ನಟಿ ಶ್ವೇತಾ ಚಂಗಪ್ಪ ಇದ್ದಕ್ಕಿದ್ದಂತೆ ಮಜಾ ಟಾಕೀಸ್ ಬಿಡಲು ನಿಜವಾದ ಕಾರಣ ಯಾರು ಗೊತ್ತಾ ? ನಿಮ್ಮ ಗೊಂದಲ ಇದೆ - Karnataka's Best News Portal

ನಟಿ ಶ್ವೇತಾ ಚಂಗಪ್ಪ ಇದ್ದಕ್ಕಿದ್ದಂತೆ ಮಜಾ ಟಾಕೀಸ್ ಬಿಡಲು ನಿಜವಾದ ಕಾರಣ ಯಾರು ಗೊತ್ತಾ ? ನಿಮ್ಮ ಗೊಂದಲ ಇದೆ…

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಅತಿ ಹೆಚ್ಚು ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಸೃಜನ್ ಜೊತೆಗೆ ಬಹಳ ಹಿಟ್ ಆಗಿದ್ದ ಮಜಾ ಮನೆಯ ರಾಣಿ ಶ್ವೇತಾ ಚಂಗಪ್ಪ ಹೊಸ ಸೀಸನ್ ನಿಂದ ದೂರ ಉಳಿದಿದ್ದರು. ಇದಕ್ಕೆ ಕಾರಣವೂ ಇದೆ. ಹೌದು ಶ್ವೇತಾ ಚಂಗಪ್ಪ ಹಾಗೂ ಸೃಜನ್ ಲೋಕೇಶ್ ಜೋಡಿ ತೆರೆಯ ಮೇಲೆ ಬಹಳ ಹಿಟ್ ಕೂಡ ಆಗಿತ್ತು. ಶ್ವೇತಾ ಚಂಗಪ್ಪ ಗರ್ಭಿಣಿಯಾದ ಸಮಯದಲ್ಲಿಯೇ ಮಜಾ ಟಾಕೀಸಿನ ಕಳೆದ ಸೀಸನ್ ನಿಂದಲೇ ದೂರ ಉಳಿದರು. ಸೃಜನ್ ಲೋಕೇಶ್ ಕುಟುಂಬದಲ್ಲಿ ಒಬ್ಬರಾಗಿದ್ದ ಶ್ವೇತಾ ಅವರಿಗೆ ಗಿರಿಜಾ ಲೋಕೇಶ್ ಅವರು ಹಾಗೂ ಸೃಜನ್ ಪತ್ನಿ ಗ್ರೀಷ್ಮಾ ಅವರು ಶ್ವೇತಾ ಅವರ ಮನೆಗೆ ತೆರಳಿ ಸೀಮಂತ ಶಾಸ್ತ್ರ ನೆರವೇರಿಸಿ ಶ್ವೇತಾ ಅವರ ಇಷ್ಟದ ಅಡುಗೆಯನ್ನು ಸಹ ಮಾಡಿ ಬಡಿಸಿ ಮಡಿಲು ತುಂಬಿ ಉಡುಗೊರೆ ನೀಡಿ ಬಂದಿದ್ದರು.

ನಂತರದಲ್ಲಿ ಶ್ವೇತಾ ಚಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದು ಸದ್ಯ ಮಗನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ಮಗನಿಗೆ ಒಂದು ವರ್ಷ ತುಂಬಿದೆ. ಆದರೂ ಕೊರೊನಾ ಕಾರಣದಿಂದ ಮಜಾ ಟಾಕೀಸಿನಿಂದ ದೂರ ಉಳಿದರು. ಹೌದು ಮನೆಯಲ್ಲಿ ಮಗು ಇದ್ದ ಕಾರಣ ಇಂತಹ ಸಮಯದಲ್ಲಿ ಹೊರಗೆ ಹೋಗಿ ಮರಳಿ ಮನೆಗೆ ಬಂದಾಗ ಸುಮ್ಮನೆ ಆರೋಗ್ಯದ ತೊಂದರೆ ಆಗೋದು ಬೇಡ ಎಂಬ ಕಾರಣಕ್ಕೆ ಈ ಬಾರಿ ಮಜಾ ಟಾಕೀಸಿನಲ್ಲಿ ಶ್ವೇತಾ ಅವರು ಕಾಣಿಸಿಕೊಳ್ಳಲಿಲ್ಲ.. ಬದಲಿಗೆ ತಮ್ಮದೇ ಆದ ಸ್ವಂತ ಉದ್ಯಮವೊಂದನ್ನು ಶುರು ಮಾಡಿದ್ದು ಅದರಲ್ಲಿಯೇ ಬ್ಯುಸಿ ಆಗಿದ್ದರು. ಇನ್ನು ಸಾಮಾಜಿಕ‌ ಜಾಲತಾಣದಲ್ಲಿ ಆಗಾಗ ಮಗನ ಫೋಟೋ ಹಂಚಿಕೊಳ್ಳುವ ಶ್ವೇತಾ ಕೊಡಗಿನ ವೀರನ ರೀತಿಯಲ್ಲಿ ಮಗನನ್ನು ರೆಡಿ ಮಾಡಿ ಸಂತೋಷ ಹಂಚಿಕೊಂಡಿದ್ದರು.

By admin

Leave a Reply

Your email address will not be published. Required fields are marked *