ಬಿಳಿ ಕೂದಲು, ತಲೆ ಕೂದಲು ಉದುರುವ ಸಮಸ್ಯೆಗಳಿದ್ಯಾ ಹಾಗಿದ್ದರೆ ಈಗಲೇ ಈ ವಿಡಿಯೋ ನೋಡಿ. ಸೂಪರ್ ಮನೆ ಮದ್ದು. - Karnataka's Best News Portal

ನಾವು ಈ ದಿನ ನಿಮಗೆ ತುಂಬಾ ಉಪಯುಕ್ತವಾದ ಹೋಂ ರೆಮಿಡಿಯನ್ನು ತಂದಿದ್ದೇವೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಉಪಯುಕ್ತವಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಈ ಸಮಸ್ಯೆ ಇದ್ದೇ ಇರುತ್ತದೆ. ಡ್ಯಾಂಡ್ರಫ್ ಇರುವುದು ಮತ್ತು ಕೂದಲು ತುಂಬಾ ಹೊರಟಗಿರುವುದು, ಹೀಗೆ ಹಲವು ಕಾರಣಗಳಿಂದಾಗಿ ಕೂದಲು ಉದುರುತ್ತದೆ, ಆದ್ದರಿಂದ ನಾವು ಹೇಳುವ ಈ ಸ್ಪ್ರೇಯನ್ನು ನೀವು ಮಾಡಿಟ್ಟುಕೊಂಡರೆ ಇದು ನಿಮಗೆ ತುಂಬಾ ಉಪಯುಕ್ತವಾಗುತ್ತದೆ. ಈ ಸ್ಪ್ರೇಯನ್ನು ಮಾಡಲು ಕೇವಲ 2 ಸಾಮಾಗ್ರಿಗಳು ಸಾಕು.*ಹೇರ್ ಸ್ಪ್ರೇ ಮಾಡುವ ವಿಧಾನ*
ಒಂದು ಬಟ್ಟಲಿಗೆ 1 ಟೀ ಚಮಚ ಅಲೋವೆರಾ ಜೆಲ್, ಮತ್ತು 1 ವಿಟಮಿನ್-ಇ ಮಾತ್ರೆ, 1/4 ಕಪ್ ನೀರು ಹಾಕಿ ಎಲ್ಲ ಹೊಂದುವಂತೆ ಮಿಕ್ಸ್ ಮಾಡಿ. ಅಲೋವೆರಾ ಜೆಲ್ ಕೂದಲು ಬೆಳೆಯುವುದಕ್ಕೆ ಸಹಾಯಮಾಡುತ್ತದೆ, ಕೂದಲನ್ನು ಕೋಮಲವಾಗಿ ಇರಿಸುತ್ತೆ, ಕೂದಲು ಉದುರುವುದನ್ನು ಕಡಿಮೆ ಮಾಡುತ್ತೆ .


ಮತ್ತು ಡ್ಯಾಂಡ್ರಫ್ ತೆಗೆದು ಹಾಕುತ್ತೆ.ವಿಟಮಿನ್-ಇ ಟ್ಯಾಬ್ಲೆಟ್ ನಮ್ಮ ಕೂದಲನ್ನು ತುಂಬಾ ವೇಗವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.ತಯಾರಿಸಿದ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಇಟ್ಟುಕೊಳ್ಳಿ. ತಯಾರಿಸಿರುವ ಮಿಶ್ರಣವನ್ನು 3 ರಿಂದ 4 ದಿನದವರೆಗೂ ಬಳಸಬಹುದು.ಇದನ್ನು ಶಾಲೆಗೆ ಹೋಗುವ ಮಕ್ಕಳು ಸಹ ಉಪಯೋಗಿಸ ಬಹುದು ಇದರಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ. *ಉಪಯೋಗಿಸುವ ವಿಧಾನ*
ಮೊದಲಿಗೆ ನೀವು ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ, ನಂತರ ಸ್ಪ್ರೇ ಬಾಟಲಿನ ಸಹಾಯದಿಂದ ಕೂದಲಿಗೆ ಮಿಶ್ರಣವನ್ನು ಹಚ್ಚಿಕೊಂಡು ದಿನನಿತ್ಯದಂತೆ ನೀವು ಕೂದಲನ್ನು ಬಾಚಿಕೊಂಡು ನಿಮ್ಮ ಕೆಲಸ ಕಾರ್ಯಗಳಿಗೆ ಹೋಗಬಹುದು.

By admin

Leave a Reply

Your email address will not be published. Required fields are marked *