ಮೇಷ, ವೃಷಭ, ಮಿಥುನ- ಗುರು ಗೋಚಾರ ಫಲ ಹೇಗಿದೆ ನೋಡೋಣ ಬನ್ನಿ ... - Karnataka's Best News Portal

ಮೇಷ, ವೃಷಭ, ಮಿಥುನ- ಗುರು ಗೋಚಾರ ಫಲ ಹೇಗಿದೆ ನೋಡೋಣ ಬನ್ನಿ …

ಗ್ರಹಗಳಲ್ಲಿ ಅತ್ಯಂತ ಶುಭವಾದ ಗ್ರಹ ಗುರು ಗ್ರಹ, ಗುರು ಗ್ರಹವನ್ನು ಧನಕಾರಕ, ಪಿತೃಕಾರಕ ಎಂದು ಕರೆಯುತ್ತಾರೆ. ಮತ್ತು ಮಂಗಳ ಕಾರ್ಯಗಳಿಗೆ ಗುರುವಿನ ಬಲ ಬೇಕಾಗುತ್ತದೆ ಅಂತಹ ಶ್ರೇಷ್ಠವಾದ ಗುರುಗ್ರಹ ನವೆಂಬರ್ 20 ಶುಕ್ರವಾರದಂದು 1:23 ಕ್ಕೆ ಧನಸ್ಸು ರಾಶಿಯಿಂದ, ಮಕರ ರಾಶಿಗೆ ಬದಲಾವಣೆ ಆಗುತ್ತದೆ. ಧನಸ್ಸು ರಾಶಿಯಲ್ಲಿ ಗುರು ಗ್ರಹ ಸ್ವಂತ ಮನೆಯಲ್ಲಿ ಇಲ್ಲಿಯವರೆಗೆ ಇತ್ತು. ಗುರು ಗ್ರಹಕ್ಕೆ ಧನಸ್ಸು ರಾಶಿ ಮತ್ತು ಮೀನ ರಾಶಿಗಳು ಸ್ವಂತ ಮನೆಗಳು. ಕಟಕ ರಾಶಿ ಉಚ್ಛಸ್ಥಾನ ಪ್ರತಿವರ್ಷವೂ ಗುರು ಗ್ರಹ ರಾಶಿ ಬದಲಾವಣೆ ಆಗುತ್ತದೆ ಅದು ನಡೆಯುತ್ತಲೇ ಇರುತ್ತದೆ. ಆದರೆ ಈ ಬಾರಿ ಗುರು ಗ್ರಹ ಮಕರರಾಶಿಗೆ ಹೋಗುತ್ತಿದೆ ಮಕರ ರಾಶಿಯಲ್ಲಿ ಗುರು ಗ್ರಹ ನೀಚವಾಗುತ್ತದೆ ಒಂದು ಗ್ರಹ ನೀಚವಾಗುತ್ತದೆ ಎಂದರೆ ಅದು ಸೊನ್ನೆ ಅಷ್ಟು,

ಏನನ್ನು ಹೊಂದಿದೆ ಅಂದರೆ ಬಲವೇ ಇಲ್ಲ ಎಂದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. ಆರೀತಿ ಇದ್ದಾಗ ಗ್ರಹದ ಫಲಗಳು ಜನರಿಗೆ ಸಿಗುವುದಿಲ್ಲ ಆದರೆ ಇಲ್ಲಿ ವಿಶೇಷ ಏನೆಂದರೆ ಗುರು ಗ್ರಹ ಈಗಾಗಲೇ ಮಕರದಲ್ಲಿ ಇದ್ದ ಶನಿ ಗ್ರಹದ ಜೊತೆಗೆ ಸೇರುತ್ತದೆ ಶನಿ ಗ್ರಹಕ್ಕೆ ಮಕರ ಮತ್ತು ಕುಂಭ ಸ್ವಂತ ಮನೆ ಆಗಿದೆ ಒಂದು ಸ್ವಂತ ಮನೆಯಲ್ಲಿರುವ ಗ್ರಹದ ಜೊತೆಗೆ ನೀಚ ಗ್ರಹ ಸೇರಿದರೆ ಅದು ನೀಚವಾಗುತ್ತದೆ. ಒಂದು ನೀಚ ಗ್ರಹದ ಜೊತೆ ಉಚ್ಚ ಗ್ರಹ ಸೇರಿದರೆ ರಾಜಯೋಗವಾಗುತ್ತದೆ, ಸ್ವಂತ ಗ್ರಹದ ಜೊತೆ ನೀಚ ಗ್ರಹ ಸೇರಿದರೆ ನೀಚಭಂಗ ವಾಗುತ್ತದೆ. ನೀಚ ಭಂಗಕ್ಕು ಮತ್ತು ನೀಚ ಭಂಗ ಯೋಗಕ್ಕೂ ವ್ಯತ್ಯಾಸವಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದಕ್ಕೂ ವ್ಯತ್ಯಾಸವಿದೆ.

See also  ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..
[irp]