ನಿಜವಾಗ್ಲೂ ರವಿಬೆಳಗೆರೆಯವರು ಎಂತಹ ಜೀವನ ನಡೆಸಿದರು ನಿಮಗಿದು ಗೊತ್ತಾ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

1958 ರ ಮಾರ್ಚ್ 15ರಂದು ರವಿಬೆಳಗೆರೆಯವರು ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ ಜನಿಸಿದರು ಇವರ ತಾಯಿ ಪಾರ್ವತಮ್ಮ ತಂದೆ ಬಗ್ಗೆ ಎಲ್ಲೂ ಜಾಸ್ತಿ ಮಾಹಿತಿ ಕೊಟ್ಟಿಲ್ಲವಾದರೂ ಬೆಳಗೆರೆಯವರು ಹೇಳಿಕೊಂಡಿರುವಂತೆ ಅವರ ತಂದೆಯ ಓರ್ವ ಬರಹಗಾರರಾಗಿದ್ದರು. ಆದರೆ ಬೀಚಿಯವರು ನನ್ನ ಬೌತಿಕ ತಂದೆ, ಬಯೋಲಾಜಿಕಲ್ ಫಾದರ್ ಎಂದು ಹೇಳಿಕೊಂಡಿದ್ದಾರೆ ನಾನು ಇಷ್ಟೆಲ್ಲಾ ಬರೆಯಲು ಅವರೇ ಕಾರಣ ಎಂದು ಎಷ್ಟು ಸಲ ಹೇಳಿಕೊಂಡಿದ್ದಾರೆ ರವಿಬೆಳಗೆರೆ ಅವರು. ಬೀಚಿ ಕೂಡ ಬಳ್ಳಾರಿಯವರೆ ರವಿಬೆಳಗೆರೆಯವರು ಪ್ರಾಥಮಿಕ ಶಿಕ್ಷಣದ ತುಮಕೂರಿನ ಸಿದ್ದಗಂಗಾ ಹೈಸ್ಕೂಲ್ ನಲ್ಲಿ ಮುಗಿಸಿದರು ಆದರೆ SSLCಯಲ್ಲಿ ರವಿಬೆಳಗೆರೆಯವರು ಫೇಲಾಗಿದ್ದರು ಜೀವನದಲ್ಲಿ ರೂಂಬಾಯ್, ರಿಸೆಪ್ಶನಿಸ್ಟ್, ನ್ಯೂಸ್ ಪೇಪರ್ ಬಾಯ್, ಮಿಲ್ಕ್ ಸೆಲ್ಲರ್, ಮೆಡಿಕಲ್ ರೆಪ್ರೆಸೆಂಟೇಟಿವ್, ಥಿಯೇಟರ್ ಗೇಟ್ ಕೀಪರ್ ಕೂಡಆಗಿ ರವಿಬೆಳಗೆರೆಯವರು ಕೆಲಸ ಮಾಡುತ್ತಿದ್ದರು.

ಪ್ರಿಂಟಿಂಗ್ ಪ್ರೆಸ್ ಕೂಡ ತೆರೆದು ಆದರೆ ಸೆಕ್ಸಸ್ ಕಾಣಲಿಲ್ಲ ಆದರೆ ಏನಾದರೂ ಮಾಡಬೇಕು ಎಂಬ ಛಲದಿಂದ ರವಿಬೆಳಗೆರೆಯವರು ತಮ್ಮ ಶಿಕ್ಷಣವನ್ನು ಮುಂದುವರಿಸಿ ಬಳ್ಳಾರಿಯಲ್ಲಿ ಇತಿಹಾಸ ಮತ್ತು ಪಾಚ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದುಕೊಂಡರು ನಂತರ ಬಳ್ಳಾರಿ, ಹಾಸನ, ಹುಬ್ಬಳ್ಳಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಪತ್ರಿಕೋದ್ಯಮದತ್ತ ಒಲವಿದ್ದರಿಂದ ಕರ್ಮವೀರ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದ ಇವರ ಬದುಕು ಮತ್ತೊಂದು ತಿರುವು ಪಡೆಯಿತು ಹೀಗೆ ಬೆಂಗಳೂರಿಗೆ ಬಂದವರು ಕ್ಕ್ರೈಂ ಸಂಬಂಧಿತ ವರದಿಗಳನ್ನು ಬರೆದರು ಅವು ತುಂಬಾ ಫೇಮಸ್ ಆದವು ನಂತರ ನಂತರ ಅವರಿವರ ಸಹಾಯದಿಂದ 1995 ರಲ್ಲಿ ಹಾಯ್ ಬೆಂಗಳೂರು ಎಂಬ ವೀಕ್ಲಿ ಟ್ಯಾಬ್ಲಾಯ್ಡ್ ಶುರುಮಾಡಿದರು. ಪದ್ಮ ನಗರದ ಒಂದು ಚಿಕ್ಕ ಕಚೇರಿಯಲ್ಲಿ ಶುರುವಾದ ಈ ಟಾಬ್ಲಾಯ್ಡ್ ಸಕ್ಸಸ್ ಕಾಣೋಕೆ ಜಾಸ್ತಿ ದಿನ ಬೇಕಾಗಲಿಲ್ಲ.

By admin

Leave a Reply

Your email address will not be published. Required fields are marked *