ಕನ್ನಡದ ಚಿತ್ರರಂಗದ ಪ್ರಖ್ಯಾತ ನಟಿ ಅಮೂಲ್ಯರ ತಂಗಿ ಯಾರು ಗೊತ್ತಾ.?ನೀವೆಂದು ನೋಡಿರದ ಈ ಮಾಹಿತಿ.. - Karnataka's Best News Portal

ನಮಸ್ತೆ ಗೆಳೆಯರೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಖ್ಯಾತಿ ಪಡೆದಿರುವ ನಟಿ ಅಮೂಲ್ಯ ಅವರು ಸೆಪ್ಟೆಂಬರ್ 14,1993 ರಂದು ಜನಿಸಿದ್ದಾರೆ. ಇವರ ತಂದೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು ಇನ್ನು ಇವರ ತಾಯಿಯ ಹೆಸರು ಜಯಲಕ್ಷ್ಮಿ ಎಂದು ಇವರು ಹೌಸ್ ವೈಫ್ ಆಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಾಗೆ ಅಮೂಲ್ಯ ಅವರಿಗೆ ಅಣ್ಣ ಕೂಡ ಇದ್ದಾರೆ ಇವರ ಹೆಸರು ದೀಪಕ್ ಅರಸ್ ಎಂದು ಇವರು 2011 ರಲ್ಲಿ ಮನಸಾಲಜಿ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ
ಅಮೂಲ್ಯ ಅವರು ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ಕಲಿತುಕೊಂಡಿದ್ದಾರೆ ಹಾಗೂ ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಅನ್ನು ಸಹ ಪಡೆದುಕೊಂಡಿದ್ದಾರೆ. ಅಮೂಲ್ಯ ಅವರು ಮೌಂಟ್ ಕಾರ್ಮೆಲ್ ಕಾಲೇಜ್ ಬೆಂಗಳೂರಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಮುಗಿಸಿದ್ದಾರೆ 2001 ರಲ್ಲಿ ತನ್ನ ಬಾಲ್ಯ ವಯಸ್ಸಿನಲ್ಲಿ ನಟ ವಿಷ್ಣುವರ್ಧನ್ ಅವರ ಪರ್ವ ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ ಪರ್ವ ಚಿತ್ರ ಆದಮೇಲೆ ಚಂದು ಲಾಲಿಹಾಡು ಮಹಾರಾಜ, ಮಂಡ್ಯ, ಕಲ್ಲರಳಿ ಹೂವಾಗಿ, ತನನಂ ತನನಂ, ಸಿಂಹ, ನಮ್ಮ ಬಸವ, ಸಜಿನಿ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.ಇದಾದ ನಂತರ 2007 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ ಚಿತ್ರದಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಮೊದಲನೆಯದಾಗಿ ನಾಯಕ


ನಟಿಯಾಗಿ ಅಭಿನಯಸಿದ್ದಾರೆ. ಇದಾದ ನಂತರ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸಾಲಜಿ, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ,ರಾಮಲೀಲಾ
ಮದುವೆಯ ಮಮತೆಯ ಕರೆಯೋಲೆ, ಕೃಷ್ಣ ರುಕ್ಕು, ಮಾಸ್ತಿಗುಡಿ, ಮುಗುಳು ನಗೆ ಚಿತ್ರಗಳನ್ನು ಮಾಡಿದ್ದಾರೆ. ಅಮೂಲ್ಯ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ ಎಂದು ಹೇಳಬಹುದು. ಹಾಗೆ ಇವರು ಯಶ್, ಚಿರು ಸರ್ಜಾ, ಅಜಯ್ ರಾವ್ ಇನ್ನು ಮುಂತಾದ ನಾಯಕ ನಟರ ಜೊತೆ ನಟಿಸಿದ್ದಾರೆ. ಅಮೂಲ್ಯ ಅವರು ಜಗದೀಶ್ ಅವರನ್ನು 2017 ರಲ್ಲಿ ವಿವಾಹವಾದರು ಮದುವೆಯಾದ ಮೇಲೆ ಅಮೂಲ್ಯ ಅವರು ಯಾವ ಚಿತ್ರಗಳಲ್ಲಿ ಸಹ ನಟಿಸಲಿಲ್ಲಇನ್ನೂ ಅಮೂಲ್ಯ ಅವರ ತಂಗಿ ಕೂಡ ನಟಿ ಎಂದು ಹೇಳಬಹುದು. ಇವರು ಸ್ವಂತ ತಂಗಿಯಲ್ಲ ಅಮೂಲ್ಯ ಅವರಿಗೆ ಸೋದರ ಸಂಬಂಧಿ ಮೂಲಕ ತಂಗಿಯಾಗಬೇಕು ಇವರ ಹೆಸರು ಭವ್ಯಾ ಗೌಡ ಎಂದು ಇವರು ಕಿರುತೆರೆಯ ಗೀತಾ ಸೀರಿಯಲ್ ನಲ್ಲಿ ಗೀತಾ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ಅಮೂಲ್ಯ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭವ್ಯಾ ಗೌಡ ತನ್ನ ಕಸಿನ್ ಸಿಸ್ಟರ್ ಎಂದು ಹೇಳಿ ವೀಡಿಯೋ ಮಾಡಿ ತನ್ನ ಅಭಿಮಾನಿಗಳ ಜೊತೆ ಸಂತೋಷವನ್ನು ತಿಳಿಸಿದ್ದಾರೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದರೆ ಲೈಕ್ ನೀಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಗೆಳೆಯರೆ.

By admin

Leave a Reply

Your email address will not be published. Required fields are marked *