ಬಿಗ್ ಬಾಸ್ ಖ್ಯಾತಿಯ ಅಯ್ಯಪ್ಪರನ್ನು ಕಂಡರೆ ಆಗದ ಅನು ಪೂವಮ್ಮ ಅವರನ್ನೇ ಮದುವೆ ಆಗಲು ಕಾರಣ ಏನು ಗೊತ್ತಾ? ಇಲ್ಲಿದೆ ಸತ್ಯ - Karnataka's Best News Portal

ಬಿಗ್ ಬಾಸ್ ಕನ್ನಡ ಸೀಸನ್ 3′ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಕ್ರಿಕೆಟ್ ಎನ್‌ಸಿ ಅಯ್ಯಪ್ಪ ನಟಿ ಅನು ಪೂವಮ್ಮ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನು ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳಿಂದ ಅವರು ಬಣ್ಣದ ಲೋಕದಿಂದ ದೂರವಿದ್ದಾರೆ. ಇನ್ನು ಈ ಜೋಡಿ ಚಂದು ಬಿ ಗೌಡ ನಟನೆಯ ‘ಚಾಟ್‌ ಕಾರ್ನರ್’ ಶೋನಲ್ಲಿ ಭಾಗವಹಿಸಿದ್ದು ಆಗ ಇವರಿಬ್ಬರು ಪ್ರೀತಿ, ಮದುವೆ ವಿಷಯ, ಯಾವ ಕಾರಣಕ್ಕೆ ಜಗಳ ಆಡುತ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಅಯ್ಯಪ್ಪ ಹಾಗೂ ಅನು ಅವರದ್ದು ಲವ್ ಮ್ಯಾರೇಜ್. ಆರಂಭದಲ್ಲಿ ಅನುರಿಗೆ ಅಯ್ಯಪ್ಪ ಕಂಡರೆ ಆಗುತ್ತಿರಲಿಲ್ಲವಂತೆ. ಮೊದ ಮೊದಲು ಅಯ್ಯಪ್ಪ ಮೆಸೇಜ್‌ಗೆ ಅನು ಉತ್ತರ ನೀಡುತ್ತಿರಲಿಲ್ಲ, ಕೆಲವೊಮ್ಮೆ ಅವರು ಅಯ್ಯಪ್ಪ ಮೆಸೇಜ್‌ಗೆ ಉತ್ತರ ಕೊಡಲು ಇಷ್ಟವಿಲ್ಲದೆ ನಂಬರ್ ಬ್ಲಾಕ್ ಮಾಡುತ್ತಿದ್ದರು.


ಅನು ಆಟಿಟ್ಯೂಡ್‌ ತೋರಿಸುತ್ತಿದ್ದರು ಎಂದು ಅಯ್ಯಪ್ಪ ಅವರೇ ಹೇಳಿದ್ದಾರೆ. 2017ರ ಜನವರಿ 1ರಂದು ಹೊಸ ವರ್ಷಕ್ಕೆ ಅನುರಿಗೆ ಶುಭಾಶಯ ತಿಳಿಸಿದ ಮೊದಲ ಹುಡುಗ ಅಯ್ಯಪ್ಪ. ಎಷ್ಟೇ ಸಲ ಅಯ್ಯಪ್ಪ ಅನುರನ್ನು ಭೇಟಿಯಾಗಲು ಯೋಜನೆ ಹಾಕಿಕೊಂಡಿದ್ದರೂ ಕೂಡ ಅನು ಮಾತ್ರ ಬರುತ್ತಿರಲಿಲ್ಲ. ಇನ್ನು ಅನು ತಾಯಿಗೆ ಅಯ್ಯಪ್ಪ ಅಂದರೆ ತುಂಬ ಇಷ್ಟ. ಅನು ತಾಯಿ ಬಿಗ್ ಬಾಸ್‌ ಶೋ ಮೂಲಕ ಅಯ್ಯಪ್ಪ ಅವರ ಅಭಿಮಾನಿಯಾಗಿದ್ದರಂತೆ. 20 ವರ್ಷದಿಂದ ಒಂದೇ ನಂಬರ್ ಇಟ್ಟುಕೊಂಡಿರುವ ಅಯ್ಯಪ್ಪ
‘ಕಳೆದ 20 ವರ್ಷದಿಂದ ಅಯ್ಯಪ್ಪ ಒಂದೇ ಫೋನ್ ನಂಬರ್ ಇಟ್ಟುಕೊಂಡಿರೋದು ನನಗೆ ಬೇಸರ ತರಿಸುವ ವಿಷಯ. ಅಯ್ಯಪ್ಪ ಬಗ್ಗೆ ಯಾರೂ ಏನೇ ಹೇಳಿದರೂ ಕೂಡ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಅಯ್ಯಪ್ಪ ಹೊರಗಡೆ ಕಾಣಿಸಿಕೊಳ್ಳುವುದು, ಅವರು ಇರುವುದು ಬೇರೆ.

By admin

Leave a Reply

Your email address will not be published. Required fields are marked *