2021 ರಲ್ಲಿ ಚಿನ್ನದ ಬೆಲೆ ಎಷ್ಟು ಆಗುತ್ತೆ ಎಂದು ಮುಂಚೆ ಭವಿಷ್ಯ ಹೇಳಿದ ಅಭಿಘ್ಯ ಮಿಸ್ ಮಾಡ್ದೆ ನೋಡಿ .... - Karnataka's Best News Portal

ಆಭರಣ ಪ್ರಿಯರಿಗೆ ಶುಭವಾರ್ತೆ ಕೊರೋನ ಮಹಾಮಾರಿಯಿಂದ ಕಂಡುಕೇಳರಿಯದ ರೀತಿಯಲ್ಲಿ ರೆಕಾರ್ಡ್ ಮಾಡುವ ಮಟ್ಟಿಗೆ ಚಿನ್ನದ ಬೆಲೆ ಗಗನಕ್ಕೇರಿದ್ದು ಇನ್ನೂ ಜನಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟಿಸುವ ಚಿನ್ನದ ಬೆಲೆ ಇದೀಗ ದಿಢೀರಾಗಿ ಇಳಿಮುಖ ಕಾಣಲು ಶುರುವಾಗಿದೆ. ಬಂಗಾರದ ಬೆಲೆ ಏರಲು ಕಾರಣ ಏನು, ಈಗ ಇಳಿಮುಖ ವಾಗುತ್ತಿರುವುದಕ್ಕೆ ಕಾರಣವೇನು, ಎರಡು-ಮೂರು ತಿಂಗಳಲ್ಲಿ ಎಷ್ಟಾಗುತ್ತದೆ ಎಂದು ಅಭಿಘ್ಯ ಆನಂದ್ ಸಂಪೂರ್ಣ ಕ್ಲಾರಿಟಿ ಕೊಟ್ಟಿದ್ದಾನೆ ಸುಮಾರು 2-3 ವರ್ಷಗಳಿಂದ ಚಿನ್ನದ ಬೆಲೆ 2,500 ದಿಂದ 3,500 ಮಧ್ಯೆ ಓಡಾಡುತ್ತಿತ್ತು. ಆಗಲೇ ಈ ಲಾಕ್ಡೌನ್ ಶುರುವಾದ ಬೆನ್ನಲ್ಲೇ 1 ಗ್ರಾಂಗೆ 5,500 ದಾಟಿತು ಇನ್ನು ಹಲವರಂತು ಈ ಬಂಗಾರದ ಬೆಲೆ ಇದೇ ರೀತಿ ಏರುತ್ತಾ ಹೋದರೆ ನವೆಂಬರ್ ಅತ್ತಿಗೆ 10 ಗ್ರಾಂಗೆ 70,000 ದಾಟಲಿದೆ ಎಂದು ಭಾವಿಸಿದರು.

ಅದಕ್ಕೆ ಶ್ರೀಮಂತರು ಮಾತ್ರವಲ್ಲದೆ ಮಧ್ಯಮ ವರ್ಗದವರು ಕೂಡ ಸಾಲ ಮಾಡಿಯಾದರೂ ಚಿನ್ನದ ಮೇಲೆ ಬಂಡವಾಳ ಹಾಕುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ 22 ಕ್ಯಾರೆಟ್ 10 ಗ್ರಾಂ ಒಡವೆ ಚಿನ್ನ ನಾಲ್ಕು ದಿನಕ್ಕೆ 2500 ಇಳಿದಿದೆ ಮತ್ತು 10 ಗ್ರಾಂ ಚಿನ್ನದ ಬೆಲೆ 46200 ಆಗಿದೆ ಆದರೆ 1 ಗ್ರಾಂಗೆ 4620 ಆಗಿದೆ ಇದರ ಜೊತೆಗೆ ದೀಪಾವಳಿ ಹಬ್ಬ ಇರುವುದರಿಂದ ಹಲವು ಅಂಗಡಿಗಳಲ್ಲಿ ಮೇಕಿಂಗ್ ಮತ್ತು ವೇಸ್ಟೇಜ್ ಗಳಲ್ಲಿ 50 ಪರ್ಸೆಂಟ್ ಆಫರ್ ನೀಡುತ್ತಿದೆ. ಇನ್ನು ಅಭಿಘ್ಯ ಹೇಳುವ ಪ್ರಕಾರ 2021ರ ಪ್ರಾರಂಭದಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಅಂದರೆ ಹಿಂದಿನ ಬೆಲೆ 3500 ಆಗಿದ್ದು 4000ಕ್ಕೆ ಇಳಿಯಲಿದೆ ಎಂದು ಹಲವು ಜ್ಯೋತಿಷ್ಯರು ಮತ್ತು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

By admin

Leave a Reply

Your email address will not be published. Required fields are marked *