ಇದನ್ನು ದಿನಕ್ಕೆ 2 ಬಾರಿ 4 ದಿನ ಸೇವಿಸಿ ಸುಸ್ತು, ಆಯಾಸ, ಮಲಬದ್ಧತೆ, ಕ್ಯಾಲ್ಸಿಯಂ ಕೊರತೆ ಮಾಯ ನಿಮಗಾಗಿ .... - Karnataka's Best News Portal

ನಿಮಗೆ ಸುಸ್ತು, ಆಯಾಸ ಕಾಡುತ್ತಿರುತ್ತದೆ ದೇಹದಲ್ಲಿ ಚೈತನ್ಯ ಇರುವುದಿಲ್ಲವೆ ಹೆಚ್ಚು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ವಾಯುವಿನ ಸಮಸ್ಯೆ ಕೂಡ ಆಗುತ್ತಿರುತ್ತದೆ ಹಾಗೂ ಮಲಬದ್ಧತೆ ಕೂಡ ಇರುತ್ತದೆ ಈ ಮನೆಮದ್ದನ್ನು ದಿನಕ್ಕೆ 2 ಬಾರಿ 4 ರಿಂದ 5 ದಿನ ಸೇವಿಸಿದರೆ ಮಲಬದ್ಧತೆ ಸಮಸ್ಯೆ, ರಕ್ತ ವೃದ್ಧಿಯಾಗಿರುವುದು, ಮೂಳೆಗಳಿಗೆ ಸಂಬಂಧಿಸಿದಂತೆ ಒಳ್ಳೆಯದು ಶರೀರಕ್ಕೆ ಒಳ್ಳೆಯದು ಬಲ ಹಾಗೂ ಪುಷ್ಟಿಕೊಡುವ ಇದು ತುಂಬಾನೇ ಹೆಚ್ಚು ಹೆಲ್ಪ್ ಆಗುತ್ತದೆ. ಇದನ್ನು ತಯಾರಿಸಲು ಒಣದ್ರಾಕ್ಷಿ ಬೇಕು, ಒಣದ್ರಾಕ್ಷಿ ನಮ್ಮ ದೇಹದಲ್ಲಿ ಎಲ್ಲಾ ಅಂಗಗಳಿಗೂ ತುಂಬಾನೆ ಒಳ್ಳೆಯದು, ಮೂಳೆಗಳಿಗೆ ತುಂಬಾನೆ ಒಳ್ಳೆಯದು, ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿರುತ್ತದೆ ಮತ್ತು ಇದರಿಂದ ಬೋರಾನ್ ಸಿಗುತ್ತದೆ.

ಮೂಳೆಗಳ ಬೆಳವಣಿಗೆಗೆ, ರಚನೆಗೆ ಇದು ತುಂಬಾನೇ ಒಳ್ಳೆಯದು 2 ಟೇಬಲ್ ಸ್ಪೂನ್ ಒಣದ್ರಾಕ್ಷಿ ತೆಗೆದುಕೊಂಡು ಎರಡು ಸಾರಿ ಚೆನ್ನಾಗಿ ತೊಳೆದುಕೊಳ್ಳಿ, ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಬಿಸಿಯಾಗಲು ಇಟ್ಟು ಒಣದ್ರಾಕ್ಷಿಯನ್ನು ಜಜ್ಜಿಕೊಳ್ಳಿ ನಂತರ ನೀರು ಬಿಸಿ ಆದಮೇಲೆ ಜೆಜ್ಜಿರುವಂತಹ ದ್ರಾಕ್ಷಿಯನ್ನು ಹಾಕಿ ಒಂದು ಲೋಟ ನೀರು ಅರ್ಧಲೋಟ ಆಗುವವರೆಗೂ ಕುದಿಯಲು ಬಿಡಬೇಕು ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಒಂದು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸ, ಚಿಟಿಕೆ ಏಲಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಬೇಕು ಬೆಳಿಗ್ಗೆ ಮತ್ತು ಸಂಜೆ ಇದು ಬಹಳಷ್ಟು ಆರೋಗ್ಯ ದೃಷ್ಟಿಯಿಂದ ಹಲವಾರು ಉಪಯೋಗಗಳನ್ನು ಒಳಗೊಂಡಿದೆ.

By admin

Leave a Reply

Your email address will not be published. Required fields are marked *