ಈಗಿನ ಕಾಲದಲ್ಲಿ ಬೇಡವಾದ ಬೊಜ್ಜು ಎಲ್ಲರನ್ನು ಕಾಡುವ ಸರ್ವೇಸಾಮಾನ್ಯ ಸಮಸ್ಯೆ ಆಗಿದೆ ನಮ್ಮ ಜೀವನ ಶೈಲಿಯಿಂದ ಕೂತಲ್ಲೇ ಕೆಲಸ ಹೆಚ್ಚಿನ ಶ್ರಮ ವಹಿಸದಿರುವುದು ಹೀಗೆ ಹಲವಾರು ಕಾರಣಗಳಿಂದ ನಮ್ಮಲ್ಲಿ ಬೊಜ್ಜು ಹೆಚ್ಚಾಗುತ್ತದೆ. ಬೊಜ್ಜು ಕಡಿಮೆ ಮಾಡಲು ಇಲ್ಲೊಂದು ಮನೆಮದ್ದು ನೋಡುವುದಾದರೆ ಮೊದಲಿಗೆ ಒಂದು ಪಾತ್ರೆಗೆ ಒಂದು ದೊಡ್ಡ ಗ್ಲಾಸ್ ನೀರು ಹಾಕಿ ನಂತರ ಅರ್ಧ ಟೇಬಲ್ ಸ್ಪೂನ್ ಮೆಂತೆಕಾಳು ಹಾಕಿಕೊಳ್ಳಿ, ಈ ಮೆಂತೆಕಾಳು ಆರೋಗ್ಯ ತುಂಬಾ ಉಪಯೋಗಕಾರಿ ಇದು ಡಯಾಬಿಟಿಸ್ ಹೋಗಲಾಡಿಸುತ್ತದೆ ಹಾಗೆ ಸೊಂಟದ ಸುತ್ತ ಇರುವ ಬೊಜ್ಜು, ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ ನಂತರ ಅರ್ಥ ಟೇಬಲ್ ಸ್ಪೂನ ಅಜ್ವಾನ ಅಥವ ಓಂಕಾಳು ಹಾಕಿ ಇದು ಬೇಡವಾದ ಬೊಜ್ಜು ಕರಗಿಸುವಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ಅಲ್ಲದೆ ನಿಮಗೆ ಗ್ಯಾಸ್ಟಿಕ್, ಮಲಬದ್ಧತೆ ಅಜೀರ್ಣದಂತಹ ಸಮಸ್ಯೆ ಇದ್ದರೆ ನಿವಾರಿಸುತ್ತದೆ. ಇದನ್ನು ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಕೊಳ್ಳಬೇಕು ನಂತರ ಇದನ್ನು ಒಂದು ಗ್ಲಾಸ್ ಗೆ ಶೋದಿಸಿಕೊಳ್ಳಿ, ಇದನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನನ್ನು ತಿನ್ನುವ ಮೊದಲು ಬ್ರಶ್ ಮಾಡಿದನಂತರ ಕುಡಿಯಬೇಕು ನಂತರ ರಾತ್ರಿ ಮಲಗುವ ಮುಂಚೆ ಊಟ ಆದ ನಂತರ ಅರ್ಧ ಗಂಟೆ ಮೇಲೆ ಈ ಡ್ರಿಂಕ್ ತೆಗೆದುಕೊಳ್ಳಬೇಕು. ಎರಡು ಬಾರಿ ತೆಗೆದುಕೊಳ್ಳಲು ಇಷ್ಟವಾಗದಿದ್ದರೆ ನೀವು ಕೇವಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು ಇದಕ್ಕೆ ಬೇಕಾದರೆ ನೀವು ನಿಂಬೆಹಣ್ಣು ಅಥವಾ ಜೇನುತುಪ್ಪವನ್ನು ಸಹ ಸೇರಿಸಿಕೊಳ್ಳಬಹುದು. ಈ ಒಂದು ಮೆಥಡ್ ನೀವು ಫಾಲೋ ಮಾಡುತ್ತ ಬಂದರೆ ಕೇವಲ ಒಂದು ವಾರದಲ್ಲಿ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ.
