ಸತ್ತು ಹೋದ ಯಜಮಾನನಿಗೆ ಹಸು ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ.. - Karnataka's Best News Portal

ಗಂಗಾರಾಮ್ ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ತಾನು ಸಾಕಿದ ಎತ್ತುಗಳಿಗೆ ತಿನ್ನಲು ಆಹಾರ ತಂದು ನೀಡುತ್ತಿದ್ದ ತಾನು ಮಾಡುವ ವ್ಯವಸಾಯಕ್ಕೆ ಸಹಾಯ ಮಾಡುತ್ತಿದ್ದ ಎತ್ತುಗಳನ್ನು ತನ್ನ ಮನೆಯ ಮಕ್ಕಳಂತೆ ತುಂಬಾ ಜಾಗೃತಿಯಿಂದ ನೋಡಿಕೊಳ್ಳುತ್ತಿದ್ದ. ಇದೇ ರೀತಿ ಹಲವು ವರ್ಷಗಳು ಗಂಗಾರಾಮ್ ಎತ್ತುಗಳನ್ನು ನೋಡಿಕೊಂಡಿದ್ದು ಬೆಳಿಗ್ಗೆ ಆದ ತಕ್ಷಣ ನಾವು ಹೇಗೆ ಮಲಗಿರುವ ನಮ್ಮ ಕುಟುಂಬದವರನ್ನು ಹೇಳಿ ಬೆಳಿಗ್ಗೆ ಆಯ್ತು ಕೆಲಸಕ್ಕೆ ಹೋಗಬೇಕು ಎಂದು ಎಬ್ಬಿಸುತ್ತೇವೆ ಹಾಗೆ ಎತ್ತು ಕೂಡ ಹೀಗೆ ಮಲಗಿರುವ ಗಂಗಾರಾಮ್ ನನ್ನು ಎದ್ದೇಳಿಸುತ್ತಿತ್ತು ಗಂಗರಾಮ್ ಮತ್ತು ಎತ್ತು ನಡುವೆ ಒಂದು ವಿಭಿನ್ನ ಬಾಂಧವ್ಯ ಉಂಟಾಗಿತ್ತು. ಆದರೆ ಒಂದು ದಿನ ಎತ್ತುಗಳು ಎಷ್ಟೇ ಕಿರುಚಿಕೊಂಡರು ಗಂಗಾರಾಮ್ ಎದ್ದು ಆಚೆ ಬರಲಿಲ್ಲ ಆಗ ಅಕ್ಕ ಪಕ್ಕ ಇದ್ದ ಮನೆಯವರು ಯಾಕೆ ಎತ್ತುಗಳು ಕೂಗಿ ಕೊಳ್ಳುತ್ತೇವೆ ಎಂದು ನೋಡಿದಾಗ ಗಂಗಾರಾಮ್ ಹೃದಯಾಘಾತ ಸಂಭವಿಸಿ ತನ್ನ ಪ್ರಾಣ ಬಿಟ್ಟಿದ್ದ.

ಈ ಸಾವಿನ ಸುದ್ದಿ ಕೇಳಿ ಗಂಗರಾಮ್ ಸಂಬಂಧಿಕರು ಬಂದು ಅಳತೊಡಗಿದರು ಮನೆಯವರು ಕಣ್ಣೀರು ಹಾಕುತ್ತಿದ್ದ ಶಬ್ದ ಕೇಳಿ ಎತ್ತುಗಳು ಅಳಲು ಶುರು ಮಾಡಿದವು ನಂತರ ಗಂಗಾರಾಮ್ ಮೃತದೇಹವನ್ನು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಹೊಲಕ್ಕೆ ಹೊತ್ತು ತಂದರು ಕೊನೆಗೆ ಮನೆಗೆ ಬೀಗ ಹಾಕಲು ನಿಂತಿದ್ದರು ಸಂಬಂಧಿಕ ಕಟ್ಟಿಹಾಕಿದ್ದ ಎತ್ತುಗಳು ಕಿರುಚಾಡುತ್ತಿದ್ದನ್ನು ಗಮನಿಸಿ ಬಿಚ್ಚಿದಾಗ ಎತ್ತುಗಳು ಜೋರಾಗಿ ಗಂಗರಾಮ್ ತೆಗೆದುಕೊಂಡು ಹೋಗಿರುವ ಜಾಗಕ್ಕೆ ಹೋದವು ಅಷ್ಟರಲ್ಲೇ ಗಂಗರ ಮೃತದೇಹ ಉರಿಯುತ್ತಿತ್ತು ಅದನ್ನು ನೋಡಿ ಎತ್ತುಗಳು ಕಣ್ಣೀರು ಹಾಕಿ ಅಲ್ಲೇ ಕುಳಿತುಕೊಂಡವು. ಆ ಎತ್ತುಗಳು ಎಲ್ಲೂ ಹೋಗದೆ, ಯಾವ ಕೆಲಸವನ್ನೂ ಮಾಡದೆ ಇನ್ನೂ ಸಹ ಅಲ್ಲಿ ಕುಳಿತುಕೊಂಡಿವೆ.

By admin

Leave a Reply

Your email address will not be published. Required fields are marked *