ಈ ಬಾರಿ ಗ್ರಹಣದ ನಂತರ ಲೋಕಕ್ಕೆ ಕಂಠಕ ಇದೆ ಜಲ ಹಾಗೂ ಗಾಳಿಯಿಂದ ಗಂಡಾಂತರ ಭವಿಷ್ಯ ನುಡಿದ ಕೋಡಿ ಮಠ ಶ್ರೀಗಳು - Karnataka's Best News Portal

ಕೊಡಿ ಮಠದ ಶ್ರೀಗಳು ಕಾಲಜ್ಞಾನವನ್ನು ತಿಳಿದಿರುವಂತಹ ಮಹಾಪುರುಷರು ಎಂದು ಎಲ್ಲರೂ ಭಾವಿಸಿದ್ದಾರೆ. ಇವರು ಮುಂದೆ ನಡೆಯುವಂತಹ ವಿಪತ್ತುಗಳಿಗೆ ಮತ್ತು ಅಪಾಯಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಈಗಲೂ ಕೂಡ ಅದೇ ರೀತಿಯಾಗಿ ಮುಂದೆ ಬರುವ ಗ್ರಹಣದ ಬಗ್ಗೆ ನೀಡಿರುವಂತಹ ಕೆಲವು ಸೂಚನೆಗಳನ್ನು ಕೇಳಿದ ಜನರು ನಿಜಕ್ಕೂ ಕಂಗಾಲಾಗಿದ್ದಾರೆ ಅಷ್ಟಕ್ಕೂ ಕೋಡಿ ಮಠ ಶ್ರೀಗಳು ನುಡಿದ ಭವಿಷ್ಯವೇನು ಎಂದು ತಿಳಿಸುತ್ತೇವೆ ನೋಡಿ. ಮುಂದೆ ಬರುವಂತಹ ಗ್ರಹಣದಿಂದ ಈ ಭೂ ಲೋಕಕ್ಕೆ ಒಂದು ಮಹಾಕಂಟಕ ಎದುರಾಗುತ್ತದೆ ಅಷ್ಟೇ ಅಲ್ಲದೆ ಭೂಕಂಪ ಹಾಗೂ ವರುಣಣ ಆರ್ಭಟದಿಂದ ವಿಪರೀತ ಮಳೆ ಉಂಟಾಗುತ್ತದೆ ಎಂಬ ಭವಿಷ್ಯ ನುಡಿದಿದ್ದಾರೆ. ಈ ಗ್ರಹಣವಾದ ನಂತರ ಜಗತ್ತಿನಲ್ಲಿ ಎಲ್ಲಿಲ್ಲದ ಅಚ್ಚರಿಯ ಸಂಗತಿಗಳು ನಡೆಯುತ್ತದೆ ಇದರಿಂದ ಮನುಕುಲಕ್ಕೆ ಬಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಪ್ರಳಯ, ಮಳೆ, ಮತ್ತು ಭೂಕಂಪ ಸಂಭವಿಸಿಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಕೂಡ ಕೊರೋನಾ ಎಂಬ ಮಹಾಮಾರಿ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.


ಶ್ರೀನಿವಾಸಪುರ ತಾಲೂಕಿನ  ದಳಸನೂರು ಗ್ರಾಮಕ್ಕೆ ಆಗಮಿಸಿದ್ದ ಕೋಡಿಮಠದ ಶ್ರೀಗಳು ಮುಂದಿನ ಯುಗಾದಿ ಹಬ್ಬದ ಆದ ಮೇಲೆ ಈ ಸೃಷ್ಟಿಯಲ್ಲಿ ಹಲವಾರು ಬದಲಾವಣೆಗಳು ಉಂಟಾಗುವ  ಸಾಧ್ಯತೆಗಳಿವೆ ಎಂದಿದ್ದಾರೆ. ಇನ್ನು ಮನೆಯಲ್ಲಿ ನಾವು ಮಾಡುವ ಕೆಲ ಚಟುವಟಿಕೆಗಳಿಂದ ನಮ್ಮ ಸಂಪ್ರದಾಯ ಕಣ್ಮರೆಯಾಯಿತು ಪಾದರಕ್ಷೆಗಳನ್ನು ಹಾಕಿಕೊಂಡು ಅಡುಗೆ ಮನೆಯಲ್ಲಿ ತಿರುಗಾಡಬಾರದು. ನಾವೆಲ್ಲರೂ ಈಗ ಒಳ್ಳೆಯ ಸಂಪ್ರದಾಯಗಳನ್ನು‌ ಕೈ ಬಿಟ್ಟಿರುವ ಕಾರಣದಿಂದ ಕಾಯಿಲೆಗಳು ನಮ್ಮನ್ನು ಕಾಡುತ್ತಿದೆ ಹಾಗಾಗಿ ಮನೆ ಮತ್ತು ಸುತ್ತಮುತ್ತಲಿನ ವಾತವರಣದಲ್ಲಿ ಸ್ವಚ್ಛತೆಯನ್ನು ಕಾಪಡಿಕೊಳ್ಳಿ ಎಂದು ಹೆಚ್ಚರಿಕೆ ನೀಡಿದ್ದಾರೆ‌. ಕಣ್ಣಿಗೆ ಕಾಣದ ಈ ಕೊರೋನಾ ವೈರಾಣುವಿನಿಂದ ಇಂದು ಜಗತ್ತಿನ ಸರಿ ಸುಮಾರು 700 ಕೋಟಿ ಜನರು ತಮ್ಮ ಪ್ರಾಣದ ರಕ್ಷಣೆ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ ಈ ಪುಟ್ಟ ಕಾಯಿಲೆ ಇಷ್ಟೆಲ್ಲ ಹರಡುವುದಕ್ಕೆ ಮನುಷ್ಯ ಅಜ್ಞಾನದಿಂದ ನೆಡೆದುಕೊಂಡಿರುವುದೇ ಕಾರಣ ಎಂದಿದ್ದಾರೆ ಕೊನೆಯದಾಗಿ ಭಗವಂತನನ್ನು ಭಕ್ತಿಯಿಂದ ಬೇಡಿಕೊಂಡರೆ ಪರಿಹಾರವೂ ದೊರೆಯುತ್ತದೆ ಎಂದಿದ್ದಾರೆ.

By admin

Leave a Reply

Your email address will not be published. Required fields are marked *