ನಟಿ ವೀಣಾ ಸುಂದರ್ ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ಬಹಳ ವರ್ಷಗಳಿಂದ ಪ್ರಸಿದ್ಧ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ವೀಣಾ ಸುಂದರ್ ಅವರು ಕಿರುತೆರೆಯ ಖ್ಯಾತ ನಿರ್ಮಾಪಕ ಟಿ. ಎಲ್ ಸೀತಾರಾಮ್ ಅವರ ಮಾಯಾಮೃಗ ಸೀರಿಯಲ್ ಮೂಲಕ ಪ್ರಸಿದ್ಧಿ ಪಡೆದರು ಇನ್ನು ಇವರ ಪತಿ ಸುಂದರ್ ಅವರು ಕೂಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಮಾಯಾಮೃಗ ಸೀರಿಯಲ್ ನಲ್ಲಿ ಸುಂದರ್ ಅವರು ಕೂಡ ಅಭಿನಯಿಸಿದ್ದರು ಸುಂದರ್ ಅವರು ಅಭಿನಯಕ್ಕೆ ಬರುವ ಮುಂಚೆ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಇವರು ಕೇವಲ ನಟನೆ ಮಾತ್ರವಲ್ಲದೆ ಹಲವಾರು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ,
ಸದ್ಯಕ್ಕೆ ಸುಂದರ್ ಅವರು ಬ್ರಹ್ಮಗಂಟು ಹಾಗೂ ಬಯಸದೆ ಬಳಿಬಂದೆ ಎಂಬ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆ ಆದರು ಮದುವೆ ನಂತರ ವೀಣಾ ಅವರು ತಮ್ಮ ಹೆಸರಿನ ಜೊತೆ ಪತಿಯ ಹೆಸರನ್ನು ಸೇರಿಸಿಕೊಂಡರು ಈ ಕಲಾ ದಂಪತಿಗಳು ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ ಹಾಗೂ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ದಂಪತಿಗಳಾಗಿ ಅಭಿನಯಿಸಿದ್ದಾರೆ ಇನ್ನು ಇವರು ಸುವ್ವಿ ಎಂಬ ನಾಟಕ ಸಂಸ್ಥೆಕೂಡ ನಡೆಸುತ್ತಿದ್ದು ನಮ್ಮ ದೇಶದಲ್ಲಿ ಮಾತ್ರವಲ್ಲದೇ ಅಮೆರಿಕ, ಸಿಂಗಪುರ ಇನ್ನೂ ಹಲವಾರು ದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ. ಇನ್ನು ಈ ದಂಪತಿಗಳಿಗೆ ಅನಘ್ಯ ಮತ್ತು ಅಭಿಗ್ನ ಎಂಬ ಎರಡು ಮುದ್ದಾದ ಮಕ್ಕಳು ಇದ್ದಾರೆ. ಅತ್ತೆ, ಅಮ್ಮ, ಅಜ್ಜಿ ಇನ್ನು ಅನೇಕ ಪಾತ್ರಗಳಲ್ಲಿ ಅಭಿನಯಿಸಿರುವ ವೀಣಾ ಸುಂದರ್ ಅವರು ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ.
