ಬಾಳೆಹಣ್ಣನ್ನು ರಾತ್ರಿಹೊತ್ತು ಸೇವಿಸುವುದು ಒಳ್ಳೆಯದ ಕೆಟ್ಟದ್ದ.... - Karnataka's Best News Portal

ವರ್ಷವಿಡಿ ಸಿಗುವ ಅಗ್ಗದ ಎಲ್ಲ ಬಗೆಯ ಪೋಷಕಾಂಶಗಳನ್ನು ಹೊಂದಿರುವ ಆಹಾರವೆಂದರೆ ಬಾಳೆಹಣ್ಣು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನುವುದು ಒಳ್ಳೆಯದು ಆದರೆ ರಾತ್ರಿ ಊಟದ ಬಳಿಕ ಸೇವಿಸಬಹುದೆ ತಿಳಿಯಲು ಇದನ್ನು ಓದಿ ಬಾಳೆಹಣ್ಣನ್ನು ಜಗತ್ತಿನ ಎಲ್ಲಾ ದಿನಗಳಲ್ಲಿ ಸುಲಭವಾಗಿ ದೊರೆಯುವ ಫಲವಾಗಿದೆ ಬಾಳೆಹಣ್ಣಿನಲ್ಲಿ ಹೇರಳವಾದ ವಿಟಮಿನ್, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪೊಟಾಸಿಯಂ, ಕರಗುವ ನಾರು, ಕರಗದ ನಾರು ಸಮೃದ್ಧವಾಗಿದ್ದು ಇದುಯ ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ಕರುಳಿನಲ್ಲಿ ಜೀರ್ಣಗೊಳ್ಳುತ್ತಿರುವ ಆಹಾರ ಚಲನೆಯನ್ನು ಸುಲಭಗೊಳಿಸುತ್ತದೆ. ಇನ್ನು ಹಲವಾರು ಲಾಭಗಳು ಬಾಳೆಹಣ್ಣಿನ್ನು ಸೇವಿಸುವುದರಿಂದ ದೊರೆಯುತ್ತದೆ ಹಾಗಾದರೆ ಇಷ್ಟೆಲ್ಲ ಲಾಭದಾಯಕ ಬಾಳೆಹಣ್ಣನ್ನು ರಾತ್ರಿ ಸೇವಿಸಬಹುದೆ ಎಂದರೆ ನಮ್ಮಲ್ಲಿ ಹಲವರಿಗೆ ರಾತ್ರಿ ಊಟದ ನಂತರ ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆ ಆದರೆ ಇದು ತಪ್ಪು ಎನ್ನಲು ಸಾಧ್ಯವಿಲ್ಲ ಕೆಲವು ಆರೋಗ್ಯ ಸಮಸ್ಯೆ ಇರುವವರು ರಾತ್ರಿಹೊತ್ತು ಬಾಳೆಹಣ್ಣು ಸೇವಿಸಬಾರದು

ನೆಗಡಿ, ಕೆಮ್ಮು, ಅಸ್ತಮಾ, ಉಸಿರಾಟದ ತೊಂದರೆ ಇರುವವರು ಬಾಳೆಹಣ್ಣು ಸೇವಿಸಬಾರದು ಬಾಳೆಹಣ್ಣು ರಾತ್ರಿಹೊತ್ತು ಸೇವಿಸಿದ್ದರಿಂದ ಕಫಾದ ಉತ್ಪಾದನೆ ಹೆಚ್ಚುತ್ತದೆ ಮತ್ತು ಗಂಟಲು ಕಟ್ಟುವುದು ಜಾಸ್ತಿ ಅಲ್ಲದೆ ಬಾಳೆಹಣ್ಣು ಹೊಟ್ಟೆಯನ್ನು ತುಂಬಿಸುವ ಆಹಾರವಾಗಿದ್ದು ಇದನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಹೆಚ್ಚಿನ ಸಮಯ ಅಗತ್ಯವಿರುತ್ತದೆ ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರೂ ಅಂತವರು ಬಾಳೆಹಣ್ಣನ್ನು ರಾತ್ರಿಹೊತ್ತು ಸೇವಿಸಬಾರದು. ಇನ್ನು ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿಹೊತ್ತು ಬಾಳೆಹಣ್ಣು ಸೇವಿಸಬಾರದು ಆಯುರ್ವೇದದ ಪ್ರಕಾರ ಯಾವುದೇ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸುವುದು ಒಳ್ಳೆಯದಲ್ಲ ಇದರಿಂದ ಕಫಾದ ಸಾಧ್ಯತೆ ಹೆಚ್ಚುತ್ತದೆ. ಪ್ರತಿದಿನ ಬಾಳೆಹಣ್ಣನ್ನು ಮಧ್ಯಾಹ್ನ ಊಟದ ನಂತರ ಸೇವನೆ ಮಾಡಿ ಇದರಿಂದ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ.

By admin

Leave a Reply

Your email address will not be published. Required fields are marked *