ಅಗ್ನಿಸಾಕ್ಷಿ ರಾಜೇಶ್ವರಿ ಈಗ ಎಲ್ಲಿದ್ದಾರೆ ಇವರ ಸುಂದರ ಕುಟುಂಬ ಹೇಗಿದೆ ನೋಡಿ... - Karnataka's Best News Portal

ಕನ್ನಡ ಕಿರುತೆರೆಯಲ್ಲಿ ಕಂಡ ಮೊಸ್ಟ್ ಹಿಟ್ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಕೂಡ ಒಂದು ಸಂಚಲನವನ್ನೇ ಮೂಡಿಸಿತ್ತು ಎಂದು ಹೇಳಬಹುದು. ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರವಾದ ಕೆಲವೇ ದಿನಗಳಲ್ಲಿ ಅದ್ಭುತ ದಾಖಲೆ ಬರೆಯಿತು ಈ ಧಾರವಾಹಿಯಲ್ಲಿ ಸಿದ್ದಾರ್ಥ ಹಾಗು ಸನ್ನಿಧಿ ಪಾತ್ರಗಳು ಎಷ್ಟು ಹೆಸರುಮಾಡಿದ್ದರೊ ಅದೇ ರೀತಿ ಆರಂಭದ ದಿನಗಳಲ್ಲಿ ಈ ಸೀರಿಯಲ್ನಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ನಟಿ ಚಂದ್ರಿಕಾ ಅಲಿಯಾಸ್ ರಾಜೇಶ್ವರಿ ಅವರು ನೆಗೆಟಿವ್ ಪಾತ್ರ ಮಾಡಿದ್ದರು ಕೂಡ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ರಾಜೇಶ್ವರಿ ಇನ್ನೂ ಧಾರವಾಹಿಯ ಮಧ್ಯದಲ್ಲಿ ರಾಜೇಶ್ವರಿ ಅವರಿಗೆ ವಿವಾಹ ನಿಶ್ಚಯವಾದ ಕಾರಣ ಧಾರವಾಹಿಯನ್ನು ಮಧ್ಯದಲ್ಲಿ ಬಿಡಬೇಕಾಯಿತು, ಆಸ್ಟ್ರೇಲಿಯಾದ ಉದ್ಯಮಿ ಕಲ್ಯಾಣ ಕೃಷ್ಣನ್ ಅವರನ್ನು ಮದುವೆ ಆದರು,

ಮದುವೆಯಾದ ಬಳಿಕ ಆಸ್ಟ್ರೇಲಿಯಾದಲ್ಲಿ ಸೆಟಲ್ ಆದ ರಾಜೇಶ್ವರಿಯವರು ಸಿಡ್ನಿಯಲ್ಲಿ ಕೆಲಸಕ್ಕೆ ಕೂಡ ಸೇರಿಕೊಂಡರು. ಅಲ್ಲಿ ಉತ್ತಮ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ ಇನ್ನೂ ಇದಾದ ಬಳಿಕ ಮುದ್ದಾದ ಮಗಳಿಗೆ ಕೂಡ ಜನ್ಮ ನೀಡಿದ್ದಾರೆ ಅವರ ಮಗಳಿಗೆ ಹವ್ಯ ಕೃಷ್ಣನ್ ಎಂದು ಹೆಸರಿಟ್ಟಿದ್ದಾರೆ. ಮಗುವು ಕೂಡ ತುಂಬಾ ಮುದ್ದಾಗಿದೆ. ರಾಜೇಶ್ವರಿಯವರ ಅಗ್ನಿಸಾಕ್ಷಿ ಯಲ್ಲಿನ ನಟನೆ ಹೊಸ ಸಂಚಲನವನ್ನೇ ಮೂಡಿಸಿತ್ತು ಇವರಿಗೆ ಇದರಿಂದ ಅವಾರ್ಡ್ ಕೂಡ ದೊರೆತಿತ್ತು. ಮದುವೆಯಾದ ನಂತರ ನಟನೆಯ ಕಡೆಗೆ ಅವರು ಒಲವು ತೋರಲಿಲ್ಲ, ರಾಜೇಶ್ವರಿ ತಮ್ಮ ಸಾಂಸಾರಿಕ ಜೀವನದ ಕಡೆ ವೈಯಕ್ತಿಕ ಜೀವನದತ್ತ ತಮ್ಮ ಗಮನವನ್ನು ಸಾಂಸಾರಿಕ ಜೀವನದತ್ತ ಕೇಂದ್ರೀಕರಿಸಿ ಗಂಡ ಮತ್ತು ಮಗುವಿನ ಜೊತೆ ಸುಖವಾದ ಸಂಸಾರವನ್ನು ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *