ಚಂದನ್ ಮತ್ತು ಕವಿತ ಗೌಡ ಮದುವೆ ಆಗುತ್ತಿದ್ದಾರೆಯೆ ಇಂಟರೆಸ್ಟಿಂಗ್ ಮಾಹಿತಿ ಬೇಗ ನೋಡಿ... - Karnataka's Best News Portal

ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲ ಇದ್ದೇ ಇರುತ್ತದೆ. ಈಗ ಅಂತಹ ಒಂದು ಕೌತುಕ ಎದುರಾಗಿರುವುದು ನಟ ಚಂದನ್‌ ಮತ್ತು ನಟಿ ಕವಿತಾ ಗೌಡ ವಿಚಾರದಲ್ಲಿ. ಈ ಇಬ್ಬರು ನಟರು ತೆರೆಮೇಲೆ ಜೋಡಿಯಾಗಿ ಮಿಂಚಿದ್ದು ರಿಯಲ್ ಲೈಫ್‌ನಲ್ಲಿಯೂ ಗಂಡ-ಹೆಂಡತಿ ಆಗಲಿದ್ದಾರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಅದನ್ನು ಜನರು ನೇರವಾಗಿ ಕೇಳುತ್ತಿದ್ದಾರೆ. ಅಚ್ಚರಿ ಎಂದರೆ, ಧಾರಾವಾಹಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಇವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇದೆ. ಅದಕ್ಕೆ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳೇ ಸಾಕ್ಷಿ ಒದಗಿಸುತ್ತವೆ. ಇತ್ತೀಚಿಗೆ ಕವಿತಾ ಅವರು ಫೇಸ್ಬುಕ್ ಲೈವ್ ಬಂದಿದ್ದಾಗ ಚಂದನ್ ಮತ್ತು ಕವಿತಾ ಮಾತನಾಡುವಾಗ ಹಲವಾರು ರೀತಿಯ ಕಮೆಂಟ್ಸ್ ಗಳು ಬಂದಿದ್ದು ನೀವಿಬ್ಬರು ಮದುವೆಯಾಗುತ್ತೀರ ಕೇಳಿದರು. ಅವರಿಬ್ಬರನ್ನು ಪದೇಪದೇ ಜೊತೆಯಾಗಿ ನೋಡಿದ ಅಭಿಮಾನಿಗಳ ಮನದಲ್ಲಿ ಅನುಮಾನ ಆರಂಭಿಸಿದೆ.

ಚಂದನ್‌ ಮತ್ತು ಕವಿತಾ ಜೊತೆಯಾಗಿ ಒಂದು ಫೋಟೋಶೂಟ್‌ ಮಾಡಿಸಿದ್ದಾರೆ. ಕವಿತಾ ಗೌಡ ಜೊತೆ ಮೊದಲ ಫೋಟೋಶೂಟ್‌ ಎಂದು ಚಂದನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರು ಮಾಡಿರುವ ಕಾಮೆಂಟ್‌ ಅಚ್ಚರಿ ಮೂಡಿಸುವಂತಿದೆ. ಇಬ್ಬರ ಜೋಡಿಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದನ್‌ ಮತ್ತು ಕವಿತಾ ರಿಯಲ್‌ ಲೈಫ್‌ನಲ್ಲಿ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಪೋಸ್ಟ್‌ಗೆ ಬಂದಿರುವ ಕಾಮೆಂಟ್‌ಗಳ ಮೇಲೆ ಒಮ್ಮೆ ಕಣ್ಣಾಡಿಸೋಣ. ತುಂಬಾ ಮುದ್ದಾದ ಜೋಡಿ. ರಿಯಲ್‌ ಲೈಫ್‌ನಲ್ಲಿಯೂ ಜೋಡಿಯಾದರೆ ಚೆನ್ನಾಗಿರುತ್ತದೆ. ನಮಗಂತೂ ತುಂಬಾ ಖುಷಿ ಆಗತ್ತೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಲವ್ಲೀ ಪೇರ್‌ ನೀವಿಬ್ರು ಲವ್‌ ಮಾಡ್ತಿದ್ದೀರಾ? ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ.

By admin

Leave a Reply

Your email address will not be published. Required fields are marked *