ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರು ನೋಡಿದ್ರೆ ಶಾಕ್.... - Karnataka's Best News Portal

ಯಾವುದೋ ಒಂದು ಜಾಲತಾಣದಲ್ಲಿ ಕಳ್ಳತನದ ವಿಡಿಯೋಗಳನ್ನು ನೋಡಿಯೆ ಇರುತ್ತೇವೆ ಆದರೆ ಅವರಲ್ಲಿ ಕೆಲವರು ಆತುರದಿಂದ ಕಳ್ಳತನ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ ಅದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಆಸ್ಟ್ರೇಲಿಯಾದ ಎಟಿಎಂ ಮಿಷನ್ ಅನ್ನು ಚೈನ್ಇಂದ ಕಟ್ಟಿಹಾಕಿ ಕಾರಿನಲ್ಲಿ ಎಳೆದುಕೊಂಡು ಹೋಗುವುದೇ ಇವರ ಫ್ಲ್ಯಾನ್. ಎಟಿಎಂನಲ್ಲಿರುವ ಗ್ಲ್ಯಾಸ್ ಡೋರ್ ಹೊಡೆದು ಚೈನ್ ತೆಗೆದುಕೊಂಡು ಒಳಗೆ ಹೋಗಿ ಎಟಿಎಂ ಮಿಷನ್ ಗೆ ಕಟ್ಟುವಾಗ ಹೊರಗೆ ಕಾರಿಗೆ ಕಟ್ಟಿದ್ದ ಚೈನ್ ಕಳೆದುಹೋಗಿತ್ತು ಈ ರೀತಿ ಹೊರಗೆ ಬಂದು ಕಳಚಿದ ಲಿಂಕ್ ನೋಡದೆ ಕಾರು ತೆಗೆದುಕೊಂಡು ಹೋಗುತ್ತಾನೆ. ಆದರೆ ಸ್ವಲ್ಪ ಮುಂದೆ ಹೋದ ನಂತರ ಎಟಿಎಂ ಮಿಷಿನ್ ಕಾಣಿಸದೆ ಇದ್ದ ಕಾರಣ ಇನ್ನೊಂದು ಬಾರಿ ಬಂದು ಆ ಎರಡು ಚೈನ್ ಲಿಂಕ್ ಕನೆಕ್ಟ್ ಮಾಡಲು ಪ್ರಯತ್ನಿಸುತ್ತಾನೆ ಆದರೆ ಅದು ಸಾಧ್ಯವಾಗಲಿಲ್ಲ ನಂತರ ಅವನ ಟೈಮ್ ಸರಿ ಇಲ್ಲ ಎಂದು ಅಲ್ಲಿಂದ ಹೊರಟು ಹೋಗಿಬಿಡುತ್ತಾನೆ ಇದು ಎಟಿಎಂ ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಮತ್ತೊಬ್ಬ ಕಳ್ಳ ಮನೆಯ ಒಳಗೆ ಇರುವ ಬೈಕ್ ಕಳ್ಳತನ ಮಾಡಲು ಬಂದಿದ್ದಾನೆ ಆದರೆ ಇದು ಯಾವ ರೀತಿ ಕಾಮಿಡಿ ಆಗಿ ಕೊನೆಯಾಗಿದೆ ಎಂದರೆ, ಆ ಕಳ್ಳ ಬೈಕ್ ತಳ್ಳಿಕೊಂಡು ಹೊರಗೆ ಹೋಗುವಾಗ ಬೈಕ್ ಗೇಟ್ ಗೆ ಸಿಕ್ಕಿ ಹಾಕಿಕೊಳ್ಳುತ್ತದೆ ಆ ಕಳ್ಳ ಎಷ್ಟೇ ಪ್ರಯತ್ನಿಸಿದರೂ ಕೂಡ ಅದನ್ನು ಬಿಡಿಸಲು ಸಾಧ್ಯವಾಗಲಿಲ್ಲ ಅಷ್ಟರಲ್ಲಿ ಮನೆಯ ಓನರ್ ಹೊರಗೆ ಬಂದು ಅವನನ್ನು ಅಲ್ಲಿಂದ ಓಡಿಸುತ್ತಾನೆ ಸರಿಯಾದ ಸಮಯಕ್ಕೆ ಮನೆ ಓನರ್ ಬಂದಕಾರಣ ಬೈಕ್ ಉಳಿಸಿಕೊಳ್ಳುತ್ತಾನೆ. ಮತ್ತೊಬ್ಬ ಕಳ್ಳ ಮನೆಯೊಳಗೆ ಹೋಗಿ ಕಳ್ಳತನ ಮಾಡಲು ಗೇಟ್ ತೆಗೆಯಲು ಪ್ರಯತ್ನ ಮಾಡುತ್ತಾನೆ ಮನೆಯಲ್ಲಿದ್ದ ದೊಡ್ಡ-ದೊಡ್ಡ ವಸ್ತುಗಳನ್ನು ಕಳ್ಳತನ ಮಾಡಲು ಬಂದಿರುತ್ತಾನೆ ಆದರೆ ಗೇಟ್ ಅವನ ಮೇಲೆ ಬಿದ್ದು ದೊಡ್ಡ ಮಟ್ಟಿಗೆ ಅವನ ಕಾಲಿಗೆ ಪೆಟ್ಟಾಗುತ್ತದೆ.

By admin

Leave a Reply

Your email address will not be published. Required fields are marked *