ಹೊಸ ಕಾರ್ ಖರೀದಿಸುವ ಮುನ್ನ ಕಾರ್ ಕಂಡಿಷನ್ ಅನ್ನು ಚೆಕ್ ಮಾಡುವುದು ಹೇಗೆ ನೋಡಿದರೆ ಆಶ್ಚರ್ಯ ಪಡುತ್ತೀರಿ... - Karnataka's Best News Portal

ಇಂದು ಕಾರ್ ಶೋ ರೂಮ್ ಗಳಲ್ಲಿ ಇರುವ ಸೆಕೆಂಡ್ ಹ್ಯಾಂಡಲ್ ಕಾರ್ ಗಳನ್ನು ಖರೀದಿಸುವ ಮುನ್ನ ಗಮನಿಸಬೇಕಾದ ಕೆಲವೊಂದು ಆಸಕ್ತಿದಾಯಕ ವಿಚಾರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸುತ್ತೇವೆ. ಮೊದಲನೆಯದಾಗಿ ಒಬ್ಬ ಡೀಲರ್ ಒಂದು ಕಾರನ್ನು ಖರೀದಿ ಮಾಡಬೇಕು ಎಂದರೆ ಅವರು ಏನೇನು ನೋಡುತ್ತಾರೆ ಹಾಗೂ ನೀವೇನಾದರೂ ಸೆಕೆಂಡ್ ಹ್ಯಾಂಡಲ್ ಕಾರನ್ನು ಪರ್ಚೇಸ್ ಮಾಡಬೇಕು ಅಂತ ಅಂದುಕೊಂಡಿದ್ದಾರೆ ಯಾವ ಯಾವ ರೀತಿಯಲ್ಲಿ ಗಾಡಿಯನ್ನು ಟೆಸ್ಟ್ ಮಾಡಬೇಕಾಗುತ್ತದೆ. ಅಂದರೆ ಇಂಜಿನ್ ವಾಯ್ಸ್ ಆಕ್ಸಿಡೆಂಟ್ ಹೀಗೆ ನಾನಾ ರೀತಿಯ ಎಲ್ಲ ಮಾಹಿತಿಗಳು ಇದರಲ್ಲಿ ಕಂಪ್ಲೀಟ್ ಆಗಿ ತಿಳಿಸುತ್ತೆವೆ. ಕಾರ್ ಖರೀದಿ ಮಾಡುವ ಮುನ್ನ ಕಾರ್ ಬಾಡಿ ಲೈನ್ ನೋಡಬೇಕು, ಎರಡನೆಯದಾಗಿ ಇಂಜಿನ್ ನೋಡಬೇಕು, ಬಾಡಿ ಲೈನ್ ಹೇಗಿ ನೋಡಬೇಕು ಅಂದರೆ ಅದಕ್ಕೆ ಒಂದು ಮಿಷನ್ ಉಪಯೋಗ ಮಾಡುತ್ತಾರೆ ಇದನ್ನು ಗ್ಯಾಜೆಟ್ ಮಿಷನ್ ಎಂದು ಕರೆಯುತ್ತಾರೆ.

ಇದು ಪೇಂಟಿಂಗ್ ಕೋಟಿಂಗ್ ಅನ್ನು ಕಂಡು ಹಿಡಿಯುತ್ತದೆ ಅಂದರೆ ಎಷ್ಟು ಬಾರಿ ಕಾರ್ ಗೆ ಪೇಂಟಿಂಗ್ ಆಗಿದೆ ಮತ್ತು ಎಷ್ಟು ಬಾರಿ ಆಕ್ಸಿಡೆಂಟ್ ಆಗಿದೆ ಅಂತ ತೋರಿಸುತ್ತದೆ. ಈ ಮಿಷನ್ ನಲ್ಲಿ 100 ಅಥವಾ 100 ಕ್ಕಿಂತ ಕಡಿಮೆ ಬಂದರೆ ಅಥವಾ ಮಿಷನ್ ನಲ್ಲಿ 120 ತನಕ ಬಂದರೆ ಇದು ಜೆನೆನ್ಯೂನ್ ಕಾರ್ ಅಂತ ಅರ್ಥ ಅಂದರೇ ಯಾವುದೇ ರೀತಿಯ ಪೇಂಟಿಂಗ್ ಅಥವಾ ಆಕ್ಸಿಡೆಂಟ್ ಆಗಿಲ್ಲ ಅಂತ ಅರ್ಥ‌. ಅದೇ ರೀತಿ ಮಿಷನ್ ನಲ್ಲಿ 125 ರಿಂದ 150 ರ ಮೇಲೆ ಬಂದರೆ ಒಂದು ಬಾರಿ ಪೇಂಟಿಂಗ್ ಆಗಿದೆ ಅಂತ ಅರ್ಥ. ಹಾಗೇ 200 ಅಥವಾ 300 ಬಂದರೆ ಎರಡು ಮೂರು ಬಾರಿ ಪೇಂಟಿಂಗ್ ಆಗಿದೆ ಹಾಗೂ ಕಾರ್ ಈಗಾಗಲೇ ಹಲವು ಬಾರಿ ಆಕ್ಸಿಡೆಂಟ್ ಆಗಿದೆ ಅಂತ ಅರ್ಥವನ್ನು ನೀಡುತ್ತದೆ.

By admin

Leave a Reply

Your email address will not be published. Required fields are marked *