೆಯಬೇಕು ಅದರಲ್ಲೂ ನಮ್ಮ ವಿಸ್ತರಿಸಿದ ಕುಟುಂಬದವರು ನೀಡಿದ ಉಡುಗೊರೆಯಲ್ಲಿ ನನ್ನ ಮಗನ ಶಾಸ್ತ್ರ ನಡೆಯುತ್ತಿರುವುದು ಮತ್ತಷ್ಟು ಸಂತೋಷ ನೀಡಿದೆ
ಆ ಘಟನೆ ನಡೆದ ಸಮಯದಲ್ಲಿ ನಾನು ಸಂಪೂರ್ಣವಾಗಿ ಬ್ಲಾಂಕ್ ಆಗಿದ್ದೆ ಈಗಲೂ ಕೂಡ ಬ್ಲಾಂಕ್ ಆಗಿಯೇ ಇದೀನಿ ನಾನು ಯಾಕ್ ಇರ್ಬೇಕು ಅನ್ನೋ ಅಷ್ಟು ಕುಗ್ಗಿ ಹೋಗಿದ್ದೆ ಆದರೆ ಬದುಕೋಕೆ ಕಾರಣಗಳನ್ನ ದೇವರು ಕೊಡ್ತಾನೆ ಅನ್ನೋದು ನಿಜ ಮಗ ಬಂದ ಅಪ್ಪ ಅಮ್ಮನ ಜವಾಬ್ದಾರಿ ಇದೆ ಎಲ್ಲವೂ ಮುಂದುವರಿಬೇಕು ಅಷ್ಟೇ ನಾನ್ ಇಷ್ಟ್ ಧೈರ್ಯವಾಗಿದ್ದೀನಿ ಅಂತ ಎಲ್ಲಾ ಹೇಳ್ತೀರಾ ನಾನು ಧೈರ್ಯವಾಗಿದ್ದನ್ನ ನೀವೆಲ್ಲಾ ನೋಡಿದಿರಾ ಆದರೆ ನಾನು ಕುಗ್ಗಿ ಹೋಗಿದ್ದನ್ನ ನಮ್ಮ ಅಮ್ಮ ಮಾತ್ರ ನೋಡಿದ್ರು ಯಾಕೆ ಹೀಗಾಯ್ತು


ಏನಾಯ್ತು ಅಂದುಕೊಳ್ಳೋ ಅಷ್ಟರಲ್ಲಿ ಎಲ್ಲವೂ ಆಗಿ ಹೋಗಿತ್ತು ನಮ್ಮ ಫ್ಯಾಮಿಲಿ ನಲ್ಲಿ ನಮ್ ಅಪ್ಪ ಬಹಳ ಅಂದ್ರೆ ಬಹಳ ಪ್ಯಾನಿಕ್ ಗರ್ಭಿಣಿ ಆದಾಗಿನಿಂದನೂ ನಮ್ ಅಪ್ಪ ಬಹಳ ಕೇರ್ ಮಾಡುತ್ತಿದ್ದರು ಬರ್ತಾ ಬರ್ತಾ ಯಾವ ಮಟ್ಟಕ್ಕೆ ಆಯ್ತು ಅಂದ್ರೆ ನಾನ್ ಬಾಗಿಲಿಂದ ಹೊರಗೆ ಬರೋಕೆ ಬಿಡ್ತಿರ್ಲಿಲ್ಲ ಇರಿಟೇಟ್ ಆಗೋಕೆ ಶುರು ಆಗೋಯ್ತು ಆದರೆ ನಮ್ ಅಪ್ಪ ಅಮ್ಮ ನನಿಗೆ ತೋರಿಸ್ತಾ ಇದ್ದ ಪ್ರೀತಿ ನಾನ್ ಮಗುಗೆ ಜನ್ಮ ಕೊಟ್ಟಾಗ ಅರ್ಥ ಆಯ್ತು ಆಸ್ಪತ್ರೆಯಲ್ಲಿ ಮಗುನಾ ಕರ್ಕೊಂಡ್ ಬರುವಾಗ ಮಗು ನರ್ಸ್ ಕೈಯಲ್ಲಿ ಇತ್ತು ಲಿಫ್ಟ್ ನಲ್ಲಿ ಬರ್ತಾ ಇದ್ವಿ ನಾನ್ ಲಿಫ್ಟ್ ಇಂದ ಹೊರಗೆ ಬಂದೆ ಆದ್ರೆ ಮಗುನ ಕರ್ಕೊಂಡ್ ಬರೋಕ್ ಮುಂಚೆ ಡೋರ್ ಕ್ಲೋಸ್ ಆಗಿ ಲಿಫ್ಟ್ ಕೆಳಗೆ ಹೊರಟೋಯ್ತು ಆ ಒಂದು ಕ್ಷಣ ನನಗೆ ಆದ ಅನುಭವದಿಂದ ಗೊತ್ತಾಯ್ತು ಪಾಪ ನಮ್ ಅಪ್ಪ ಅಮ್ಮ ಯಾಕ್ ಮಗಳನ್ನ ಅಷ್ಟ್ ಕೇರ್ ಮಾಡ್ತಾರೆ ಅಂತ ಮಗು ಹುಟ್ಟಿದ ನಂತರ ನಮ್ ಅಪ್ಪ ಅಮ್ಮನ ಮೇಲಿನ ಗೌರವನೂ ಜಾಸ್ತಿ ಆಯ್ತು ನಮ್ಮ ಅಪ್ಪ ನನಗಾಗಿ ಯಾವತ್ತೂ ಹರಕೆ ಕಟ್ಟಿಕೊಂಡದ್ದಿಲ್ಲ ಅವರು ಗಡ್ಡ ಬಿಟ್ಟಿದ್ದು ನಾನ್ ನೋಡೇ ಇಲ್ಲ ಆದರೆ ಮಗು ಗೋಸ್ಕರ ಹರಕೆ ಕಟ್ಕೊಂಡು ತಿರುಪತಿಗೆ ಹೋಗಿ ಬಂದ್ರು ನನ್ನ ಸ್ನೇಹಿತರೆಲ್ಲಾ ಈಗಲೂ ಪ್ರತಿದಿನ ನನಗೆ ಫೋನ್ ಮಾಡಿ ನನ್ನ ಜೊತೆ ಮಾತಾಡ್ತಾರೆ ಜನರು ನನ್ನ ಕುಟುಂಬ ನನ್ನ ಫ್ರೆಂಡ್ಸ್ ಎಲ್ಲರೂ‌ ಅಷ್ಟೇ ನೀವೇಲ್ಲಾ ತೋರ್ಸಿರೋ ಪ್ರೀತಿಗೆ ಎಷ್ಟು ಧನ್ಯವಾದಗಳನ್ನ ಹೇಳಿದ್ರೂ ಸಾಲೋದಿಲ್ಲ ನನ್ನ ಮಗನಿಗೆ ನೀವೆಲ್ಲಾ ಆಶೀರ್ವಾದ ಮಾಡಿ ಎಂದು ಭಾವುಕರಾಗಿಯೇ ಮನವಿ ಮಾಡಿಕೊಂಡರು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *