ಗ್ಲಾಸ್, ಸಿರಾಮಿಕ್, ಸ್ಟೀಲ್ ಹಾಗೂ ಪ್ಲಾಸ್ಟಿಕ್ ಪಾತ್ರೆಗಳ ಮೇಲಿನ ಸ್ಟಿಕ್ಕರ್ ತೆಗೆಯಲು ಒಮ್ಮೆ ಈ ಟಿಪ್ಸ್ ಬಳಸಿ ನೋಡಿ ... - Karnataka's Best News Portal

ನಾವು ಮಾರ್ಕೆಟ್ ನಿಂದ ಯಾವುದೇ ಪ್ಲಾಸ್ಟಿಕ್ ಡಬ್ಬಗಳನ್ನು, ಗ್ಲಾಸ್ ಐಟಂಗಳನ್ನು, ಮೆಟಲ್ ಐಟಂಗಳನ್ನು ತಂದಾಗ ಅದರ ಮೇಲೆ ಪ್ರೈಸ್ ಸ್ಟಿಕರ್ ಅನ್ನು ಅಂಟಿಸಿ ಇರುತ್ತಾರೆ ಸ್ಟಿಕ್ಕರ್ ಎಷ್ಟು ಹಳೆಯದಾಗುತ್ತದೆ ತೆಗೆಯಲು ಅಷ್ಟೇ ಕಷ್ಟ ಆಗುತ್ತೆ. ಮೊದಲಿಗೆ ಡೆಲಿಕೇಟ್ ಸಿರಾಮಿಕ್ ಬೌಲ್ ಗಳ ಮೇಲೆ ಅಥವಾ ಐಟಂಗಳ ಮೇಲೆ ಇರುವ ಸ್ಟಿಕ್ಕರ್ ತೆಗೆಯಲು ನೈಲ್ ಪೇಂಟ್ ರಿಮೂವರ್ ಬಳಸಬಹುದು, ಸ್ವಲ್ಪ ನೈಲ್ ಪೇಂಟ್ ರಿಮೋವರ್ ಸ್ಟಿಕ್ಕರ್ ಮೇಲೆ ಹರಡಿ ಇದನ್ನು 30 ಸೆಕೆಂಡ್ ಹಾಗೆ ಬಿಟ್ಟು ನಂತರ ಇದನ್ನು ಈಸಿಯಾಗಿ ತೆಗೆಯಬಹುದು. ನಂತರ ಗ್ಲಾಸ್, ಮಿಲ್ಕ್ ಬಾಟಲ್ ನ ಎಲ್ಲಾ ಸ್ಟಿಕ್ಕರ್ ತೆಗೆಯಲು ಕೂಡ ಇದೇ ಮೆಥೆಡ್ ಫಾಲೋ ಮಾಡಬಹುದು, ನಾರ್ಮಲ್ ಆಗಿ ಗ್ಲಾಸ್ ಮಿಲ್ಕ್ ಬಾಟೆಲ್ ಬಿಸಿ ನೀರಿನಲ್ಲಿ ಅದಿದ್ದರೆ ಸಾಕು ಸ್ಟಿಕರ್ ಹೊರಟುಹೋಗುತ್ತದೆ.

ಒಂದು ವೇಳೆ ಸ್ಟಿಕ್ಕರ್ ಅಂಟು ಬಾಟೆಲ್ ಗೆ ತಾಗಿದ್ದರೆ ಉಗುರಿನಿಂದ ಹೋಗಿಸಬಹುದು. ನಂತರ ಪ್ಲಾಸ್ಟಿಕ್ ಬಾಟಲ್ ಗಳ ಮೇಲಿರುವ ಸ್ಟಿಕ್ಕರ್ ತೆಗೆಯಲು ನೈಲ್ ಪೇಂಟ್ ರಿಮೊವರ್ ಬಳಸಬಹುದು. ಸ್ಟಿಕ್ಕರ್ ದೊಡ್ಡದಿದ್ದರೆ ರಿಮೂವರ್ ಜಾಸ್ತಿ ಬೇಕಾಗುತ್ತದೆ ಹಾಗೆ ಸರಿಯಾಗಿ ಕೂಡ ಆಗುವುದಿಲ್ಲ, ಅದರ ಬದಲು ನೀವು ಬೇಕಿಂಗ್ ಸೋಡಾ ಅಥವ ಅಡುಗೆ ಸೋಡವನ್ನು ಕುಕ್ಕಿಂಗ್ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಪೇಸ್ಟ ಅನ್ನು ಪ್ಲಾಸ್ಟಿಕ್ ಡಬ್ಬಗಳ ಮೇಲೆ ಇರುವ ಸ್ಟಿಕ್ಕರ್ ಗೆ ಚೆನ್ನಾಗಿ ಹಚ್ಚಿ 10 ನಿಮಿಷ ಹಾಗೆ ಬಿಟ್ಟು, 10 ನಿಮಿಷದ ನಂತರ ಸ್ಕ್ರಬ್ಬರ್ ನಿಂದ ಚೆನ್ನಾಗಿ ವಾಷ್ ಮಾಡಿಕೊಳ್ಳಿ.

By admin

Leave a Reply

Your email address will not be published. Required fields are marked *