ಪ್ರೇಕ್ಷಕರಿಗೆ ಸಿಹಿಸುದ್ದಿ 'ಬಿಗ್ ಬಾಸ್' ಹೊಸ ಸೀಸನ್ ಶುರು ಸ್ವರ್ಧಿಗಳು ಇವರೆ ನೋಡಿ..! - Karnataka's Best News Portal

ನಮಸ್ತೆ ಗೆಳೆಯರೇ ನಮ್ಮ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಅದ ಬಿಗ್ ಬಾಸ್ ನ ಹೊಸ ಸೀಸನ್ ಶುರುವಾಗುತ್ತಿದೆ ನಿಜ ಗೆಳೆಯರೇ ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಕೊರೊನಾ ಕಾರಣದಿಂದಾಗಿ ಇದೀಗ ತಡವಾಗಿ ಶುರುವಾಗುತ್ತಿದೆ‌‌ ಅದಾಗಲೇ ಇತರ ಭಾಷೆಗಳ ಬಿಗ್ ಬಾಸ್ ಸೀಸನ್ ಶುರುವಾಗಿದ್ದು ಯಾವುದೇ ತೊಂದರೆ ಇಲ್ಲದೇ ಸಾಗುತ್ತಿದೆ ಇತ್ತ ಕನ್ನಡದಲ್ಲಿಯೂ ಎಂದಿನಂತೆ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗಲಿದೆ ಎನ್ನುವ ಮಾತು ಕೇಳಿ ಬರುತಿತ್ತು‌ ಆದರೆ ಕಾರ್ಯಕ್ರಮ ನಿರೂಪಣೆ ಮಾಡುವ ಸುದೀಪ್ ಅವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ಹಾಗೂ ಸ್ಪರ್ಧಿಗಳ ಆಯ್ಕೆ ಸಂಪೂರ್ಣವಾಗದ ಕಾರಣ ಮುಂದೂಡಲಾಗಿತ್ತು.ಆದರೆ ತಡವಾಗಿಯಾದರೂ ಬಿಗ್ ಬಾಸ್ ನಡೆಯಲಿದೆ ಎಂದು ವಾಹಿನಿ ಮೂಲಗಳಿಂದ ಮಾಹಿತಿ ತಿಳಿದುಬಂದಿತ್ತು. ಆದರೆ ಬಿಗ್ ಬಾಸ್ ಶುರುವಾದರೆ ಕಿಚ್ಚ ಸುದೀಪ್ ಅವರು ಆರೋಗ್ಯದ ದೃಷ್ಟಿಯಿಂದ ಹೊರಗೆಲ್ಲೂ ಪ್ರಯಾಣ ಮಾಡದೇ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳ ಬೇಕಿರುವುದರಿಂದ 2021 ರ ಆರಂಭದಲ್ಲಿ ಬಿಗ್ ಬಾಸ್ ಶೋ ಪ್ರಾರಂಭವಾಗುವುದು ಬಹುತೇಕ ಖಚಿತವಾಗಿದೆ.ಬಿಡದಿಯಲ್ಲಿನ ಬಿಗ್ ಬಾಸ್ ಮನೆಯನ್ನು ನವೀಕರಣ ಮಾಡಲಾಗುತ್ತಿದ್ದು ಈ ಬಾರಿ ಕಳೆದೆಲ್ಲಾ ಸೀಸನ್ ಗಳಿಗಿಂತ ಈ ಬಾರಿ ಮನೆ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಒಂದು ತಂಡ ಬಿಡದಿಯಲ್ಲಿಯೇ ಉಳಿದುಕೊಂಡಿದ್ದು ಮನೆ ನವೀಕರಣದ ಕೆಲಸದಲ್ಲಿ ತೊಡಗಿಕೊಂಡಿದೆ ಇನ್ನು ಇತ್ತ ಸ್ಪರ್ಧಿಗಳು ಯಾರು ಯಾರು ಎಂಬ ವಿಚಾರಕ್ಕೆ ಬಂದರೆ ಈ ಬಾರಿಯೂ ಎಲ್ಲಾ ಸ್ಪರ್ಧಿಗಳೂ ಸೆಲಿಬ್ರೆಟಿಗಳೇ ಆಗಿರಲಿದ್ದಾರೆ ಎನ್ನಲಾಗಿದೆ ಕಿರುತೆರೆ


