ನಟ ಸಾಯಿಕುಮಾರ್ ಮಗಳು ಯಾರು ಗೊತ್ತಾ.? ಅವರು ಏನು ಮಾಡುತ್ತಿದ್ದಾರೆ ಗೊತ್ತಾ..? - Karnataka's Best News Portal

ಇವರ ಖಡಕ್ ಡೈಲಾಗ್ ಗಳಿಂದ ಕನ್ನಡ ಹಾಗು ತೆಲುಗು ಚಿತ್ರರಂಗದಲ್ಲಿ ಡೈಲಾಗ್ ಕಿಂಗ್ ಎಂದೇ ಫೇಮಸ್ ಆದರು ಡೈಲಾಗ್ ಕಿಂಗ್ ಸಾಯಿಕುಮಾರ್ ಪ್ರೇಮ ಸಂಗಮ ಎಂಬ ಚಿತ್ರದ ಮೂಲಕ 1992 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ನಾಯಕನಟರಾಗಿದ್ದರು ನಂತರ ಕುಂಕುಮಭಾಗ್ಯ, ಲಾಕಪ್ ಡೆತ್, ಹೆತ್ತ ಕರುಳು ಇನ್ನೂ ಅನೇಕ ಚಿತ್ರಗಳಲ್ಲಿ ಸಹ ನಟರಾಗಿ ನಟಿಸಿದರು ಇನ್ನು ಇವರು ಕನ್ನಡದಲ್ಲಿ ನಾಯಕನಟರಾಗಿ ನಟಿಸಿದ ಮೊದಲ ಚಿತ್ರ ಪೊಲೀಸ್ ಸ್ಟೋರಿ ಈ ಚಿತ್ರ 1996 ರಲ್ಲಿ ತೆರೆಕಂಡಿತ್ತು ಸಾಹಸ ನಿರ್ದೇಶಕ ತ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಮಾಸ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.

ಸಾಯಿಕುಮಾರ್ ಅವರ ಡೈಲಾಗ್ ಡೆಲಿವರಿ ಹಾಗು ಆಕ್ಷನ್ ಕನ್ನಡ ಹಾಗೂ ತೆಲುಗು ಪ್ರೇಕ್ಷಕರಿಗೆ ಇಷ್ಟವಾಯಿತು. ನಟ ಸಾಯಿಕುಮಾರ್ ಅವರು 70 ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಗು ಪೋಷಕ ನಟರಾಗಿ ನಟಿಸಿದ್ದಾರೆ ಇನ್ನೂ ತೆಲುಗು, ತಮಿಳು, ಕನ್ನಡ ಸೇರಿದಂತೆ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಪೋಷಕ ನಟನಾಗಿ ನಟಿಸಿದ್ದಾರೆ. ಶಂಕರ್ ನಾಗ್, ಪ್ರಭಾಕರ್, ಅಂಬರೀಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಪಾತ್ರದಲ್ಲಿ ಮಿಂಚಿದ ಮತ್ತೋರ್ವ ನಟ ಸಾಯಿಕುಮಾರ್ ಎಂದರೆ ತಪ್ಪಾಗಲಾರದು. ಇವರಿಗೆ ಇಬ್ಬರು ಮಕ್ಕಳಿದ್ದು ಒಂದು ಗಂಡು ಮತ್ತು ಒಂದು ಹೆಣ್ಣು ಇವರ ಮಗ ಆದಿ ಅವರು ತೆಲುಗು ಚಿತ್ರರಂಗದಲ್ಲಿ ನಟನಾಗಿ ನಾಯಕನಟನಾಗಿ ನಟಿಸಿದ್ದಾರೆ. ಇವರ ಮಗಳು ಜ್ಯೋತಿರ್ಮಯ ಎಂಬಿಬಿಎಸ್ ಮಾಡಿದ್ದು, ಬಿಟೆಕ್ ಪದವೀಧರ ಕೃಷ್ಣ ಅವರ ಜೊತೆ ಮದುವೆಯಾಗಿದ್ದಾರೆ ಇವರ ಮದುವೆ 2012ರಲ್ಲಿ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆದಿತ್ತು.

By admin

Leave a Reply

Your email address will not be published. Required fields are marked *