ಪುದೀನ ಸೊಪ್ಪನ್ನು ಈ ರೀತಿ ಸುಲಭವಾಗಿ ಮನೆಯಲ್ಲೇ ಬೆಳೆದು ನಿತ್ಯ ಅಡುಗೆಗೆ ಬಳಸಿ..ಸಿಂಪಲ್ ಕಣ್ರೀ ವಿಡಿಯೋ ನೋಡಿ - Karnataka's Best News Portal

ಪುದೀನ ಸೊಪ್ಪನ್ನು ಈ ರೀತಿ ಸುಲಭವಾಗಿ ಮನೆಯಲ್ಲೇ ಬೆಳೆದು ನಿತ್ಯ ಅಡುಗೆಗೆ ಬಳಸಿ..ಸಿಂಪಲ್ ಕಣ್ರೀ ವಿಡಿಯೋ ನೋಡಿ

ನಮ್ಮ ದೈನಂದಿನ ಹಲವಾರು ಅಡಿಗೆಗಳಲ್ಲಿ ನಾವು ಪುದೀನ ಸೊಪ್ಪನ್ನು ಬಳಸುತ್ತೇವೆ. ಪುದೀನ ಸೊಪ್ಪು ಬಳಸಿ ಮಾಡುವ ಅಡುಗೆಯೂ ತುಂಬಾ ರುಚಿಯಾಗಿರುತ್ತದೆ ಮತ್ತು ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಹಾಗಾದರೆ ಈ ಪುದೀನ ಸೊಪ್ಪನ್ನು ನೀವು ಮನೆಯಲ್ಲಿಯೇ ಹೇಗೆ ಈಸಿಯಾಗಿ ಬೆಳೆಯಬಹುದು ಎಂಬುದನ್ನು ನಾವಿಲ್ಲಿ ತಿಳಿಸುತ್ತೇವೆ. ನಿಮ್ಮ ಅಡಿಗೆಗೆ ಬಳಸಲು ಮಾರ್ಕೆಟ್ ನಿಂದ ನೀವು ಪುದೀನಾ ಸೊಪ್ಪನ್ನು ತಂದಿರುತ್ತೀರ ಅದರಲ್ಲಿ 7 ರಿಂದ 10 ಪುದೀನ ಕಡ್ಡಿಯಷ್ಟು ತೆಗೆದುಕೊಳ್ಳಿ, ನಂತರ ಅದರ ಕೆಳ ಭಾಗದಲ್ಲಿರುವ ಎರಡ ರಿಂದ ಮೂರು ಎಲೆಗಳನ್ನು ತೆಗೆಯಿರಿ ನಂತರ ಒಂದು ಬಾಕ್ಸ್ ತೆಗೆದುಕೊಂಡು ಮೇಲಿರುವ ಮುಚ್ಚಳದಲ್ಲಿ ಹೋಲ್ ಮಾಡಿಕೊಳ್ಳಿ ಪುದಿನ ಕಡ್ಡಿ ಎಷ್ಟಿದೆ ಅಷ್ಟು ಮಾಡಿಕೊಳ್ಳಿ. ಪುದೀನ ಕಡ್ಡಿ ಒಳಗೆ ಹೋಗುವಷ್ಟು ಮಾಡಿದರೆ ಸಾಕು ನಂತರ ಮಾಡಿರುವ ಹೊಲ್ ಗಳಿಗೆ ಪುದಿನ ಕಡ್ಡಿಯನ್ನು ಹಾಕಿ ಕೆಳಗೆ ಸಮವಾಗಿ ಮಾಡಿಕೊಳ್ಳಿ,

ಬಾಕ್ಸ್ ಗೆ ನೀರನ್ನು ಹಾಕಿ ಕಡ್ಡಿಯ ನೀರಿನಲ್ಲಿ ಮುಳುಗುವಷ್ಟು ನೀರು ತುಂಬಿರಬೇಕು ನಂತರ ಮುಚ್ಚಳವನ್ನು ಮುಚ್ಚಿ. ಒಂದು ವಾರದ ನಂತರ ಆ ಕಡ್ಡಿಯಲ್ಲಿ ಬೇರು ಬಿಡಲು ಶುರು ಮಾಡುತ್ತದೆ. ಸುಮಾರು 20 ದಿನದ ನಂತರ ಪುದಿನಾ ಎಲೆಗಳು ತುಂಬಾ ಚನ್ನಾಗಿ ಬೆಳೆದಿರುತ್ತವೆ ಮತ್ತು ಅದರ ಬೇರು ಸಹ ತುಂಬಾ ಚೆನ್ನಾಗಿರುತ್ತದೆ. ನಂತರ ನೀವು ಅದನ್ನು ಕಟ್ ಮಾಡಿ ಯೂಸ್ ಮಾಡಬಹುದು ನೀವು ಕಟ್ ಮಾಡಿರುವ ಜಾಗದಲ್ಲಿ ಮತ್ತೆ ಪುದೀನ ಎಲೆಗಳು ಬರಲು ಶುರು ಮಾಡುತ್ತದೆ ನೀವು ಬಾಕ್ಸ್ ನಲ್ಲಿ ಇರುವ ನೀರನ್ನು ಮೂರರಿಂದ ದಿನಗಳಿಗೊಮ್ಮೆ ಬಾಕ್ಸ್ ನೀರನ್ನು ಚೇಂಜ್ ಮಾಡುತ್ತಿರಬೇಕು.

WhatsApp Group Join Now
Telegram Group Join Now
See also  ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ...


crossorigin="anonymous">