ಬಿಪಿಎಲ್ ಕಾರ್ಡ್ ಇದ್ದರೆ ಮೊದಲು ನೋಡಿ ಸರ್ಕಾರದಿಂದ ಹೊಸ ಯೋಜನೆ ಅನೇಕ ಲಾಭಗಳು - Karnataka's Best News Portal

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ 1.5 ಲಕ್ಷ ಸಬ್ಸಿಡಿ….

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿರುವ ನಿರುದ್ಯೋಗಿ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಹೊಂದಲು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ S ನಟರಾಜುರವರು ಮಾಹಿತಿ ನೀಡಿದ್ದಾರೆ.ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಬ್ಯಾಂಕ್ ಗಳಿಂದ ಗರಿಷ್ಠ 3 ಲಕ್ಷದ ವರೆಗೂ ಸಾಲಸೌಲಭ್ಯ ನೀಡಲಾಗುತ್ತದೆ. ವಿಧವೆಯರು, ಅಂಗವಿಕಲರು ಹಾಗೂ ಸಂಕಷ್ಟದಲ್ಲಿರು ಸಾಮಾನ್ಯ ವರ್ಗದ ಮಹಿಳೆಯರಿಗು ಸಹಾಯ ಸೌಲಭ್ಯವನ್ನು ನೀಡಲಾಗುತ್ತದೆ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಮಹಿಳೆಯರಿಗೆ ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ ಎಂದು ನೋಡುವುದಾದರೆ.

ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಖರ 30ರಷ್ಟು ಗರಿಷ್ಠ 90 ಸಾವಿರ ರೂಗಳವರೆಗೆ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇಕಡಾ 50ರಷ್ಟು ಗರಿಷ್ಟ 150000 ರೂಗಳ ಸಹಾಯಧನ ನೀಡಲಾಗುವುದು. ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರು 18 ವರ್ಷದಿಂದ 55 ವರ್ಷದ ಮಹಿಳೆಯರು ಅರ್ಜಿಸಲ್ಲಿಸಬಹುದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರ ಕುಟುಂಬದ ವಾರ್ಷಿಕ ಆದಾ 1.5ಲಕ್ಷ ಇರಬೇಕು ಸಾಮಾನ್ಯ ವರ್ಗದ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷದವರೆಗೆ ಇರಬೇಕು ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪತ್ರ, ಎಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ದಾಖಲಾತಿ ಕಡ್ಡಾಯವಾಗಿ ಸಲ್ಲಿಸಬೇಕು. ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ನವೆಂಬರ್ 23ರಿಂದ ಉಚಿತವಾಗಿ ಅರ್ಜಿ ಪಡೆದ ನವೆಂಬರ್ 30ರ ಒಳಗಾಗಿ ಅದೇ ಕಚೇರಿಗೆ ಅರ್ಜಿ ಸಲ್ಲಿಸಬೇಕು.

 

By admin

Leave a Reply

Your email address will not be published. Required fields are marked *