ಇದೀಗ ಕನ್ನಡದ ಟಾಪ್ ಧಾರಾವಾಹಿ ಒಂದು ಮುಕ್ತಾಯಗೊಳ್ಳುತ್ತಿದೆ ನೋಡಿ ಬೆಚ್ಚಿ ಬೀಳ್ತಿರಾ.... - Karnataka's Best News Portal

ಇತ್ತೀಚಿಗೆ ಜೀ ಕನ್ನಡದಲ್ಲಿ ಬರುತ್ತಿರುವಂತಹ ಜೊತೆ ಜೊತೆಯಲ್ಲಿ ಧಾರ ವಾಹಿ ಎಲ್ಲರ ಮನೆ ಮೆಚ್ಚಿನ ಸೀರಿಯಲ್ ಆಗಿದೆ ಕನ್ನಡ ಕಿರುತೆರೆ ಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿ ಇದಾಗಿದ್ದು ಹಿರಿಯರಿಂದ ಹಿಡಿದು ಹರಿ ಹರಿಯದ ಹುಡುಗ,ಹುಡುಗಿಯರ ತನಕ ಈ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಾರೆ. ಅಲ್ಲದೇ ಈ ಧಾರಾ ವಾಹಿ ತೆರೆಕಂಡ ಕೇವಲ ತಿಂಗಳಲ್ಲೇ ನಾಯಕಿ ಮೇಘಾನಾ ಶೆಟ್ಟಿ ಇಂದ ಹಿಡಿದು ಅನೇಕ ಕಲಾವಿದರಿಗೆ ದೊಡ್ಡ ಮಟ್ಟದ ಹೆಸರು ಮತ್ತು ಖ್ಯಾತಿ ತಂದು ಕೊಟ್ಟಿದೆ. ಇನ್ನು ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರ ಕ್ಕೂ ಕೂಡ ಮಹತ್ವವಿದೆ.ಸೆಪ್ಟೆಂಬರ್ 9 ರಂದು ಪ್ರಪ್ರಥಮವಾಗಿ ಪ್ರಸಾರಗೊಂಡ ಈ ಧಾರಾವಾಹಿ, ಮೊದಲ ವಾರದ ರೇಟಿಂಗ್ ನೋಡಿ ಇಡೀ ಕನ್ನಡ ಕಿರುತೆರೆ ಪ್ರಪಂಚವೇ ಬೆಚ್ಚಿ ಬಿದ್ದಿತ್ತು ಮತ್ತು ಒಂದೊಮ್ಮೆ ಪರಬಾಷಿಗರು ಕೂಡ ತಿರುಗಿ ನೋಡುವಂತೆ ಮಾಡಿತ್ತು .ಇನ್ನು ರೇಟಿಂಗ್ ವಿಚಾರದ ಜೊತೆ, ಜೊತೆ ಜೊತೆಯಲ್ಲಿ ಧಾರಾವಾಹಿಯ ಶೀರ್ಷಿಕೆ ಹಾಡು ಕೂಡ ದೊಡ್ಡ ಯಶಸ್ಸನ್ನು ಕಂಡಿದ್ದು, 100ರ ಸಂಭ್ರಮದ ಪ್ರಯುಕ್ತ ಜೀ ವಾಹಿನಿಯು ಧಾರಾವಾಹಿಯ ಶೀರ್ಷಿಕೆ ಪೂರ್ಣ ಹಾಡನ್ನು ಬಿಡುಗಡೆ ಮಾಡಲಾಗಿತ್ತು.ಭಾರತ ಕಿರುತೆರೆಯ ಇತಿಹಾಸದಲ್ಲೇ ಧಾರಾವಾಹಿಯ ಶೀರ್ಷಿಕೆ ಹಾಡು ಬಿಡುಗಡೆಯಾದ 12 ಗಂಟೆಯಲ್ಲಿ, ಜೀ ವಾಹಿನಿ ಪೇಜ್ ನಲ್ಲಿ ಬರೋ ಬ್ಬರಿ 1 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು. ಇನ್ನು ಬಹಳಷ್ಟು ವಾರಗಳು ಜೊತೆ ಜೊತೆಯಲಿ ಧಾರಾವಾಹಿ ನಂಬರ್ ಒನ್ ಪಟ್ಟ ಉಳಿಸಿ ಕೊಂಡಿತ್ತು.ಧಾರಾವಾಹಿಯನ್ನು ಕೆಲ ತಿಂಗಳುಗಳ ಹಿಂದೆ ಅದೇ


ವಾಹಿನಿಯ ಗಟ್ಟಿಮೇಳ ಧಾರಾವಾಹಿ ಹಿಂದಿಕ್ಕಿ‌ಟ್ಟು ಮೊದಲ ಸ್ಥಾನ ಪಡೆದುಕೊಂಡಿತ್ತು. ಕೆಲವು ವಾರಗಳು ಜೊತೆಜೊತೆಯಲಿ ಧಾರಾವಾಹಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡದಲ್ಲಿ ಗಟ್ಟಿಮೇಳ ಹಾಗೂ ಜೊತೆಜೊತೆಯಲಿ ಧಾರಾವಾಹಿಗಳು ವರ್ಷದ ಕಾಲದಿಂದ ಟಾಪ್ ಎರಡು ಧಾರಾವಾಹಿಗಳಾಗಿವೆ. ಜೊತೆಗೆ ಒಳ್ಳೆಯ ರೇಟಿಂಗ್ ಇದ್ದರೂ ಸಹ ಧಾರಾವಾಹಿಯೊಂದು ಅಂತ್ಯವಾಗುತ್ತಿವೆ.ಇದರ ಜೊತೆಗೆ ಕಿರುತೆರೆಯ ಟಾಪ್ ಹತ್ತು ಧಾರಾವಾಹಿಗಳಲ್ಲಿ ಜೀ ವಾಹಿನಿಯ ಯಾರೇ ನೀ ಮೋಹಿನಿ ಧಾರಾವಾಹಿ ಕೂಡ ಒಂದು, ಇದೀಗ ಈ ಧಾರಾವಾಹಿ ಕೂಡ ಅಂತ್ಯವಾಗುತ್ತಿದೆ. ಕೋರೊನಾ ಹಾವಳಿ ಯಿಂದ ಸುಮಾರು 20 ಕ್ಕೂ ಹೆಚ್ಚು ಧಾರಾವಾಹಿ ಳು ಈಗಾ ಗಲೇ ಮುಚ್ಚಿ ಹೋಗಿದ್ದು, ಕಲರ್ಸ್ ವಾಹಿನಿಯೇ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದರಿಂದ ಜನ ಮೆಚ್ಚಿನ ಧಾರಾವಾಹಿ ಮಗಳು ಜಾನಕಿ ಯನ್ನು ಮುಕ್ತಾಯಗೊಳಿಸಿದ್ದು, ಈ ವಿಚಾರ ಕಿರುತೆರೆ ಅಭಿಮಾನಿಗಳಿಗೆ ಇಗಲೂ ಬೇಸರ ತಂದಿದೆ. ಟಿ ಆರ್ ಪಿ ಕಾರಣಕ್ಕಾಗಿ ಕೆಲ ಧಾರಾ ವಾಹಿ ಅಂತ್ಯಗೊಂಡರೆ, ಕೆಲ ಧಾರಾವಾಹಿ‌ಗಳಿಗೆ ಒಳ್ಳೆಯ ರೇಟಿಂಗ್ ಇದ್ದರೂ ಸಹ ಮುಗಿಸ ಲಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರೇ ಟಿಂಗ್ ಇಲ್ಲದ ಕಾರಣ ಎರಡು ತಿಂಗಳ ಹಿಂದಷ್ಟೇ ಶುರುವಾದ ಲಗ್ನ ಪತ್ರಿಕೆ ಧಾರಾವಾಹಿಯನ್ನು ಮುಗಿಸಲಾಗುತ್ತಿದೆ. ಈ ಬೆಳವಣಿಗೆಗೆ ಕನ್ನಡ ದಲ್ಲಿ ಪ್ರಸಾರ ವಾಗುತ್ತಿರುವ ಡಬ್ಬಿಂಗ್ ದಾರಾವಾಹಿಗಳೆ ಎಂಬುದುಬೇಸರದ ಸಂಗಂತಿ.

By admin

Leave a Reply

Your email address will not be published. Required fields are marked *