ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಯುವಕರಿಗೆ ಬೈಕ್ ಖರೀದಿಸಲು 25,000 ಸಹಾಯಧನ ಕೊಡಲಾಗುತ್ತಿದೆ ನೀವು ಈ ಸೌಲಭ್ಯ ಪಡೆದುಕೊಳ್ಳಬೇಕಾದರೆ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಸಲ್ಲಿಸಲು ಕೊನೆಯ ದಿನಾಂಕ 19-12-2020 ಒಳಗೆ ಅರ್ಜಿ ಸಲ್ಲಿಸಬೇಕು ಎಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ನೋಡುವುದಾದರೆ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ 2ಎ, 3ಎ, 3ಬಿ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಮತ್ತು ವಿಶ್ವಕರ್ಮ, ಉಪಾಯ, ಅಂಬಿಗ, ಮಡಿವಾಳ, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು ಮತ್ತು ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಪ್ರವರ್ಗ-1, 2ಎ, 3ಎ, 3ಬಿ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬೇಕು.
ಇ ವಾಣಿಜ್ಯ ಸಂಸ್ಥೆಗಳ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಹಿಂದುಳಿದ ವರ್ಗಗಳ ಯುವಕರಿಗೆ ಬೈಕ್ ಕೊಂಡುಕೊಳ್ಳಲು ಸಹಾಯಧನ ಮಂಜೂರಾತಿಗೆ ಅರ್ಜಿ ಎಂದು ಅರ್ಜಿಯ ಮೇಲೆ ನಮೂದಿಸಲಾಗಿರುತ್ತದೆ. ಮೊದಲಿಗೆ ನಿಮ್ಮ ಮಾಹಿತಿ, ಅಡ್ರೆಸ್, ಎಜುಕೇಶನ್, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಪೇರೆಂಟ್ಸ್ ಡೀಟೇಲ್ಸ್, ಕ್ಯಾಸ್ಟ್ ಇನ್ಕಮ್ ಸರ್ಟಿಫಿಕೇಟ್, ಹಾಗೂ ನೀವು ಯಾವ ಕಂಪನಿ ಕೆಲಸ ಮಾಡುತ್ತಿದ್ದೀರಾ ಅದನ್ನು ನಮೂದಿಸಬೇಕು. ನಿಮ್ಮ ಕುಟುಂಬದ ನಿಗಮದಿಂದ ಸಹಾಯ ಪಡೆದುಕೊಂಡಿರುವುದನ್ನು ತಿಳಿಸಬೇಕು. ನಂತರ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಡಬೇಕು ನಂತರ ಕೆಲವು ಡಾಕ್ಯುಮೆಂಟ್ ಗಳನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಆಧಾರ್, ಕ್ಯಾಸ್ಟ್ ಸರ್ಟಿಫಿಕೇಟ್, ಐಡಿ ಕಾರ್ಡ್, ಬ್ಯಾಂಕ್ ಅಕೌಂಟ್ ಪಸ್ಸ್ಬುಕ್ ಫ್ರಂಟ್ ಪೇಜ್, ನಿಮ್ಮ ಫೋಟೋಸ್ ಅಂಡ್ ಸಿಗ್ನೇಚರ್ ಎರಡು ಜೆಪಿಜೆ ಫಾರ್ಮೆಟ್ ಅಲ್ಲಿರಬೇಕು.