ಧಾರಾವಾಹಿ ಇಂದ ಬಂದ ಕಲಾವಿದರು ಪ್ರಖ್ಯಾತ ಟಿವಿ ನಿರೂಪಕರು ಹಾಗೂ ಒಬ್ಬರು ಸ್ಪೋರ್ಟ್ಸ್ ಪರ್ಸನ್ ಕೂಡ ಇರಲಿದ್ದು ಎಂದಿನಂತೆ ಈ ವರ್ಷ ಕಾಂಟ್ರೋವರ್ಸಿಯಲ್ಲಿ ಕೇಳಿಬಂದ ವ್ಯಕ್ತಿಗಳು ಸಹ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಾಗಲಿದ್ದಾರೆ. ಕೆಲ ಹಿರಿಯ ಕಲಾವಿದರಿಗೆ ಬಿಗ್ ಬಾಸ್ ತಂಡ ಅಪ್ರೋಚ್ ಮಾಡಲಾಗಿದ್ದು ಕಲಾವಿದರು ಸಹ ಬಿಗ್ ಬಾಸ್ ಗೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ ವಾಹಿನಿಯಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆಯಷ್ಟೇಶೋ ವಿಚಾರಕ್ಕೆ ಬಂದರೆ ಅದಾಗಲೇ ಕಲರ್ಸ್ ಕನ್ನಡ ಹೊಸ ಹೊಸ ಧಾರಾವಾಹಿಗಳ ಮೂಲಕ ತನ್ನ ಹಳೆಯ ಫಾರ್ಮ್ ಗೆ ಮರಳುತ್ತಿದ್ದು ಬಿಗ್ ಬಾಸ್ ಶೋ ಹಿಟ್ ಮಾಡುವುದರ ಮೂಲಕ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬರುವ ಪ್ರಯತ್ನದಲ್ಲಿದೆ ಈ ಬಾರಿಯ ಬಿಗ್ ಬಾಸ್ ಶೋ ನಲ್ಲಿ ಸಂಪೂರ್ಣ ಮನರಂಜನೆಗೆ ಪ್ಲಾನ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹೊಸ ಹೊಸ ಆಟಗಳಿಗೆ ಪ್ರಾಪರ್ಟಿಸ್ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ ಒಟ್ಟಿ‌ನಲ್ಲಿ 2021 ರ ಶುಭಾರಂಭದೊಂದಿಗೆ ಬಿಗ್ ಬಾಸ್ ಶೋ ಕೂಡ ಆರಂಭವಾಗಲಿದ್ದು 108 ದಿನಗಳ ಮನರಂಜನೆಗೆ ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆನ್ನಬಹುದು ಆದರೆ ಕಳೆದ ಸೀಸನ್ ಬಿಗ್ ಬಾಸ್ 7 ರಲ್ಲಿ ಯಾವುದೇ ಸಾಮಾನ್ಯ ಜನರಿಗೆ ಮನೆಯ ಸದಸ್ಯರಾಗಲು ಅವಕಾಶವಿರಲಿಲ್ಲ ಈ ಬಾರಿಯೂ ಸೀಸನ್ 8 ರಲ್ಲಿಯೂ ಸಹ ಕಾಮನ್ ಮ್ಯಾನ್ ಗೆ ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಲು ಅವಕಾಶವಿಲ್ಲದ್ದು ಕೆಲವರಿಗೆ ಬೇಸರ ತರಿಸಿದೆ ಎನ್ನಬಹುದು ಅದಾಗಲೇ ವಾಹಿನಿಗೆ ಬಹಳಷ್ಟು ಮಂದಿ ಬಿಗ್ ಬಾಸ್ ಅವಕಾಶಕ್ಕಾಗಿ ಫೋನ್ ಮೂಲಕ ಮನವಿ ಮಾಡುತ್ತಿರುವುದೂ ಇದೆ ಈ ಮಾಹಿತಿಯ ನಿಮಗೆ ಇಷ್ಟವಾದರೆ ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *