ನಟಿ ಸುಹಾಸಿನಿ ಒಬ್ಬ ಬಹುಮುಖ ಪ್ರತಿಭೆ ಇದು ನಿಮಗೆ ಗೊತ್ತಾ.?ಇವರ ಗಂಡ ಹಾಗೂ ಮಗ ಯಾರು.? - Karnataka's Best News Portal

ಸಹಜ ಸುಂದರಿ ನಟಿ ಸುಹಾಸಿನಿ ಅವರು ತಮ್ಮ ಸೌಂದರ್ಯ ಹಾಗೂ ಮನಮೋಹಕ ಅಭಿನಯದಿಂದ ಪ್ರೇಕ್ಷಕರ ಮನದಲ್ಲಿ ಸ್ಥಿರವಾಗಿ ನಲೆಸಿದ್ದಾರೆ. ಸುಂದರ ಚೆಲುವೆ 1980 ರಲ್ಲಿ ತಮಿಳು ಸಿನಿಮಾ ಒಂದರ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ ಸುವಾಸಿನಿ 80-90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಗುರುತಿಸಿ ಕೊಂಡಿದ್ದರು. ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಎಂಬ ಸಿನಿಮಾದ ಮೂಲಕ 1982 ರಲ್ಲಿ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದ ನಂತರ 1984 ರಲ್ಲಿ ತೆರೆಕಂಡ ಸಾಹಸಸಿಂಹ ವಿಷ್ಣುವರ್ಧನ್ ಅವರ ಬಂಧನ ಸಿನಿಮಾದಲ್ಲಿ ನಾಯಕಿ ಯಾಗಿ ನಟಿಸಿದರು ಆ ಚಿತ್ರದ ತಮ್ಮ ಅದ್ಭುತ ಅಭಿನಯದಿಂದ ಕನ್ನಡ ಸಿನಿಮಾ ರಸಿಕರ ಹೃದಯ ಗೆದ್ದರು ನಂತರ ಉಷಾ, ಸುಪ್ರಭಾತ, ಮುತ್ತಿನ ಹಾರ, ಹಿಮಪಾತ, ಅಮೃತವರ್ಷಿಣಿ ಸಿನಿಮಾಗಳು ನಟಿ ಸುಹಾಸಿನಿ ಅವರಿಗೆ ಹೆಚ್ಚಿನ ಹೆಸರು ತಂದುಕೊಟ್ಟವು.

ನಟಿ ಸುಹಾಸಿನಿ ಅವರು ಕನ್ನಡದ ಚಿತ್ರಗಳಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಹಾಸಿನಿ ಅವರು ತಮಿಳು, ತೆಲುಗುಲ ಕನ್ನಡ, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ನಟಿಸಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು ಮದುವೆಯಾಗಿ ಆಗಿರುವ ಸುಹಾಸಿನಿ ಅವರಿಗೆ ನಂದನ್ ಎಂಬ ಒಬ್ಬ ಮಗನಿದ್ದಾನೆ ನಟಿ ಸುಹಾಸಿನಿ ಕೇವಲ ತೆರೆಮೇಲೆ ಕಾಣಿಸಿಕೊಳ್ಳುವುದಲ್ಲದೆ ಕೆಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ ಹಾಗೂ ತಮಿಳಿನ ಮೂರು ಚಿತ್ರಗಳಿಗೆ ನಿರ್ದೇಶನ ಕೂಡ ಮಾಡಿದ್ದಾರೆ ಹಾಗೂ ಕೆಲವು ಚಿತ್ರಗಳಿಗೆ ಕ್ಯಾಮೆರಾ ಸಹಾಯಕಿಯಾಗಿ ಕೆಲಸ ಮಾಡಿದ್ದಾರೆ.

By admin

Leave a Reply

Your email address will not be published. Required fields are marked *