ಸ್ವಂತ ಮನೆ ಇಲ್ಲದವರಿಗೆ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ 35,00,00 ಲಕ್ಷ ಸಹಾಯ ಧನವನ್ನು ನೀಡುತ್ತಿದ್ದಾರೆ ಇದು ಹೇಗೆ..? - Karnataka's Best News Portal

ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ನವರು ಬೆಂಗಳೂರು ನಗರದಲ್ಲಿ ಸ್ವಂತ ಮನೆ ಇಲ್ಲದವರಿಗೆ, ಮತ್ತು ಸ್ವಂತ ಜಾಗ ಇಲ್ಲದವರಿಗೆ, ಹಾಗೂ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರಿಗೆ ಬರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ನವರು ವಸತಿ ರಹಿತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಮುಖ್ಯ ಮಂತ್ರಿಗಳ ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಘೋಷಿಸಿದ್ದಾರೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವಸತಿ ರಹಿತ ಬೆಂಗಳೂರು ನಗರದಲ್ಲಿ ಸ್ವಂತ ಮನೆಯನ್ನು ಒದಗಿಸಲು ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ಯೋಜನೆಯನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮುಖ್ಯ ಮಂತ್ರಿಯವರು ಚಾಲನೆಯನ್ನು ನೀಡಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತವು ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆ ಎಂಬ ಬೃಹತ್ ವಸತಿ ನಿರ್ಮಾಣ ಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 5 ತಾಲೂಕು ವ್ಯಾಪ್ತಿಯಲ್ಲಿ ಒಂದು ಸಾವಿರ ಎಕರೆ ಮತ್ತು ಹತ್ತು ಕುಂಟೆ ಸರ್ಕಾರಿ ಜಮೀನುಗಳಲ್ಲಿ ಸಮಗ್ರ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ಆರ್ಥಿಕ ಆದಾಯ ಮೂರು ಲಕ್ಷ ಮೀರಿರಬಾರದು. ಕನಿಷ್ಠ 5 ವರ್ಷಗಳ ಮೇಲ್ಪಟ್ಟು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷ ಮೇಲ್ಪಟ್ಟು ವಾಸವಾಗಿರಬೇಕು. ಸರ್ಕಾರದ ಯಾವುದೇ ವಸತಿ ಯೋಜನೆಯ ಫಲಾನುಭವಿಗಳು ಆಗಿರಬಾರದು. ರಾಜ್ಯದಲ್ಲಿ ಎಲ್ಲಿಯೂ ಸಹ ಸ್ವಂತ ಮನೆಯನ್ನು ಹೊಂದಿರಬಾರದು. ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರೆಗೆ…

By admin

Leave a Reply

Your email address will not be published. Required fields are marked *