ನಟ ಜಗ್ಗೇಶ್ ಅವರ ಮನೆಯಲ್ಲಿ ನೆನ್ನೆ ನೆಡೆದ ಮಹಾ ಪವಾಡ ನೋಡಿದ್ರೆ ಬೆಚ್ಚಿ ಬೀಳ್ತಾರೆ... - Karnataka's Best News Portal

ನಟ ಜಗ್ಗೇಶ್ ಅವರು ಸಿನಿಮಾ ಕಿರುತೆರೆಯ ಜೊತೆಗೆ ರಾಜಕೀಯದಲ್ಲೂ ಕೂಡ ಸಕ್ರಿಯವಾಗಿ ಇರುತ್ತಾರೆ ಇದರ ಜೊತೆಗೆ ಅವರು ಪರಮ ದೈವಭಕ್ತರು ಮಂತ್ರಾಲಯ ರಾಘವೇಂದ್ರ ಸ್ವಾಮಿಯವರ ಪರಮ ಆರಾಧಕರು ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯವಾಗಿ ಇರುತ್ತಾರೆ. ನಟ ಜಗ್ಗೇಶ್ ಅಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ, ಸಾಮಾಜಿಕ ಘಟನೆಗಳ ಬಗ್ಗೆ ಪ್ರತಿಕ್ರಿಯೆ ಕೊಡುತ್ತಾರೆ, ಮನದಲ್ಲಿರುವುದನ್ನು ಹೇಳಿಕೊಳ್ಳುತ್ತಾರೆ ಮತ್ತು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಅಭಿಮಾನಿಗಳಿಗೆ ತಿಳಿಸುತ್ತಾರೆ. ನೆನ್ನೆ ರಾತ್ರಿ ಜಗ್ಗೇಶ್ ಅವರು ಗುರು ರಾಯರ ನಡುವೆ ನಡೆದ ಮರೆಯಲಾಗದ ಘಟನೆ. ಪರಿಮಳ 9 ಗಂಟೆಗೆ ನನ್ನ ಏಕಾಂತ ಜಾಗದಲ್ಲಿ ಊಟ ಬಡಿಸಿ ಆನ್ಲೈನ್ ಕೆಲಸಕ್ಕೆ ತನ್ನ ಹಾಲ್ ಗೆ ಹೋದಳು, ನಾನು ಊಟ ಮುಗಿಸಿ ಒಂದು ಬಾರಿ ಸ್ಮರಣೆ ಸಾಲದೆ ಹಾಡು ಕೇಳುತ್ತಾ ರಾಯರು ಚಿತ್ರ ನೋಡುತ್ತಾ ಮಂತ್ರಮುಗ್ಧನ ಹಾಗೆ ಧ್ಯಾನದಲ್ಲಿ ಕೂತುಬಿಟ್ಟೆ.

ಆಗ ನನ್ನ ಮನಸ್ಸಿನಲ್ಲಿ ರಾಯರ ಜೊತೆ ಸಂಭಾಷಣೆಗೆ ಶುರುವಾಯಿತು ರಾಯರನ್ನು ನಾನು ಕೇಳಿದ್ದಲ್ಲ ಕೊಟ್ಟಿದ್ದೀರ, ಕೊಡುತ್ತಿದ್ದೀರಾ ನಿಮ್ಮ ಭಕ್ತಿಯಿಂದ ನಾನು ಕೋಟ್ಯಾಂತರ ಅಭಿಮಾನಿಗಳ ಪ್ರೀತಿ ಯೋಗ ಪಡೆದಿರುವೆ ಆದರೆ ಪಾಪಿಯಾದ ನಾನು ನಿಮ್ಮನ್ನು ಸ್ವಸ್ಥಾನಿಯಾಗಿ ಭಜಿಸುವ ವಿದ್ಯೆ ಪಡೆಯಲಿಲ್ಲ ಕಲಿಯುವ ವಯಸ್ಸಿನಲ್ಲಿ ಅಪ್ಪ ಬಿಡಲಿಲ್ಲ ಅಲ್ಪಸ್ವಲ್ಪ ಚಿತ್ರ ಹಾಡು ಚಿತ್ರಗೀತೆ ಹಾಡುವೆ ದಯಮಾಡಿ ನಿಮ್ಮ ಮುಂದೆ ಹಾಡು ಹಾಡಲು ಆಶೀರ್ವದಿಸಿ ಮನತುಂಬಿ ಹಾಡುವಾಸೆ ಎಂದು ಪ್ರಾರ್ಥಿಸುತ್ತಾರೆ ಇದ್ದಕ್ಕಿದ್ದಾಗೆ ಮಂತ್ರಾಲಯದ ಆತ್ಮೀಯ ಸಹೋದರರು ನರಸಿಂಹಾಚಾರ್ ಅವರ ವಾಟ್ಸಾಪ್ ನಿಂದ ವಿಡಿಯೋ ಕಾಲ್ ಬರುತ್ತದೆ ಸ್ವೀಕರಿಸಿದಾಗ ಬೃಂದಾವನದ ರಾಯರ ದರ್ಶನ ಆಯಿತು, ಅಳು ತಡೆಯಲಾಗಲಿಲ್ಲ ಮನಬಿಚ್ಚಿ ಅತ್ತು, ನಾನು ಹೇಳಿದ ಮಾತು ಬೃಂದಾವನ ಕೇಳುವ ಸೌಭಾಗ್ಯ ನೀಡಿದ್ದೀರಾ ಅಷ್ಟೇ ಸಾಕು ಈ ಜನ್ಮಕ್ಕೆ ಎಂದು ಹೇಳಿದ್ದಾರೆ.

By admin

Leave a Reply

Your email address will not be published. Required fields are marked *