ತೆಲಂಗಾಣ ರಾಜ್ಯದ ಹೈದರಾಬಾದ್ ಸಿಟಿಯಲ್ಲಿ ಮಹೇಶ್ ಎಂಬ ವ್ಯಕ್ತಿ ಮನೆಮನೆಗೆ ಹೋಗಿ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾನೆ. ಮಹೇಶ್ ಗೆ ಆಗಲೇ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ ಪ್ರತಿದಿನ ಮನೆಮನೆಗೆ ಹೋಗಿ ಸಿಲಿಂಡರ್ ಕೊಟ್ಟು ಅದರಿಂದ ಬರುತ್ತಿದ್ದ ದುಡ್ಡಿನಿಂದ ಮಹೇಶ್ ತನ್ನ ಹೆಂಡತಿ ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಸಿಲಿಂಡರ್ ಡೆಲಿವರಿ ಮಾಡಲು ಎಷ್ಟೇ ಮಹಡಿಯ ಮೇಲೆ ಮನೆ ಇದ್ದರೂ ಕೂಡ ಒಂದು ರೂಪಾಯಿ ಹೆಚ್ಚು ಕೇಳದೆ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ಒಂದು ದಿನ ಮಹೇಶ್ ಎದ್ದೇಳುವುದು ಲೇಟ್ ಆಗಿತ್ತು ಅಂದು ಅತಿಹೆಚ್ಚು ಸಿಲಿಂಡರ್ಗಳನ್ನು ಡೆಲಿವರಿ ಮಾಡಬೇಕಿತ್ತು ಹೀಗಾಗಿ ಮನೆಯಲ್ಲಿ ನಾಷ್ಟ ಮಾಡಿದೆ ಹಾಗೆ ಕೆಲಸಕ್ಕೆ ಬಂದಿದ್ದಾನೆ ತುಂಬಿಸಿಕೊಂಡು ಒಂದೊಂದಾಗಿ ಮನೆಮನೆಗೆ ಡೆಲಿವರಿ ಮಾಡುತ್ತಿದ್ದಾಗ ಸುಜಾತ ಎಂಬ ಮಹಿಳೆಗೆ ಸಿಲಿಂಡರ್ ಡೆಲಿವರಿ ಮಾಡಬೇಕಿತ್ತು,
ಆಕೆ ಮನೆ ನಾಲ್ಕನೇ ಮಹಡಿಯಲ್ಲಿತ್ತು ನಾಷ್ಟ ಕೂಡ ಮಾಡದ ಕಾರಣ ಮಹೇಶ್ ಗೆ ಆಗಲೇ ಸುಸ್ತಾಗಲು ಶುರುವಾಗಿತ್ತು ಆದರೂ ಪರವಾಗಿಲ್ಲ ಈ ಮಹಿಳೆಯೊಬ್ಬರ ಮನೆಗೆ ಕೊಟ್ಟು ನಂತರ ಹೋಟೆಲ್ನಲ್ಲಿ ನಾಷ್ಟ ಮಾಡೋಣ ಎಂದುಕೊಂಡು ಹೆಗಲಮೇಲೆ ಹೊತ್ತು ಸುಜಾತ ಮನೆಗೆ ಡೆಲಿವರಿ ಕೊಟ್ಟನಂತರ ಮಹೇಶ್ ಅಮ್ಮ ಮಹಡಿ ಹತ್ತಿ ಬಂದ ಕಾರಣ ತುಂಬಾ ಬಾಯಾರಿಕೆ ಆಗಿದೆ ತಲೆ ಸುತ್ತುತ್ತಿದೆ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾನೆ, ಮಹೇಶ್ ನೀರು ಕೇಳಿದ್ದು ನೋಡಿ ಸುಜಾತ ಕೋಪಮಾಡಿಕೊಂಡು ನಮ್ಮ ಮನೆಯಲ್ಲಿ ನೀರಿಲ್ಲ ಈಗಲೆ ಕೊರೋನ ನಿನಗೆ ಕುಡಿಯಲು ಗ್ಲಾಸಿನಲ್ಲಿ ನೀರು ಕೊಟ್ಟು ಅದರಿಂದ ಕೊರೋನ ಬಂದರೆ ಏನು ಮಾಡುವುದು ಎಂದು ದುಡ್ಡು ಕೊಟ್ಟು ಮಹೇಶ್ ಗೆ ಬಾಯಿಗೆ ಬಂದ ಹಾಗೆ ಬೈದು ಕಳುಹಿಸುತ್ತಾಳೆ.
